ದಿಗ್ಗಾಂವ ಶ್ರೀಗಳು ಯಾವುದೇ ತಪ್ಪು ಮಾಡಿಲ್ಲ

ದಿಗ್ಗಾಂವ ಶ್ರೀಗಳು ಯಾವುದೇ ತಪ್ಪು ಮಾಡಿಲ್ಲ

ದಿಗ್ಗಾಂವ ಶ್ರೀಗಳು ಯಾವುದೇ ತಪ್ಪು ಮಾಡಿಲ್ಲ 

 ಚಿತ್ತಾಪುರ : ತಾಲೂಕಿನ ದಿಗ್ಗಾಂವ ಗ್ರಾಮದ ಪಂಚಗ್ರಹ ಹಿರೇಮಠದ ಶ್ರೀ ಸಿದ್ಧವೀರ ಶಿವಾಚಾರ್ಯರು ಸೇಡಂ ತಾಲೂಕಿನ ಕಲಕಂಬ ಗ್ರಾಮದ ಈಶ ಬಸವೇಶ್ವರ ದೇವಸ್ಥಾನದಲ್ಲಿ ಶಿವಲಿಂಗ ಪ್ರತಿಷ್ಠಾಪನೆಯನ್ನು ಧಾರ್ಮಿಕ ಗ್ರಂಥಗಳ ಆಧಾರದ ಮೇಲೆ ಶಿವಲಿಂಗಕ್ಕೆ ಪಾದೋದಕ ಪೂಜೆ ಮಾಡಿದ್ದಾರೆ ಎಂದು ಮಠದ ಭಕ್ತ ರವಿಚಂದ್ರ ಎಂ ದೇವಿ ಹೊಸೂರ್ ಅವರು ಹೇಳಿದ್ದಾರೆ.

ಈ ವಿಷಯದಲ್ಲಿ ಕೆಲವರಿಗೆ ತಪ್ಪು ಮಾಹಿತಿ ಹಾಗೂ ಬುದ್ಧಿ ಭ್ರಮೆಣೆ ಆಗಿದೆ. ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಸ್ವಾಮೀಜಿಯವರು ಯಾವುದೇ ತಪ್ಪು ಮಾಡಿಲ್ಲ. ಶಿಷ್ಟಾಚಾರದ ಪ್ರಕಾರ ಪೂಜೆ ಕೈಗೊಂಡಿದ್ದಾರೆ ಎಂದು ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿಗ್ಗಾಂವ ಶ್ರೀಗಳು ಈ ಭಾಗದಲ್ಲಿ ನಡೆದಾಡುವ ದೇವರಾಗಿದ್ದಾರೆ. ಅವರ ಬಗ್ಗೆ ಮನಸ್ಸಿಗೆ ಬಂದAತೆ ಆರೋಪ ಮಾಡುವುದು ಸರಿ ಅಲ್ಲ. ನಮ್ಮ ಭಾಗದಲ್ಲಿ ದಿಗ್ಗಾಂವ ಶ್ರೀಗಳು ಬಹಳಷ್ಟು ಅನುಷ್ಠಾನಗಳು, ತಪಸ್ಸುಗಳನ್ನು ಮಾಡಿದ್ದಾರೆ. ಚಿತ್ತಾಪುರ ಪಟ್ಟಣದ ನಾಗಾವಿ ಕಡ್ಲಿ ಬಸವಣ್ಣ ಗುಡಿಯಲ್ಲಿ ನಿರ್ವಿಕಲ್ಪ ಸಮಾಧಿ ತಪಸ್ಸನ್ನು ಮಾಡಿದ್ದಾರೆ. ಅವರ ನಡೆ-ನುಡಿಗಳನ್ನು ಗೊತ್ತಿಲ್ಲದ ಜನರು ಸ್ವಾಮಿಗಳ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ದಿಗ್ಗಾಂವ ಶ್ರೀಗಳು ಅನೇಕ ದೇವಸ್ಥಾನಗಳ ಕಟ್ಟಿಸಿದ್ದಾರೆ. ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ. ಬಹಳಷ್ಟು ಜಾತ್ರೆಗಳನ್ನು ಆರಂಭಿಸಿದ್ದಾರೆ. ಭಕ್ತರ ಕಷ್ಟಗಳಿಗೆ ಪರಿಹಾರವನ್ನು ಮಾಡಿಕೊಡುತ್ತಿದ್ದಾರೆ. ಧಾರ್ಮಿಕವಾಗಿ ಗ್ರಂಥಗಳ ಆಧಾರವಾಗಿ ಪ್ರತಿಷ್ಠಾಪನೆ ಮಾಡಿದ್ದಾರೆ. ಇವರ ಬಗ್ಗೆ ಇಲ್ಲಸಲ್ಲದ ಆರೋಪಗಳು ನಿರಂತರವಾಗಿ ಬಂದರೆ ಮಠದ ಭಕ್ತರು ಹೋರಾಟ ಮಾಡಲು ಸಿದ್ದರಾಗಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.