ಕಲಬುರಗಿಯಲ್ಲಿ ಇಂದು ರಾತ್ರಿ MOCK DRILL: 8 ರಿಂದ 8:10ರ ವರೆಗೆ ವಿದ್ಯುತ್ ಬ್ಲಾಕ್ ಔಟ್

ಕಲಬುರಗಿಯಲ್ಲಿ ಇಂದು ರಾತ್ರಿ MOCK DRILL: 8 ರಿಂದ 8:10ರ ವರೆಗೆ ವಿದ್ಯುತ್ ಬ್ಲಾಕ್ ಔಟ್

ಕಲಬುರಗಿಯಲ್ಲಿ ಇಂದು ರಾತ್ರಿ MOCK DRILL: 8 ರಿಂದ 8:10ರ ವರೆಗೆ ವಿದ್ಯುತ್ ಬ್ಲಾಕ್ ಔಟ್

ತುರ್ತು ಪರಿಸ್ಥಿತಿಗೆ ಮುನ್ನೆಚ್ಚರಿಕೆ ಕ್ರಮ - ಸಾರ್ವಜನಿಕರ ಸಹಕಾರಕ್ಕೆ ಮನವಿ

ಕಲಬುರಗಿ, ಮೇ 19: ಯುದ್ಧ ಪರಿಸ್ಥಿತಿಯಂತಹ ತುರ್ತು ಸಂದರ್ಭಗಳಲ್ಲಿ ನಡೆಯಬಹುದಾದ ಅನಾಹುತಗಳನ್ನು ಎದುರಿಸುವ ಉದ್ದೇಶದಿಂದ ಇಂದು ಸಂಜೆ MOCK DRILL ಅನ್ನು ನಡೆಸಲಾಗುತ್ತಿದೆ. ಈ drill‌ನ ಭಾಗವಾಗಿ ಇಂದು ರಾತ್ರಿ 8:00ರಿಂದ 8:10ರ ವರೆಗೆ ಕಲಬುರಗಿ ನಗರದಲ್ಲಿ ಸಂಪೂರ್ಣ ವಿದ್ಯುತ್ ಬ್ಲಾಕ್ ಔಟ್ ಮಾಡಲಾಗುವುದು.

ಮಾನ್ಯ ಕೇಂದ್ರ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಈ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಲಾಗಿದೆ. ತುರ್ತು ಸೇವೆಗಳ ಹೊರತು, ಸಾರ್ವಜನಿಕರು ತಮ್ಮ ಮನೆಯಲ್ಲಿರುವ ಇನ್ವರ್ಟರ್ ಹಾಗೂ ಇತರೆ ವಿದ್ಯುತ್ ಉಪಕರಣಗಳನ್ನು ಸಹ ಸ್ಥಗಿತಗೊಳಿಸಿ ಸಹಕರಿಸಬೇಕೆಂದು **ಗು.ವಿ.ಸ.ಕಂ.** ವತಿಯಿಂದ ಕೋರಲಾಗಿದೆ.

MOCK DRILL ಅನ್ನು ಯಶಸ್ವಿಯಾಗಿ ನಡೆಸಲು ನಾಡಿನ ಪ್ರಜೆಗಳ ಸಹಕಾರ ಅತ್ಯಗತ್ಯವಾಗಿದೆ. ಈ ದಿಕ್ಕಿನಲ್ಲಿ ಎಲ್ಲರಿಗೂ ಪೂರ್ವ ಸೂಚನೆ ನೀಡಲಾಗಿದ್ದು, ಸಾರ್ವಜನಿಕರು ಸಹಕಾರ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.