ಚಿಂಚೋಳಿ : ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ತರಲು ಶಿಕ್ಷಣ ಆಯುಕ್ತರಿಗೆ ಮನವಿ

ಚಿಂಚೋಳಿ : ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ತರಲು ಶಿಕ್ಷಣ ಆಯುಕ್ತರಿಗೆ ಮನವಿ

ಚಿಂಚೋಳಿ : ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ತರಲು ಶಿಕ್ಷಣ ಆಯುಕ್ತರಿಗೆ ಮನವಿ 

ಚಿಂಚೋಳಿ : ತಾಲೂಕಿನ ಎಸ್.ಎಸ್.ಎಲ್.ಸಿ ಫಲಿತಾಂಶ ವರ್ಷದಿಂದ ವರ್ಷಕ್ಕೆ ಕುಗ್ಗುತ್ತಲೆ ಸಾಗುತ್ತಿದೆ. ಶಿಕ್ಷಕರು ಹಲವು ವರ್ಷಗಳಿಂದ ಒಂದೇ ಕಡೆಯಲ್ಲಿ ಬಿಡುಬಿಟ್ಟಿದ್ದರಿಂದ. ಅವರು ಶೈಕ್ಷಣಿಕ ಬೋಧನೆಯ ಬಗ್ಗೆ ನಿರ್ಲಕ್ಷ ವಹಿಸುತ್ತಿದ್ದಾರೆ. ಅಂತಹವರನ್ನು ಚಿಂಚೋಳಿ ತಾಲೂಕದಿಂದ ವರ್ಗಾವಣೆಗೊಳಿಸಬೇಕೆಂದು ಆಗ್ರಹಿಸಿ, ಚಿಂಚೋಳಿ ವಕೀಲರ ಸಂಘದ ಅಧ್ಯಕ್ಷ ಶ್ರೀಮಂತ ಬಿ ಕಟ್ಟಿಮನಿ ಅವರು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಾಕ್ಷರತಾ ಇಲಾಖೆಯ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. 

ತಾಲೂಕಿನಲ್ಲಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಕರು ಸೇವೆ ಸಲ್ಲಿಸುತ್ತಿರುವವರನ್ನು ಬೇರೊಂದು ಜಿಲ್ಲೆಗೆ ವರ್ಗಾವಣೆ ಮಾಡಿ, ಅಲ್ಲಿನ ಶಿಕ್ಷಕರಿಗೆ ಚಿಂಚೋಳಿಗೆ ವರ್ಗಾಯಿಸಿದರೆ ಮಾತ್ರ ತಾಲೂಕಿನ ಶೈಕ್ಷಣಿಕ ಗುಣಮಟ್ಟದಲ್ಲಿ ಮತ್ತು ಫಲಿತಾಂಶದಲ್ಲಿ ಬದಲಾವಣೆ ಕಾಣಲು ಸಾಧ್ಯವಿದೆ. ಹೀಗಾಗಿ ಹಲವು ವರ್ಷಗಳಿಂದ ಚಿಂಚೋಳಿಯಲ್ಲಿಯೇ ಬೇರು ಬಿಟ್ಟಿರುವ ಶಿಕ್ಷಕರನ್ನು ವರ್ಗಾಯಿಸಿ ಕುಸಿತ್ತ ಕಂಡಿರುವ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಣೆ ತರಬೇಕೆಂದು ಆಯಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ ಎಂದು ವಕೀಲರ ಸಂಘದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.