ಶಿವರಾಮ ಕಾರಂತರ ಆಯ್ದ ಮಕ್ಕಳ ಸಾಹಿತ್ಯ

ಶಿವರಾಮ ಕಾರಂತರ ಆಯ್ದ ಮಕ್ಕಳ ಸಾಹಿತ್ಯ

ಕೃತಿ: ಶಿವರಾಮ ಕಾರಂತರ ಆಯ್ದಮಕ್ಕಳ ಸಾಹಿತ್ಯ 

1934-37ರ ಅವಧಿಯಲ್ಲಿ ಮಕ್ಕಳ ಸರ್ವೋತ್ತೋಮುಖ ಜ್ನ್ಯಾನದ ವಿಕಾಸಕ್ಕಾಗಿ ಅವರು ರಚಿಸಿದ್ದ ""ಬಾಲಪ್ರಪಂಚ"" ವೆಂಬ ಮೂರು ಬ್ರಹತ್ ಸಂಪುಟಗಳು ಇಂದಿಗೂ ಕನ್ನಡ ಭಾಷೆಯಲ್ಲಿ ಅದ್ವಿತೀಯ ಮುದ್ರಣಗೊಂಡಿದೆ. ಓದುಗರಿಗೆ ಕಾರಂತರು ಕೊಟ್ಟಿದ್ದ ಈ ಮಕ್ಕಳ ಸಾಹಿತ್ಯ ಮಕ್ಕಳ ವಿಕಸನದ ಪ್ರತೀಕವಾಗಿ ಕೂಡಿರುವುದನ್ನು ಅವರು ಅರಿಸಿಕೊಂಡಿದ್ದ ಕತೆಗಳು ತಿಳಿಸುತ್ತವೆ.

ಶಿವರಾಮ ಕಾರಂತರು ತಮ್ಮ ಸೃಜನಶೀಲ ಸಾಹಿತ್ಯಕಷ್ಟೇ ತಮ್ಮ ಬರವಣಿಗೆಯನ್ನು ಸೀಮಿತಗೊಳಿಸದೆ ಅನ್ಯದೇಶ ಅನ್ಯಭಾಷೆಗಳಲ್ಲಿ ಉದಯಿಸಿದ ಮಕ್ಕಳ ಸಾಹಿತ್ಯದ ಸಧುಭಿರುಚಿಯ ಸೊಗಸನ್ನು ಕನ್ನಡಕ್ಕೆ ಅನುವಾದ ಮಾಡಿ ಕನ್ನಡ ಮಕ್ಕಳಿಗೆ ಉಣಬಡಿಸಿದ್ದಾರೆ.

""ಶ್ರೀಮತಿ ಬಿ ಮಾಲನಿ" ಯವರ ಸಂಪಾದನೆ ಕೃತಿಯಾದ ""ಶಿವರಾಮ ಕಾರಂತರ ಆಯ್ದ ಮಕ್ಕಳ ಸಾಹಿತ್ಯ ಕೃತಿಯಲ್ಲಿ ಇಂದಿನ ಮಕ್ಕಳಿಗೂ ರುಚಿಸಬಲ್ಲ ಸಂಸ್ಕೃತ ಸಾಹಿತ್ಯದಿಂದ ಆರಿಸಿದ "ಕಿನ್ನರ ಕಥೆ" ಯಕ್ಷಣಿ ಪಾತ್ರವೆಂಬ ಕಿರುಗತೆಯಲ್ಲಿ ಬರುವ ಸನ್ನಿವೇಶ ಹಾಗು ಅತೀಯಾಸೆಯ ಪರಿಣಾಮ ಆಗುವ ಅವಘಡದ ಕುರಿತು ಲೇಖನದಲ್ಲಿ ವಿವರಿಸಲಾಗಿದೆ.

ಅರೇಬಿಯನ್ ನೈಟ್ ಸಾವಿರದ ಒಂದು ಕಥೆಗಳು ಎಂಬ ಕಥಾಮಾಲಿಕೆಯ ಕಥೆಗಳಲ್ಲೊಂದಾದ ""ಅಬ್ಭುಹಸನ್""ಕುರಿತು ಮಕ್ಕಳನ್ನು ಮುಗ್ದಗೊಳಿಸುವ ಕಥೆಗಳಲ್ಲಿ ಇದು ಒಂದು ಯಂದು ಹೇಳಬಹುದು.

ಮಕ್ಕಳ ಮನಸ್ಸಿಗೆ ಪಕ್ಷಿ, ಪ್ರಾಣಿಗಳು ಅತೀವ ಆಸಕ್ತಿದಾಯಕ ಆಕರ್ಷಕ ಜೀವಿಗಳೆoಬ ಅರಿವಿದ್ದ ಕಾರಂತರು ಚೀನಾದೇಶದ ಒಂದು ಕಥೆ ""ಬುಲ್ ಬುಲ್ "" ಎಂಬ ಹಕ್ಕಿಯ ಕುರಿತಾದ ಬರಹವನ್ನು ತಮ್ಮ ಬಾಲ ಪ್ರಪಂಚ ಕೃತಿಯಲ್ಲಿ ಪ್ರಕಟಿಸುವದರೊಂದಿಗೆ ಮಕ್ಕಳ ಮನಸ್ಸನ್ನು ಗೆಲ್ಲುವ ಕೆಲಸ ಮಾಡಿದ್ದಾರೆ ಅನ್ನಬಹುದು.

""ತೂಕಡಿಕೆ"" ಅನ್ನುವ ಕತೆ ಮಕ್ಕಳ ಮೇಲಿನ ಶೋಷಣೆಯ ಒಂದು ಮುಖವನ್ನು ಅನಾವರಣ ಮಾಡುವಂಥ ಕತೆಯಾಗಿದೆ.

ಗುಡುಗು, ಮಿಂಚು ಮಳೆ ಗಾಳಿ ಮುಂತಾದ ಪ್ರಾಕರ್ತೀಕ ವಿದ್ಯಾಮಾನಗಳು ಮಕ್ಕಳ ಎದೆ ನಡುಗಿಸುವಂತ ಅವರಲ್ಲಿ ಭಯ ಭೀತಿಗಳನ್ನು ಹುಟ್ಟಿಸುವಂತ ಕತೆಯಾಗಿದ್ದರೂ ಆ ಗುಡಗನ್ನೇ ಸೋಲಿಸಿ ಸೆರೆಹಿಡಿದ ಸಾಹಸಿಗನ ಕತೆ ""ಗುಡುಗಿನ ಗಂಡ"" ಕತೆಯಲ್ಲಿ ಅಡಕವಾಗಿದ್ದು ಈ ಸಾಹಸ ಕತೆ ಮಕ್ಕಳಿಗೆ ಪ್ರೇರಣಾದಾಯಕವಾಗಿದೆ.

""ಡಾನ್ ಕ್ವೀಕ್ಷಟಿಯ"" ಸಾಹಸಮಯ ಕಥೆಯಾಗಿದ್ದು ಓದುತ್ತ ಹೋದರೆ ಹಾಸ್ಯಪ್ರಸಂಗ ಸನ್ನಿವೇಶಗಳು ಈ ಕಥೆ ತೆರೆದಿಡುತ್ತದೆ.

""ಸಾವಿರ ಮಿಲಿಯ"" ನಾಟಕ ಮದ್ಯಪಾನದಿಂದ ಆಗುವ ಅನಾಹುತಗಳನ್ನು ಚಿತ್ರೀಸುತ್ತದೆ.

""ಮಹಾಕವಿ ಕಾಳಿದಾಸನ"" ಕಥಾನಾಟಕ, ಗೊಂಬೆಯ ಮನೆ, ಹಾಗು ದಿ ಗೋಲ್ಡನ್ ಡೋಮ್"' ನಾಟಕದ ಕನ್ನಡ ಅನುವಾದ ಮೂಢನಂಬಿಕೆಯಿಂದ ಮನುಷ್ಯ ಹೇಗೆ ಮನುಷ್ಯ ಹೇಗೆ ಕೆಂಗಡುತ್ತಾನೆ ಅನ್ನುವದನ್ನು ಮಾರ್ಮಿಕಾವಾಗಿ ತಿಳಿಸುತ್ತದೆ .

ಸಂಪಾದಕರು: ಬಿ.ಮಾಲಿನಿ.ಮಲ್ಯ

ಪ್ರಕಾಶಕರು: ವಸಂತ ಪ್ರಕಾಶನ ಬೆಂಗಳೂರು. 

ಬೆಲೆ:100

ಮುದ್ರಣ ವರ್ಷ : 

ಓಂಕಾರ ಪಾಟೀಲ

(ಕಾರ್ಯದರ್ಶಿಗಳು :-ಮಕ್ಕಳ ಸಾಹಿತ್ಯ ಪರಿಷತ್ ಬೀದರ ಮೊ. 6360413933)