ಗದಗಯ್ಯ ಹಿರೇಮಠ ಲಿಂಗೈಕ್ಯ – ಸಾವಿರಾರು ಭಕ್ತರಲ್ಲಿ ಶೋಕದ ಛಾಯೆ

ಗದಗಯ್ಯ ಹಿರೇಮಠ ಲಿಂಗೈಕ್ಯ – ಸಾವಿರಾರು ಭಕ್ತರಲ್ಲಿ ಶೋಕದ ಛಾಯೆ

ಗದಗಯ್ಯ ಹಿರೇಮಠ ಲಿಂಗೈಕ್ಯ – ಸಾವಿರಾರು ಭಕ್ತರಲ್ಲಿ ಶೋಕದ ಛಾಯೆ

ಕಡಣಿ, ಮೇ 5:ಹಿರೇಮಠ ಮನೆತನದ ಹಿರಿಯ ಕೊಂಡಿಯಾಗಿದ್ದ ಗದಗಯ್ಯ ಬಸವಲಿಂಗಯ್ಯ ಹಿರೇಮಠ (ವಯಸ್ಸು 90) ಅವರು ಇಂದು ನಿಧನ ಹೊಂದಿರುವ ದುಃಖದ ಸುದ್ದಿ ಮನೆತನದವರಿಗೆ ಮಾತ್ರವಲ್ಲದೆ ಸಾವಿರಾರು ಭಕ್ತರಲ್ಲಿ ಆಘಾತ ತಂದಿದೆ. ಸಮಾಜ ಸೇವೆ, ಧಾರ್ಮಿಕ ಮಾರ್ಗದರ್ಶನ ಹಾಗೂ ಭಕ್ತರ ಶ್ರದ್ಧಾ ಕೇಂದ್ರವಾಗಿದ್ದ ಅವರ ಜೀವನ ಭಕ್ತರಿಗೆ ಪ್ರೇರಣೆಯ ಆಗಸವಾಗಿತ್ತು.

ಇವರು ದೀರ್ಘ ಕಾಲದಿಂದ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜದ ನಾನಾ ಕ್ಷೇತ್ರಗಳಿಗೆ ಮುನ್ನಡೆ ನೀಡಿದ್ದರು. ಅವರ ಸಾವು ಮನೆತನ ಹಾಗೂ ಭಕ್ತ ಸಮುದಾಯಕ್ಕೆ ತುಂಬಲಾರದ ನಷ್ಟ.

ಗುರು ಉಪದೇಶ ಪತ್ರಿಕೆಯ ಗೌರವ ಸಂಪಾದಕ ಗುಂಡುರಾವ್ ಕಡಣಿ, ಸಂಪಾದಕ ಸಿದ್ದಣಗೌಡ ಮಾಲಿ ಪಾಟೀಲ, ಉಮೇಶ ಸಿದ್ದಣಗೋಳ, ಬಸವರಾಜ ಟೆಂಗಳಿ ಸೇರಿದಂತೆ ಅನೇಕ ಧಾರ್ಮಿಕ, ಸಾಂಸ್ಕೃತಿಕ ಮುಖಂಡರು ಶೋಕ ವ್ಯಕ್ತಪಡಿಸಿದ್ದಾರೆ.

ಕುಟುಂಬ ಮೂಲಗಳಿಂದ ಲಭಿಸಿದ ಮಾಹಿತಿಯಂತೆ, ಅಂತ್ಯಕ್ರಿಯೆ ಇಂದು (ಸೋಮವಾರ) ಸಾಯಂಕಾಲ 4 ಘಂಟೆಗೆ ಕಡಣಿ ಗ್ರಾಮದ ಸ್ವಂತ ಜಮೀನಿನಲ್ಲಿ ವೀರಶೈವ ಧರ್ಮದ ವಿಧಿ ವಿಧಾನಗಳ ಪ್ರಕಾರ  ನೆರವೇರಲಿದೆ.

ಗುರುಗಳ ಆತ್ಮಕ್ಕೆ ಶಾಂತಿ ಸಿಗಲೆಂದು ಭಕ್ತರು, ಶಿಷ್ಯರು ಹಾಗೂ ಸ್ಥಳೀಯರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಓಂ ಶಾಂತಿ... ಓಂ ಸದ್ಗತಿ...

-