ಪ್ಲಾಸ್ಟಿಕ್ ಬಳಕೆ ನಿಷೇದಿಸಿ ಪರಿಸರ ಕಾಪಾಡಿ ಐ ಕೆ ಪಾಟೀಲ್

ಪ್ಲಾಸ್ಟಿಕ್ ಬಳಕೆ ನಿಷೇದಿಸಿ ಪರಿಸರ ಕಾಪಾಡಿ ಐ ಕೆ ಪಾಟೀಲ್

ಪ್ಲಾಸ್ಟಿಕ್ ಬಳಕೆ ನಿಷೇದಿಸಿ ಪರಿಸರ ಕಾಪಾಡಿ ಐ ಕೆ ಪಾಟೀಲ್ 

ಕಲಬುರ್ಗಿ:ಅತಿಯಾದ ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಆದ್ದರಿಂದ ಪರಿಸರ ಉಳಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಬೇಕು ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಾಧ್ಯಮ ಸಂಯೋಜಕ ಹಾಗೂ ಉಪನ್ಯಾಸಕ ಐ ಕೆ ಪಾಟೀಲ್ ಹೇಳಿದರು 

ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಎಸ್ ಇರಾಣಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅತಿಯಾದ ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಆದ್ದರಿಂದ ಪರಿಸರ ಉಳಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಬೇಕು. ಪ್ಲಾಸ್ಟಿಕ್‌ ಬಳಕೆ ಮಾಡಲೇಬೇಕು ಎನ್ನುವಂತಹ ವಸ್ತುಗಳ ಉತ್ಪಾದಕರಿಗೆ ತ್ಯಾಜ್ಯ ಮರುಬಳಕೆ ಮಾಡುವಂತೆ ಆದೇಶ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಇದರಿಂದ ಪರಿಸರ ಕಾಪಾಡಬಹುದು. ಪ್ಲಾಸ್ಟಿಕ್‌ ಲೋಟ, ಚಮಚ, ಪ್ಲೇಟ್‌ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಚಿಫ್ಸ್‌, ಬಿಸ್ಕೆಟ್‌, ಗುಟ್ಕಾಗಳಿಗೆ ಬಳಕೆ ಮಾಡುವ ಪ್ಲಾಸ್ಟಿಕ್‌ನ್ನು ಮರುಬಳಕೆ ಮಾಡುವಂತೆ ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂದು ಹೇಳಿದರು 

ವಿಶ್ವ ಪರಿಸರ ದಿನವು ಪ್ರತಿ ವರ್ಷ ಜೂನ್ 5 ರಂದು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಆಚರಿಸಲಾಗುವ ಒಂದು ಜಾಗತಿಕ ಕಾರ್ಯಕ್ರಮವಾಗಿದೆ ಎಂದು ಹೇಳಿದರು 

. ಈ ದಿನದಂದು, ಜಾಗತಿಕ ಪರಿಸರಕ್ಕೆ ಹಾನಿ ಉಂಟುಮಾಡುವ ಚಟುವಟಿಕೆಗಳ ವಿರುದ್ಧ ಧ್ವನಿ ಎತ್ತಲು ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಅನೇಕ ಜನರು ಒಟ್ಟುಗೂಡುತ್ತಾರೆ ಎಂದು ಹೇಳಿದರು.

ಈ ವರ್ಷ 2025 ರ ವಿಶ್ವ ಪರಿಸರ ದಿನದ ಥೀಮ್ " ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು. ಇದನ್ನು Beat Plastic Pollution ಎಂದೂ ಈ ವರ್ಷ ಪ್ರಚಾರ ಮಾಡಲಾಗುತ್ತದೆ.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಶಿಲ್ಪಾ ಅಲ್ಲದ, ಉಪನ್ಯಾಸಕರಾದ ಡಾ ಪಾಂಡುರಂಗ ಚಿಂಚನಸೂರ,ಚಂದ್ರಶೇಖರ ಪಟ್ಟಣಕರ, ಕೃಷ್ಣವೇಣಿ ಪಾಟೀಲ್, ಸಂಗೀತಾ ಸಡಕೀನ , ಅಶ್ವೀನಿ ಪಾಟೀಲ್, ವಿಜಯಲಕ್ಷ್ಮಿ ಶಾಬಾದಿ,ಶ್ವೇತಾ ಶೆಟ್ಟಿ,ಮಲಕಮ್ಮ ಪಾಟೀಲ್ ಪಾಟೀಲ್,ಮಧುಶ್ರೀ ಘಂಟಿ , ರುದ್ರಾಂಬಿಕಾ ಕಿರಾಣಿ ಉಪಸ್ಥಿತರಿದ್ದರು.