ಜಾತಿ ಸಮೀಕ್ಷೆ ಕಾಲಂನಲ್ಲಿ 'ಹೊಲೆಯ' ಎಂದು ಬರೆಸಿ: ಮಛಂದ್ರನಾಥ ಕಾಂಬಳೆ ಸಲಹೆ

ಜಾತಿ ಸಮೀಕ್ಷೆ ಕಾಲಂನಲ್ಲಿ 'ಹೊಲೆಯ ' ಎಂದು ಬರೆಸಿ: ಮಛಂದ್ರನಾಥ ಕಾಂಬಳೆ ಸಲಹೆ
ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ಹಕ್ಕು ಸಂರಕ್ಷಿಸೋಣ
ಬೀದರ: ರಾಜ್ಯಾದ್ಯಂತ ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಸಮೀಕ್ಷೆಯಲ್ಲಿ, ಪ್ರತಿಯೊಬ್ಬ ಸಮುದಾಯದ ಸದಸ್ಯರೂ ತಮ್ಮ ಮೂಲ ಜಾತಿಯ ಹೆಸರನ್ನು ನಿಖರವಾಗಿ ದಾಖಲಿಸುವುದು ಅನಿವಾರ್ಯವಾಗಿದೆ. ಸಮಾಜದ ಸತ್ಯವಾದ ಅಂಕಿ-ಅಂಶಗಳನ್ನು ತಿಳಿದುಕೊಳ್ಳಲು ಈ ಸಮೀಕ್ಷೆ ಮಹತ್ವಪೂರ್ಣವಾದುದು.
ಎಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕಲಾ, ಸಾಹಿತ್ಯ, ಸಾಂಸ್ಕೃತಿಕ ಸಂಘ ಆಣದೂರ ಅಧ್ಯಕ್ಷರಾದ ಮಛಂದ್ರನಾಥ ಕಾಂಬಳೆ ಹೇಳಿದರು
“ಪರಿಶಿಷ್ಟ ಜಾತಿಗಳ ಸಮುದಾಯಕ್ಕೆ ನ್ಯಾಯ ದೊರೆಯಬೇಕಾದರೆ, ನಾವು ನಮ್ಮನ್ನು ಸರಿಯಾಗಿ ಗುರುತಿಸಿಕೊಳ್ಳಬೇಕಿದೆ. 'ಹೊಲೆಯ' ಸಮುದಾಯದ ಎಲ್ಲರೂ ಸಮೀಕ್ಷೆಯಲ್ಲಿ 'ಹೊಳೆಯ' ಎಂಬಂತೆ ತಮ್ಮ ಜಾತಿಯನ್ನು ದಾಖಲಿಸಬೇಕು. ಇದು ಕೇವಲ ಕಾಗದದ ಕೆಲಸವಲ್ಲ; ನಮ್ಮ ಹಕ್ಕುಗಳ ಭವಿಷ್ಯವನ್ನೇ ನಿರ್ಧರಿಸುವ ನಿರ್ಣಾಯಕ ಹಂತವಾಗಿದೆ.”
ಈ ಸಮೀಕ್ಷೆಯಲ್ಲಿ 101ಕ್ಕೂ ಹೆಚ್ಚು ಪರಿಶಿಷ್ಟ ಜಾತಿಗಳು ಒಳಗೊಂಡಿದ್ದು, ಅವರ ನಿಖರ ಜನಸಂಖ್ಯೆ ಹಾಗೂ ಆರ್ಥಿಕ-ಸಾಮಾಜಿಕ ಸ್ಥಿತಿಯನ್ನು ಅರಿಯುವ ಕಾರ್ಯ ನಡೆಯುತ್ತಿದೆ. ಈ ಮಾಹಿತಿ ಆಧಾರವಾಗಿ ಸರ್ಕಾರ ಶಿಕ್ಷಣ, ಉದ್ಯೋಗ, ವಸತಿ, ಆರೋಗ್ಯ ಮುಂತಾದ ಹಲವು ಕ್ಷೇತ್ರಗಳಲ್ಲಿ ಅನುಕೂಲಕರ ಯೋಜನೆಗಳನ್ನು ರೂಪಿಸಲಿದೆ.
ಆದ್ದರಿಂದ, "ಹೊಲೆಯ" ಸಮುದಾಯದ ಎಲ್ಲಾ ಸದಸ್ಯರು ತಮ್ಮ ಮೂಲ ಜಾತಿಯನ್ನು ಜಾತಿ ಗಣತಿ ಕಾಲಂದಿಲ್ಲಿ'ಹೊಲೆಯ' ಎಂದು ದಾಖಲಿಸಿ, ತಮ್ಮ ಹಕ್ಕುಗಳ ಭದ್ರತೆಗೆ ದಾರಿ ಸವಿಯಬೇಕು. ಈ ಒಂದು ಸರಳವಾದ ಹೆಜ್ಜೆ, ಮುಂದಿನ ಪೀಳಿಗೆಗಳಿಗೆ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ ಎಂದು ಹೇಳಿದರು