ಗಿರಿ ಶಿಖರ ಏರಿದವರು

ಗಿರಿ ಶಿಖರ ಏರಿದವರು

ಗಿರಿ ಶಿಖರ ಏರಿದವರು

ಡಾ. ಗವಿಸಿದ್ದಪ್ಪ ಪಾಟೀಲ ಅವರು ಕಲ್ಯಾಣ ಕರ್ನಾಟಕದ ಹೆಮ್ಮೆಯ ಬರಹಗಾರ, ಲೇಖಕ, ಕವಿ, ಸಾಹಿತಿ, ವಿಮರ್ಶಕರಾದಂತೆ ಒಳ್ಳೆಯ ಸಂಘಟಕರು.

ಈಗಾಗಲೇ ಸಾಹಿತ್ಯ ಕ್ಷೇತ್ರದ ಅನೇಕ ಆಯಾಮಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ.

ಬೇಲೂರದಂತಹ ಗಡಿ ಪ್ರದೇಶದಲ್ಲಿ ಸಸ್ತಾಪುರದಂತಹ ಸಣ್ಣ ಹಳ್ಳಿಯಲ್ಲಿ ಸಾವಿರಾರು ಜನರನ್ನು ಸೇರಿಸಿ ಸಮ್ಮೇಳನಗಳನ್ನು ಮಾಡಿ ಸಮ್ಮೇಳನದ ರೂವಾರಿಯಾಗಿದ್ದಾರೆ. ಅವರ ಎಲ್ಲ ಬರಹಗಳು ಸಮಾಜಮುಖಿಯಾಗಿವೆ.

ಬದುಕಿನ ನಾನಾ ಘಟ್ಟಗಳ ಏರಿಳಿತದ ಮಧ್ಯ ಸಮತೋಲನ ಕಾಪಾಡಿಕೊಂಡು

ಸೃಜನಶೀಲ ಬರಹಗಾರರು.

ಗಿರಿಶಿಖರ ಏರಿದವರು "ಈ ಕೃತಿಯಲ್ಲಿ ೨೨ ಲೇಖನಗಳಿವೆ. ಬುದ್ಧನಿಂದ ಹಿಡಿದು ಉಬಮಾ ಅವರ ತನಕ ಅವರ ಓದು ಅಧ್ಯಯನ ಬರವಣಿಗೆಯ ಶಿಸ್ತು ನಾವು ಕಾಣುತ್ತೇವೆ. ಇಲ್ಲಿ ಮೂರು ಜನ ಸ್ವಾಮೀಜಿಗಳ ಪರಿಚಯ ಸೇರಿದಂತೆ ಚನ್ನಬಸಪ್ಪ ಬೆಟ್ಟದೂರು, ಬರಗೂರು ರಾಮಚಂದ್ರಪ್ಪ, ಚೆನ್ನಣ್ಣ ವಾಲೀಕಾರ, ಕಾಶಿನಾಥ ಅಂಬಲಗಿ, ಭಾಲಚಂದ್ರ ಜಯಶೆಟ್ಟಿ ಅವರಂತಹ ಹಲವಾರು ಬರಹಗಾರರ, ವಿದ್ವಾಂಸರ, ಶಿಕ್ಷಣ ತಜ್ಞರ ಹಗೂ ಕನ್ನಡ ಕಟ್ಟಿದ ಮಹನೀಯರ ಜೊತೆಗೆ ಇನ್ನೂ ಬರವಣಿಗೆಗೆ ತೊಡಗಿಸಿಕೊಂಡ ಯುವ ಬರಹಗಾರರ ಮೇಲೆ ಬೆಳಕು ಚೆಲ್ಲುವ ಲೇಖನಗಳಾಗಿವೆ. ಇವೆಲ್ಲ ಪಿಎಚ್.ಡಿ. ಮಹಾಪ್ರಬಂಧದ ವಸ್ತುಗಳಾಗಿದ್ದು, ಅತ್ಯಂತ ಸರಳ ಆಯಾ ಪ್ರದೇಶ, ಕಾಲ, ಪರಿಸರ ಸನ್ನಿವೇಶಗಳನ್ನು ಒಳಗೊಂಡ ಚರಿತ್ರೆ ನಿರ್ಮಾಣದ ಹೊತ್ತಿಗೆ, ಈ ಬರಹಗಳು ಪ್ರೇರಣೆ ನೀಡಿವೆ.

ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2023ರಲ್ಲಿ ಪ್ರಕಟಗೊಂಡ ಈ ಕೃತಿಯಲ್ಲಿ 184ಪುಟಗಳಿದ್ದು 190 ಬೆಲೆ ನಿಗದಿಪಡಿಸಲಾಗಿದೆ.

ಡಾ. ಶರಣಬಸಪ್ಪ ವಡ್ಡನಕೇರಿ