ಸುಬೇದಾರ ವಿದ್ಯಾಲಯ ನೂತನ ಕಟ್ಟಡ ಉದ್ಘಾಟನೆ

ಸುಬೇದಾರ ವಿದ್ಯಾಲಯ ನೂತನ ಕಟ್ಟಡ ಉದ್ಘಾಟನೆ
ಶಹಪುರ : ಅತ್ಯಾಧುನಿಕ ತಂತ್ರಜ್ಞಾನ ಶಿಕ್ಷಣದ ಜೊತೆಗೆ ಮಕ್ಕಳಿಗೆ ಮೌಲ್ಯಯುತವಾದ ಶಿಕ್ಷಣ ಕಲಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ನೀಡುವುದಕ್ಕಾಗಿ ಇಂದು ಗ್ರಾಮೀಣ ಭಾಗದಲ್ಲಿ "ಸುಬೇದಾರ ವಿದ್ಯಾಲಯ" ಉದ್ಘಾಟನೆ ಸಜ್ಜಾಗಿರುವುದು ನಿಜಕ್ಕೂ ಸಂತೋಷವನ್ನುಂಟು ಮಾಡಿದೆ ಎಂದು ಶ್ರೀಮದ್ ಶ್ರೀಶೈಲ ಗಿರಿರಾಜ ಸೂರ್ಯ ಸಿಂಹಾಸನಾದೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರುಗಳಾದ ಡಾ.ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ತಾಲೂಕಿನ ಸಗರ ಗ್ರಾಮದ ಸುಬೇದಾರ ವಿದ್ಯಾಲಯದ ನೂತನ ಕಟ್ಟಡ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಅಚ್ಚಪ್ಪಗೌಡ ಸುಬೇದಾರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು.ಅತ್ಯಾಧುನಿಕ ಸೌಲಭ್ಯಗಳಿಂದ ಹೊಂದಿರುವ ಈ ನೂತನ ಕಟ್ಟಡ ವಿದ್ಯಾರ್ಥಿಗಳ ಬಾಳಿಗೆ ಬೆಳಕು ನೀಡುವ ಶಿಕ್ಷಣ ಸಂಸ್ಥೆ ಇದಾಗಲಿದೆ ಎಂದು ಆಶೀರ್ವಚನ ನೀಡಿ ಮಾತನಾಡಿದರು.
ಯಾರು ಕದಿಯದ ಸಂಪತ್ತು,ಪಾಲು ಕೇಳದ ಸಂಪತ್ತು ಎಂದರೆ ಅದು ವಿದ್ಯೆ,ಇಂದಿನ ಕಾಲದಲ್ಲಿ ಗಡಿ ಕಾಯಿವುವ ಕೆಲಸ ಅಚ್ಚಪ್ಪಗೌಡ ಸುಬೇದಾರ ಮಾಡಿದರೆ,ಇಂದು ನುಡಿ ಕಾಯುವ ಕೆಲಸಕ್ಕೆ ಡಾ. ಚಂದ್ರಶೇಖರ್ ಸುಬೇದಾರ ಮುಂದಾಗಿದ್ದಾರೆ ಎಂದು ಅವರ ಕಾರ್ಯ ವೈಖರಿಯನ್ನು ಬಣ್ಣಿಸಿದರು.
ಬಹುದಿನಗಳ ನಿರೀಕ್ಷೆಯಾಗಿದ್ದ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಅಚ್ಚಪ್ಪಗೌಡ ಸುಬೇದಾರರ ಕನಸು ನನಸು ಮಾಡಿ ಹಿಂದುಳಿದ ಪ್ರದೇಶವಾಗಿದ್ದ ಈ ಭಾಗಕ್ಕೆ ಸಿಬಿಎಸ್‌ಸಿ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆ ಪ್ರಾರಂಭಿಸಿ ಈ ಭಾಗದ ಬಡ ಜನರ ಮಕ್ಕಳಿಗೆ ಅನುಕೂಲ ಮಾಡಿಕೊಟ್ಟ ಡಾ.ಚಂದ್ರಶೇಖರ ಸುಬೇದಾರ ಅವರಿಗೆ ಕಾರ್ಯ ಶ್ಲಾಘನೀಯವಾದದ್ದು ಎಂದು ಮಾಜಿ ಸಚಿವ ನರಸಿಂಹ ನಾಯಕ ರಾಜುಗೌಡ ಹೇಳಿದರು.
ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾದ ಶಿವಶಂಕರಪ್ಪ ಸಾಹು ಹೇಮನಾಳ ಮಾತನಾಡಿ,ಸುಬೇದಾರರ ಕುಟುಂಬ ಸಮಾಜ ಸೇವೆಯ ಜೊತೆಗೆ ಈ ಭಾಗದ ಶೈಕ್ಷಣಿಕ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕಡು ಬಡತನದಲ್ಲಿ ಹುಟ್ಟಿದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದಕ್ಕಾಗಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದ್ದಾರೆ ಆದ್ದರಿಂದ ತಾವೆಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಲ್ಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಮಾತನಾಡಿ,ಸುಬೇದಾರರ ಕುಟುಂಬ ಧಾರ್ಮಿಕ,ಸಾಮಾಜಿಕ, ಸಾಂಸ್ಕೃತಿಕ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರಲ್ಲದೆ,ಇದೀಗ ಶೈಕ್ಷಣಿಕ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿದ್ದಾರೆ, ಈ ಶಿಕ್ಷಣ ಸಂಸ್ಥೆಯಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳು ಮುಂದಿನ ದಿನಗಳಲ್ಲಿ ಉನ್ನತ ಮಟ್ಟದ ಅಧಿಕಾರಿಗಳಾಗಿ ಹೊರ ಹೊಮ್ಮಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ರಸ್ತಾಪುರ ಹಿರೇಮಠದ ಷ.ಭ್ರ.ಗಿರಿಧರ ಶಿವಾಚಾರ್ಯರು,ಚರಬಸವೇಶ್ವರ ಸಂಸ್ಥಾನದ ಬಸವಯ್ಯ ಶರಣರು,ಸಗರ ವಕ್ಕಲಗರ ಹಿರೇಮಠದ ಪೂಜ್ಯರಾದ ಮರುಳ ಮಹಾಂತ ಶಿವಾಚಾರ್ಯರು, ಶಹಾಪುರ ಹಿರೇಮಠದ ಸೂಗುರೇಶ್ವರ ಶಿವಾಚಾರ್ಯರು, ಸಗರ ನಾಗಠಾಣ ಹಿರೇಮಠದ ಶ್ರೀ ಸೋಮೇಶ್ವರ ಶಿವಾಚಾರ್ಯರು, ಲಕ್ಷ್ಮಿಪುರ ಶ್ರೀಗಿರಿ ಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು,ದಿವ್ಯ ಸಾನಿಧ್ಯ ವಹಿಸಿದ್ದರು.
ಈ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಚಂದ್ರಶೇಖರ ಸುಬೆದಾರ ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಿಕೊಂಡಿದ್ದರು,ಈ ಸಮಾರಂಭದ ವೇದಿಕೆಯ ಮೇಲೆ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಸಾಹು ಆರಬೋಳ,ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್, ಮಾಜಿ ವಿಧಾನ ಪರಿಷತ್ತಿನ ಸದಸ್ಯ ಅಮಾತೆಪ್ಪ ಕಂದಕೂರ,ಯುವ ಮುಖಂಡ ಅಮೀನರೆಡ್ಡಿ ಪಾಟೀಲ್ ಯಾಳಗಿ,ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪಗೌಡ ವಿಭೂತಿಹಳ್ಳಿ, ನಗರಸಭೆ ಮಾಜಿ ಅಧ್ಯಕ್ಷ ಸಣ್ಣ ನಿಂಗಪ್ಪ ನಾಯ್ಕೋಡಿ,ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಸನಗೌಡ ಮಾಲಿ ಪಾಟೀಲ್,ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ನಾಗನಗೌಡ ಸುಬೇದಾರ,ಸುಬೇದಾರ ವಿದ್ಯಾಲಯದ ಮುಖ್ಯಸ್ಥರಾದ ಕರಣ ಸುಬೇದಾರ,ಹಿರಿಯ ಸಾಹಿತಿಗ ಲಿಂಗಣ್ಣ ಪಡಶೆಟ್ಟಿ,ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ನಂತರ ಹಾಸ್ಯ ಕಲಾವಿದ ಪ್ರಾಣೇಶ್ ಗಂಗಾವತಿ,ಬಸವರಾಜ ಮಹಾಮನಿ ಹಾಗೂ ನರಸಿಂಹ ಜೋಶಿ ಅವರಿಂದ ನಗೆಹಬ್ಬ ಕಾರ್ಯಕ್ರಮ ಜರುಗಿತು,