ದಿವಂಗತ ರಮೇಶ ಚಂದ್ರ ಜೈನ್ ಸ್ಮರಣಾರ್ಥವಾಗಿ ಕಲಬುರಗಿಯಲ್ಲಿ ತಂಪು ನೀರಿನ ಸದ್ಗೃಹ ಸ್ಥಾಪನೆ

ದಿವಂಗತ ರಮೇಶ ಚಂದ್ರ ಜೈನ್ ಸ್ಮರಣಾರ್ಥವಾಗಿ ಕಲಬುರಗಿಯಲ್ಲಿ ತಂಪು ನೀರಿನ ಸದ್ಗೃಹ ಸ್ಥಾಪನೆ

ತಂಪು ನೀರಿನ ಅರವಟಿಗೆ ಧಾನ: ದಿವಂಗತ ರಮೇಶ ಚಂದ್ರ ಜೈನ ಸ್ಮರಣಾರ್ಥ ಕಲಬುರಗಿಯಲ್ಲಿ ಸದ್ಗೃಹ ಸ್ಥಾಪನೆ

ಕಲಬುರಗಿ: ಕಲಬುರಗಿ ವಕೀಲರ ಸಂಘದ ನೈತೃತ್ವದಲ್ಲಿ ಏಪ್ರಿಲ್ 30, 2025 ರಂದು ಬೆಳಿಗ್ಗೆ 11 ಗಂಟೆಗೆ ಸಂಘದ ಸದಸ್ಯರಾದ ಖ್ಯಾತ ಬಂಗಾರ ವ್ಯಾಪಾರಿ ಹಾಗೂ ವಕೀಲ ನವೀನ್ ಜೈನ್ (ಸುರಪುರ) ರವರು, ತಮ್ಮ ತಂದೆಯಾದ ದಿವಂಗತ ಶ್ರೀ ರಮೇಶ ಚಂದ್ರ ಜೈನ ಅವರ ಸ್ಮರಣಾರ್ಥವಾಗಿ, ನ್ಯಾಯಾಲಯದ ವಕೀಲರಿಗೆ ಹಾಗೂ ಕಕ್ಷಿದಾರರಿಗೆ ಬೇಸಿಗೆ ದಿನಗಳಲ್ಲಿ ತಂಪಾದ ನೀರು ದೊರಕುವಂತೆ ಸುಸಜ್ಜಿತವಾದ ಅರವಟಿಗೆ ಅನ್ನು ಧಾನದ ರೂಪದಲ್ಲಿ ನೀಡಿದ್ದಾರೆ.

ಈ ಅರವಟಿಗೆ ಸದ್ಗೃಹವನ್ನು ಮನೆ ರೂಪದಲ್ಲಿ ನಿರ್ಮಿಸಲಾಗಿದ್ದು, 1000 ಲೀಟರ್ ಸಾಮರ್ಥ್ಯದ ಟ್ಯಾಂಕ್ ಹಾಗೂ 200 ಲೀಟರ್ ಸಾಮರ್ಥ್ಯದ ರೆಫ್ರಿಜರೇಟರ್ ಅಳವಡಿಸಲಾಗಿದೆ.

ಕಾರ್ಯಕ್ರಮದಲ್ಲಿ ಮೊದಲು ದಿ. ರಮೇಶ ಚಂದ್ರ ಜೈನರ ಮೊಮ್ಮಗ ಅಭಿನಂದನ ಜೈನ ಸ್ವಾಗತ ಭಾಷಣ ಮಾಡಿದರು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎಲ್. ಲಕ್ಷ್ಮೀನಾರಾಯಣ ಉದ್ಘಾಟನೆ ನೆರವೇರಿಸಿ, “ವಕೀಲರು ಧಾನಮಯ ಕೃತ್ಯಗಳಲ್ಲಿ ತೊಡಗಿಸಿಕೊಂಡು ಸಾಮಾಜಿಕ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ನಾನೀಗ ಕಾರ್ಯನಿರ್ವಹಿಸುತ್ತಿರುವ ಕ.ಕ ಭಾಗವು ವಚನ ಸಾಹಿತ್ಯದ ಭೂಮಿ ಹಾಗೂ ದಾಸೋಹ ತತ್ವದ ನೆಲೆವೊಂದೆಂಬ ಹಿನ್ನಲೆಯಲ್ಲಿ ನ್ಯಾಯವಾದಿಗಳಲ್ಲಿಯೂ ಈ ಸಮಾಜ ಸೇವಾ ಚಿಂತನೆ ಧಾರೆ ಹರಿದು ಹರಿದು ಹೋಗುತ್ತಿದೆ," ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಗುಪ್ತಲಿಂಗ ಪಾಟೀಲ, "ನಮ್ಮ ಅವಧಿಯ ಕೊನೆಯ ದಿನದಂದು ಇಂತಹ ಸತ್ಕಾರ್ಯ ಮಾಡಲು ಅವಕಾಶ ನೀಡಿದ ನವೀನ್ ಜೈನ್ ಅವರಿಗೆ ಧನ್ಯವಾದಗಳು. ಈ ಕಾರ್ಯ ಇತರರಿಗೆ ಪ್ರೇರಣೆಯಾಗಿದೆ," ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಬಸಲಿಂಗ ನಾಸಿ, ಜಂಟಿ ಕಾರ್ಯದರ್ಶಿ ಎಸ್.ಕೆ. ಚಿಕ್ಕಳ್ಳಿ, ಖಜಾಂಚಿ ಶಿವರಾಜ ಪಾಟೀಲ ರಾಜಾಪುರ, ಹಿರಿಯ ವಕೀಲ ಮಲ್ಲಿಕಾರ್ಜುನ ಕೋಟೆ, ವ್ಯವಸ್ಥಾಪಕ ಅಶೋಕ ಚೌಹಾಣ್, ಸಂಚಾಲಕರಾದ ಜೆ.ಎಸ್. ವಿನೋದಕುಮಾರ್, ಆನಂದ ಸೋನಕಾಂಬಳೆ, ಭೂಪೇಂದ್ರ ಸಿಂಗ್, ಶೈಲೇಂದ್ರ ಜಮಾದಾರ ಹಾಗೂ ಇತರರು ಉಪಸ್ಥಿತರಿದ್ದರು. ಕೊನೆಯಲ್ಲಿ ಶ್ರೇಯನ್ಸ್ ಜೈನ್ ವಂದನಾಪೂರಕವಾಗಿ ಧನ್ಯವಾದ ತಿಳಿಸಿದರು.