ಕ್ರೀಡೆಗಳು ದೈಹಿಕ ಆರೋಗ್ಯಕ್ಕೆ ಅತ್ಯಗತ್ಯ :..

ಕ್ರೀಡೆಗಳು ದೈಹಿಕ ಆರೋಗ್ಯಕ್ಕೆ ಅತ್ಯಗತ್ಯ :..

ಕ್ರೀಡೆಗಳು ದೈಹಿಕ ಆರೋಗ್ಯಕ್ಕೆ ಅತ್ಯಗತ್ಯ :..

ಶಹಾಬಾದ :..ಪ್ರತಿಭೆ ಹೊರ ಹೊಮ್ಮಲು ವಲಯ ಮಟ್ಟದ ಕ್ರೀಡಾಕೂಟ ಒಂದು ಪ್ರಯತ್ನವಾಗಿದೆ, ನಮ್ಮ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ತುಂಬಾ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳಿಗೆ ಪಾಠದೊಂದಿಗೆ ಕ್ರೀಡೆಗಳು ಮುಖ್ಯ ಎಂದು ತಾಲ್ಲೂಕ ದೈಹಿಕ ಶಿಕ್ಷಣಾಧಿಕಾರಿ ಶಿವಶರಣಪ್ಪ ಮಂಟಾಲೆ ಹೇಳಿದರು. 

ಅವರು‌ ಅಂತರ ಶಾಲಾ ವಿಭಾಗದ 2025-265ನೇ ಸಾಲಿನ ವಲಯ ಮಟ್ಟದ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಕ್ಕಳ ಆಸಕ್ತಿ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು, ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ನೀಡಬೇಕು, ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳು ಉತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಮಿಂಚಲಿ ಎಂದರು.

ಆರಪಿಎಫ ಎಎಸಐ ಜಿ ಎಸ ಕಾಕರವಾಲ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದೊಂದು ಪ್ರತಿಭೆ ಅಡಗಿರುತ್ತದೆ, ಇದನ್ನು ಹೆಕ್ಕಿ ತೆಗೆಯುವ ಜವಾಬ್ದಾರಿ ಶಿಕ್ಷಕರ ಮೇಲಿದ್ದರೆ, ಸಿಕ್ಕ ಅವಕಾಶದಲ್ಲಿ ಪ್ರತಿಭೆಯನ್ನು ಪ್ರತಿಬಿಂಬಿಸಲು ವಿದ್ಯಾರ್ಥಿಗಳು ತಯಾರಿರಬೇಕೆಂದು ಸೂಚಿಸಿದರು. 

ಅಂಪೈರ್ ನೀರ್ಣಯಗಳು ವಿಧ್ಯಾರ್ಥಿಗಳಿಗೆ ಅನ್ಯಾಯ ವಾಗದಿರಲಿ, ವಿಧ್ಯಾರ್ಥಿಗಳು ಬೇದಬಾವ ಮಾಡದೆ, ಎಲ್ಲರೂ ಸೋಲು ಗೆಲವು ಸಮಾನವಾಗಿ ಸ್ವೀಕರಿಸಿ, ಅತಿಥೇಯ ಬಿವಿಎಮ ಶಾಲೆಯು ಅತ್ಯುತ್ತಮವಾಗಿ ಕ್ರೀಡಾಕೂಟ ಆಯೋಜಿಸಿರುವುದು ಸ್ವಾಗತಾರ್ಹ ಎಂದರು.

ವೇದಿಕ ಮೇಲೆ ಕಾಡಾ ಅಧ್ಯಕ್ಷ ಡಾ.ಎಂಎ ರಶೀದ, ದೈಹಿಕ ಶಿಕ್ಷಣಾಧಿಕಾರಿ ಶಿವಶರಣಪ್ಪ ಮಂಟಾಲೆ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಪುತ್ರ ಕರಣಿಕ, ಪ್ರವೀಣ ಹೇರೂರ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಾ.ಚಿದಾನಂದ ಕುಡ್ದನ, ಚನ್ನಬಸಪ್ಪ ಕೊಲ್ಲೂರ, ಅಬ್ದುಲ ಸಲಿಂ, ಗಂಗಾಧರ, ವೆಂಕಟೇಶ್ ಚಿನ್ನೂರ, ಸಿಆರಪಿ ಮರೇಪ್ಪ ಭಜಂತ್ರಿ, ಸತ್ಯನಾರಾಯಣ,ರೈಲ್ವೆ ಎಎಸಐ ಜಿ.ಎಸ ಕಾಕರವಾಲ ಉಪಸ್ಥಿತರಿದ್ದರು.

ಕಾಡಾ ಅಧ್ಯಕ್ಷ ಡಾ.ಎಂಎ ರಶೀದ ರವರು ಮೇಜರ್ ಧ್ಯಾನ ಚಂದ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಪುತ್ರ ಕರಣಿಕ ಕ್ರೀಡಾ ಧ್ವಜಾರೋಹಣ ನೆರವೇರಿಸಿ, ಮಾತನಾಡಿದರು.

ನಗರದ ಬಿ.ವಿ.ಎಮ ಶಾಲೆಯ ವಿದ್ಯಾರ್ಥಿಗಳು ಕ್ರೀಡಾ ಜ್ಯೋತಿಯನ್ನು ಹಿಡಿದು ಓಡಿ ಮೆರಗು ತಂದರು.

ಸರ್ಕಾರಿ ಮತ್ತು ಖಾಸಗಿಯ 15 ಶಾಲೆಗಳ ಸುಮಾರು 200 ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು, ಬಾಲಕ ಮತ್ತು ಬಾಲಕಿಯರಿಗಾಗಿ ಅಂತರ ಶಾಲಾ ವಲಯ ಮಟ್ಟದ ಸ್ಪರ್ಧೆಗಳು ನಡೆದವು, 

ವಲಯ ಮಟ್ಟದ ಕ್ರೀಡಾಕೂಟದಲ್ಲಿ ದೈಹಿಕ ಶಿಕ್ಷಕರಾದ ಗಣೇಶ ಜಾಯಿ, ಸಿದ್ದಲಿಂಗ ಬುಳ್ಳಾ, ರತನರಾಜ ಕೋಬಾಳಕರ, ಸಾಬಣ್ಣ ನಾಟೀಕಾರ, ಮಹೇಶ ಕಾಂಬಳೆ, ಮಹಾದೇವ ನಾಟೀಕಾರ, ಮಲ್ಲಿನಾಥ, ಶಿವಕುಮಾರ, ಪ್ರೇಮಸಾಗರ, ಚಂದ್ರಶೇಖರ, ಸಿದ್ರಾಮ, ವಿಜಯಲಕ್ಷ್ಮೀ ಪಾಟೀಲ, ರುಕ್ಸಾನ ಬೇಗಂ, ರಾಣಿ ಶಿವಗಂಗ ಸೇರಿದಂತೆ ಶಹಾಬಾದ ವಲಯದ ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬನ್ನಪ್ಪ ಸೈದಾಪುರ ಸ್ವಾಗತಿಸಿ, ನಿರೂಪಿಸಿದರು, ಸಿದ್ದಲಿಂಗ ಬುಳ್ಳಾ ವಂದಿಸಿದರು,

ಶಹಾಬಾದ್ ವಾರ್ತೆ ನಾಗರಾಜ್ ದಂಡಾವತಿ