ಐತಿಹಾಸಿಕ ಪಾದಯಾತ್ರೆ ಮಾಜಿ ಸಚಿವ ಸುನಿಲ್ ಕುಮಾರ್ ಜೊತೆ ಡಾ. ಪ್ರಣವಾನಂದ ಶ್ರೀ ಚರ್ಚೆ
ಐತಿಹಾಸಿಕ ಪಾದಯಾತ್ರೆ ಮಾಜಿ ಸಚಿವ ಸುನಿಲ್ ಕುಮಾರ್ ಜೊತೆ ಡಾ. ಪ್ರಣವಾನಂದ ಶ್ರೀ ಚರ್ಚೆ
ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕು ಬ್ರಹ್ಮ ಶ್ರೀ ನಾರಾಯಣ ಗುರು ಶಕ್ತಿ ಪೀಠದಿಂದ ಜನವರಿ ಆರರಿಂದ ಬೆಂಗಳೂರು ಫ್ರೀಡಂ ಪಾರ್ಕ್ ವರೆಗೆ ನಡೆಯಲಿರುವ ಐತಿಹಾಸಿಕ 700 ಕಿಲೋಮೀಟರ್ ಪಾದಯಾತ್ರೆಯ ಬಗ್ಗೆ ಮಾಜಿ ಸಚಿವ ಹಾಗೂ ಹಾಲಿ ಕಾರ್ಕಳ ಕ್ಷೇತ್ರದ ಶಾಸಕರರಾದ ಸುನಿಲ್ ಕುಮಾರ್ ಜೊತೆ ಪೀಠಾಧಿಪತಿಗಳಾದ ಡಾ. ಪ್ರವಾನಂದ ಸ್ವಾಮೀಜಿ ಅವರು ಸುದೀರ್ಘ ಮಾತುಕತೆ ನಡೆಸಿ ಐತಿಹಾಸಿಕ ಪಾದಯಾತ್ರೆಯ ಬಗ್ಗೆ ರೂಪುರೇಷೆ ಮಾಹಿತಿ ನೀಡಿದರು.
ಕಾರ್ಕಳದಲ್ಲಿ ನವೆಂಬರ್ 17ರಂದು ಶ್ರೀಗಳು ಶಾಸಕರ ಕಚೇರಿಯಲ್ಲಿ ಭೇಟಿಯಾಗಿ ಐತಿಹಾಸಿಕ ಪಾದಯಾತ್ರೆಯ ಬೇಡಿಕೆ ಹಾಗೂ ಉದ್ದೇಶಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಆಹ್ವಾನ ಪತ್ರ ನೀಡಿದರು , ಪಾದಯಾತ್ರೆ ನಡೆಯುವ ಸಂದರ್ಭದಲ್ಲಿ ಗಂಗಾವತಿಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಚ್ ಜಿ ಶ್ರೀನಾಥ್ ನಡೆಯಲಿರುವ ದೊಡ್ಡ ಮಟ್ಟದ ಬಹಿರಂಗ ಸಭೆಯಲ್ಲಿ ಭಾಗವಹಿಸಲು ಸುನಿಲ್ ಕುಮಾರ್ ಅವರಿಗೆ ಶ್ರೀಗಳು ಆಹ್ವಾನ ನೀಡಿದರು. ಪಾದಯಾತ್ರೆಯಲ್ಲಿ ಒತ್ತಾಯಿಸುವ 18 ಬೇಡಿಕೆಗಳ ಬಗ್ಗೆ ಸುನಿಲ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿ ಸಮಾಜದ ಕಲ್ಯಾಣಕ್ಕಾಗಿ ಅತ್ಯಂತ ಉಪಯುಕ್ತವಾಗಿಇರುವ ಬೇಡಿಕೆಗಳಾಗಿವೆ. ಬಿಜೆಪಿ ಸರಕಾರವಿದ್ದಾಗ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ನಿಗಮ ಹಾಗೂ ಪುರ ಶಾಸ್ತ್ರೀಯ ಅಧ್ಯಯನಕ್ಕೆ ಮಂಜೂರಾಗಿ ನೀಡಲು ಸಮಾಜ ಬಾಂಧವರ ಒಗ್ಗಟ್ಟಿನ ಹೋರಾಟದ ಪ್ರಯತ್ನವನ್ನು ಸುನಿಲ್ ಕುಮಾರ್ ನೆನಪಿಸಿದರು. ಸಮಾಜದ ಕಲ್ಯಾಣಕ್ಕಾಗಿ ನಡೆಸುವ ಯಾವುದೇ ಹೋರಾಟಗಳು ಮತ್ತು ಬೇಡಿಕೆಗಳಿಗೆ ಪೂರ್ಣ ಬೆಂಬಲ ನೀಡುವುದಾಗಿ ಸುನಿಲ್ ಕುಮಾರ್ ಸ್ವಾಮೀಜಿಯವರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಬಿಲ್ಲವ ಈಡಿಗ ಮಹಾಮಂಡಳಿಯ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಕಾಪು , ಐತಿಹಾಸಿಕ ಪಾದಯಾತ್ರೆ ಉಡುಪಿ ಮತ್ತು ಮಂಗಳೂರು ಜಿಲ್ಲೆಗಳ ಜವಾಬ್ದಾರಿ ನಿರ್ವಹಿಸುವ ದಿವಾಕರ್ , ರಾಜ್ಯ ಕಾರ್ಯದರ್ಶಿಯಾದ ಜಯಕುಮಾರ್ , ಅನಿಲ್ ಕುಮಾರ್, ರಾಷ್ಟ್ರೀಯ ಬಿಲ್ಲವ ಈಡಿಗ ಮಹಾಮಂಡಳಿಯ ಉಪಾಧ್ಯಕ್ಷರಾದ ಪ್ರಭಾಕರ್ ಬಂಗೇರ , ದಿವಾಕರ್ ಪೂಜಾರಿ , ಜಯಕುಮಾರ್ ಪರ್ಕಳ ಮತ್ತು ಸಮಾಜದ ಅನೇಕ ಮುಖಂಡರು ಶ್ರೀಗಳ ಜೊತೆ ಉಪಸ್ಥಿತರಿದ್ದರು.
