ಬಿ.ಜಿ.ಪಾರ್ವತಿ ವಿ. ಸೋನಾರೆ

ಬಿ.ಜಿ.ಪಾರ್ವತಿ ವಿ. ಸೋನಾರೆ

ಶ್ರೀಮತಿ ಬಿ.ಜಿ.ಪಾರ್ವತಿ ವಿ. ಸೋನಾರೆ

ಕಲ್ಯಾಣ ಕರ್ನಾಟಕದ ಮಹಿಳಾ ಸಾಹಿತಿಗಳ ಹೆಸರಿನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಹೆಸರು ಶ್ರೀಮತಿ ಬಿ. ಜಿ.ಪಾರ್ವತಿ ವಿ. ಸೋನಾರೆ . ಇವರು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಡಚಣದ ಹತ್ತಿರದ ಕೊಂಕಣಗಾoವ ಗ್ರಾಮದಲ್ಲಿ ಜನಿಸಿದರು.ಇವರ ತಂದೆ ಜಟಿಂಗರಾಯ ಡಫಳಾಪುರ ತಾಯಿ ಭೀಮಾಬಾಯಿ ಡಫಳಾಪುರ, ಸ್ನಾತಕೋತ್ತರ ಪದವೀಧರರಾದ ಶ್ರೀಮತಿ ಪಾರ್ವತಿಯವರು ಬೀದರನ ಸಾoಸ್ಕೃತಿಕ ಸಂಘಟಕರಾದ ಶ್ರೀ ವಿಜಯಕುಮಾರ ಸೋನಾರೆಯವರ ಪತ್ನಿಯಾಗಿದ್ದು ಅವರ ಪ್ರತಿಯೊಂದು ಸಾಹಿತಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿ ನಿಂತು ಬೀದರ ನಲ್ಲಿ ಒಂದು ಉತ್ತಮವಾದ ಸಾಂಸ್ಕೃತಿಕ ವಾತಾವರಣವನ್ನು ನಿರ್ಮಿಸುವಲ್ಲಿ ಶ್ರೀಮತಿ ಪಾರ್ವತಿ ಸೋನಾರೆ ಅವರ ಪಾತ್ರ ಮುಖ್ಯವಾಗಿದೆ.ಪ್ರಸ್ತುತ ಅವರು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಕನ್ನಡಪ್ರಭ ಮತ್ತು ಉದಯಕಾಲ ಪತ್ರಿಕೆ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಇವರು ಬರೆದ ಅನೇಕ ಲೇಖನಗಳು ಪ್ರಟಗೊಂಡಿವೆ. ಅಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿ ನಡೆಸಿದ ಚಕೋರ ವೇದಿಕೆಯ ಜಿಲ್ಲಾ ಸಂಚಾಲಕಿಯಾಗಿ ಮತ್ತು ಜಿಲ್ಲಾ ಲೇಕಖಿಯರ ಸಂಘದ ಕಾರ್ಯದರ್ಶಿಯಾಗಿ ಹಾಗೂ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆಯಾಗಿ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾರೆ. 

ಪ್ರಕಟಗೊಂಡ ಕೃತಿಗಳು

ನಾವಿಬ್ಬರು-ಕವನ ಸಂಕಲನ, ಭವರಿ- ಕಥಾಸಂಕಲನ, ಅವ್ವಾ ನೀ ಸಾಯಬಾರದಿತ್ತು- ಕಥಾಸಂಕಲನ, ಓಡಿ ಹೋದಾಕಿ -ಕಾದಂಬರಿ ನಿಜಶರಣ ಅಂಬಿಗರ ಚಾಡಯ್ಯನವರ ವಚನಗಳ ಭಾವಾರ್ಥ ಮತ್ತು ಜೀವನ, ಅಪ್ಪನೊಳಗೊಬ್ಬ ಅವ್ವ- ಸಮಾಜಮುಖಿ ಲೇಖನಗಳ ಸಂಕಲನ.

ಪ್ರಶಸ್ತಿ ಪುರಸ್ಕಾರ, ಸನ್ಮಾನಗಳು

ಶ್ರೀಮತಿ ಪಾರ್ವತಿ ಸೋನಾರೆಯವರ ಸಾಹಿತ್ಯ ಮತ್ತು ಸಾಂಸಕೃತಿಕ ಚಟುವಟಿಕೆಗಳನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ,,ಪುರಸ್ಕಾರಗಳನ್ನು ನೀಡಿ ಗೌರವಿಸುವೆ.

2011ರಲ್ಲಿ "ದ ಬ್ಲೆಂಡ್‌ಫೇತ್ " ಕಿರುಚಿತ್ರದ ನಟನೆಗಾಗಿ "Excellent Actor" ಎಂಬ ಪ್ರಶಸ್ತಿ ದೊರೆತಿದೆ. 2016 ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಕಲಬುರ್ಗಿ ವಿ.ವಿ. "ದಿ. ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ" ಪ್ರಶಸ್ತಿ ಪಡೆದು ಚಿನ್ನದ ಪದಕ ಮುಡಿಗೇರಿಸಿಕೊಂಡರು. 2015ರಲ್ಲಿ ದೇಶಪಾಂಡೆ ಪ್ರತಿಷ್ಠಾನದಿಂದ "ಕವಯಿತ್ರಿ ಕಲಾರತ್ನ" ಪ್ರಶಸ್ತಿ, 2016ರಲ್ಲಿ ಶಾರದಾ ಪ್ರತಿಷ್ಠಾನದಿಂದ "ಡಾ ಅಂಬೇಡ್ಕರ್" ಪ್ರಶಸ್ತಿ, 2017ರಲ್ಲಿ "ಕಥಾರತ್ನ" ಪ್ರಶಸ್ತಿ. 2018ರಲ್ಲಿ ಅಕ್ಕ ಸಾಹಿತ್ಯಕ ಸಾಂಸ್ಕೃತಿಕ ಪ್ರತಿಷ್ಠಾನದಿಂದ "ಅಕ್ಕ" ಪ್ರಶಸ್ತಿ, 2018ರಲ್ಲಿ ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನಿಂದ "ಬುದ್ಧ ಬಸವ ಅಂಬೇಡ್ಕರ್" ಪ್ರಶಸ್ತಿ, 2020ನೇ ಸಾಲಿನ ಜಿಲ್ಲಾ ಮಟ್ಟದ "ರಾಜ್ಯೋತ್ಸವ" ಪ್ರಶಸ್ತಿ, 2021ರಲ್ಲಿ ಮಂದಾರ ಕಲಾವಿದರ ವೇದಿಕೆಯಿಂದ "ಕಥಾ ಚಂದ್ರಿಕಾ" ಪ್ರಶಸ್ತಿ ಮುಂತಾದವುಗಳು.

ಡಾ. ಶರಣಬಸಪ್ಪ ವಡ್ಡನಕೇರಿ