“ಸೇವಾಶ್ರೀ” ಪ್ರಶಸ್ತಿ ಪ್ರದಾನ

“ಸೇವಾಶ್ರೀ” ಪ್ರಶಸ್ತಿ ಪ್ರದಾನ

ಸೇವಾಶ್ರೀ” ಪ್ರಶಸ್ತಿ ಪ್ರದಾನ

ಬೆಂಗಳೂರು, 17-05-2025: ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ “ಸೇವಾಶ್ರೀ” ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಅವರು *ಭಾರತ್ ವೈಭವ್* ದಿನಪತ್ರಿಕೆಯ ವರದಿಗಾರ ಅಯ್ಯಣ್ಣ ಮಾಸ್ಟರ್ ಹಾಗೂ *ಸಂಜೆ ಸಮಯ* ಪತ್ರಿಕೆಯ ವರದಿಗಾರ ಶ್ರೀ ಕೆಂಪರಾಜು ಅವರಿಗೆ “ಸೇವಾಶ್ರೀ” ಪ್ರಶಸ್ತಿಯನ್ನು ಪ್ರಧಾನ ಮಾಡಿದರು.

ಈ ಸಂದರ್ಭ ಕಲಬುರ್ಗಿಯ ಅಂಡಗಿ ಪ್ರತಿಷ್ಠಾನದ ಅಧ್ಯಕ್ಷ ಶಿವರಾಜ್ ಅಂಡಗಿ ಅವರು ಉಪಸ್ಥಿತರಿದ್ದರು.

ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ತೆಂಗಳಿ ಗ್ರಾಮದವರಾದ ಅಯ್ಯಣ್ಣ ಮಾಸ್ಟರ್ ಅವರು *ಭಾರತ್ ವೈಭವ್* ದಿನಪತ್ರಿಕೆಯ ಮೂಲಕ ರಾಜ್ಯಮಟ್ಟದಲ್ಲಿ ಸಲ್ಲಿಸುತ್ತಿರುವ ಸಾಮಾಜಿಕ ಸೇವೆಯನ್ನು ಪರಿಗಣಿಸಿ, ಈ ಪ್ರಶಸ್ತಿ ನೀಡಲಾಯಿತು.