ರಾಮಚಂದ್ರ ಗುತ್ತೇದಾರ ನೇತೃತ್ವದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ
ರಾಮಚಂದ್ರ ಗುತ್ತೇದಾರ ನೇತೃತ್ವದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ
ಕಲಬುರಗಿ: ಸೇಡಂ ತಾಲೂಕಿನಲ್ಲಿರುವ ಕೆಲವು ಹಳ್ಳಿಗಳಲ್ಲಿ ಜಲ ಜೀವನ್ ಮಿಷನ್ ಕಾಮಗಾರಿ ನಡೆದಿದ್ದು ತುಂಬಾ ಕಳಪೆ ಮಟ್ಟದಾಗಿದೆ ಆದ್ದರಿಂದ ಗುತ್ತಿಗೆದಾರರಿಗೆ ಯಾವುದೇ ಕಾರಣಕ್ಕೆ ಕಾಮಗಾರಿ ಹಣ ಬಿಡುಗಡೆ ಮಾಡದೆ ತಡೆ ಹಿಡಿಯಬೇಕೆಂದು ಸೇಡಂನ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷ ರಾಮಚಂದ್ರ ಗುತ್ತೇದಾರ ಅವರ ನೇತೃತ್ವದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸೇಡಂ ತಾಲೂಕಿನಲ್ಲಿರುವ ಕೆಲವು ಹಳ್ಳಿಗಳಲಿ ಜೆ.ಜೆ. ಎಂ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿದ್ದು ಸಾರ್ವಜನಿಕರಿಗೆ ದನ ಕರುಗಳಿಗೆ ದ್ವಿಚಕ್ರ ವಾಹನಗಳಿಗೆ ರಸ್ತೆಯ ಮೇಲೆ ಸಂಚಾರಿಸಲು ಆಗುತ್ತಿಲ್ಲ ಏಕೆಂದರೆ ಸಿಸಿ ರಸ್ತೆಯನ್ನು ಜೆಸಿಬಿ ಇಂದ ಕೆದರಿ ಎರಡು ಮೂರು ಅಡಿ ಹಾಳವಾಗಿ ತೆಗ್ಗು ಗುಂಡಿಗಳನ್ನು ತೋಡಿರುತ್ತಾರೆ.
ಕೆಲವು ಹಳ್ಳಿಗಳಲ್ಲಿ ಆಮೆ ಗತಿಯಲ್ಲಿ ಕಾಮಗಾರಿ ನಡೆದಿದ್ದು ಉದಾಹರಣೆಗೆ ಬಿಬ್ಬಳ್ಳಿ ಕಾಚೋರ್, ಬೆನಕನಹಳ್ಳಿ, ನಾಮವರ, ಅಂದರಕಿ ವರ್ಷಾನುಗಟ್ಟಲೆ ಕಾಮಗಾರಿ ನಡೆದರು ಇನ್ನೂ ಮುಗಿದಿರುವುದಿಲ್ಲ ಕೆಲವು ಹಳ್ಳಿಗಳಲ್ಲಿ ರಂಜೋಳ ಚಿಟಕನಪಲ್ಲಿ ಸಿಂಧನ ಮಾಡು ಕಾಮಗಾರಿ ಮುಗಿದರೂ ಸರಿಯಾದ ರೀತಿ ನೀರು ಸರಬರಾಜು ಆಗುತ್ತಿಲ್ಲ ಆದರೂ ಗುತ್ತಿಗೆದಾರರು ಸ್ಥಳೀಯ ರಾಜಕೀಯ ನಾಯಕರನ್ನು ಕಟ್ಟಿಕೊಂಡು ಬಿಲ್ಲು ಪಾವತಿ ಮಾಡಿಕೊಳ್ಳುತ್ತಿದ್ದಾರೆ.
ಆದ್ದರಿಂದ ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಹಯಕ ಕಾರ್ಯನಿರ್ವಾಹಕ ಅಭಿಯಂತರರು ನೀರು ಸರಬರಾಜು ನೈರ್ಮಲ್ಯ ಇಲಾಖೆ ಸೇಡಂ ಅವರ ಗಮನಕ್ಕೆ ತಂದರು ಏನು ಪ್ರಯೋಜನ ಆಗದ ಕಾರಣ ದಯಾಳುಗಳಾದ ತಮ್ಮ ಗಮನಕ್ಕೆ ತರುತ್ತಿದ್ದು ಎಷ್ಟೋ ಬಾರಿ ಈ ವಿಷಯದ ಬಗ್ಗೆ ಮಾಧ್ಯಮಗಳಲ್ಲಿ ಪತ್ರಿಕಾಗಳಲ್ಲಿ ಸುದ್ದಿ ಸಂಚರಿಸಿದರು ಯಾವ ಒಬ್ಬ ಗುತ್ತಿಗೆದಾರರು ಸ್ಪಂದನೆ ನೀಡದೆ ತಮ್ಮ ಕಾರ್ಯ ತಾವೇ ನಡೆಸುತ್ತಿದ್ದಾರೆ ಆದಕಾರಣ ದಯಾಳುಗಳಾದ ತಾವು ಯಾವುದೇ ಕಾರಣಕ್ಕೂ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡದ ಹಾಗೆ ತಡೆ ಹಿಡಿಯಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕರವೇ ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಭಿಷೇಕ್ ಬಾಲಾಜಿ, ಕಲ್ಯಾಣ ಕರ್ನಾಟಕ ಕರವೇ ಪ್ರಧಾನ ಕಾರ್ಯದರ್ಶಿ ಗೋಪಾಲ್ ನಾಟಿಕರ್, ಕರವೇ ಜಿಲ್ಲಾಧ್ಯಕ್ಷ ಮಾನಸಿಂಗ್ ಆರ್. ಚವ್ಹಾಣ, ಗೌರವಾಧ್ಯಕ್ಷ ಮಂಜುನಾಥ ಕುಸುನೂರ್, ರಾಷ್ಟ್ರೀಯ ಉಪಾಧ್ಯಕ್ಷ ಸಂತೋಷ್ ಚೌದರಿ, ನಗರ ಉಪಾಧ್ಯಕ್ಷ ಶರಣು ದ್ಯಾಮ, ತಾಲೂಕ ಉಪಾಧ್ಯಕ್ಷ ಚಂದ್ರಶೇಖರ ಮಡಿವಾಳ, ಅಲ್ಪಸಂಖ್ಯಾತ ಅಧ್ಯಕ್ಷ ಮನಸೂರ ಅಲಿ, ನಗರ ಅಧ್ಯಕ್ಷ ಸಾಗರ ಸೇರಿದಂತೆ ಕಾರ್ಯಕರ್ತರು ಇದ್ದರು.