ನಾಳೆ ನಿಜಶರಣ ಅಂಬಿಗರ ಚೌಡಯ್ಯನ 905ನೇ ಜಯಂತ್ಯೋತ್ಸವ ಆಚರಣೆ ಕಾರ್ಯಕ್ರಮ

ನಾಳೆ ನಿಜಶರಣ ಅಂಬಿಗರ ಚೌಡಯ್ಯನ 905ನೇ  ಜಯಂತ್ಯೋತ್ಸವ ಆಚರಣೆ ಕಾರ್ಯಕ್ರಮ

ನಾಳೆ ನಿಜಶರಣ ಅಂಬಿಗರ ಚೌಡಯ್ಯನ 905ನೇ ಜಯಂತ್ಯೋತ್ಸವ ಆಚರಣೆ ಕಾರ್ಯಕ್ರಮ 

ಚಿಂಚೋಳಿ: ನಿಜಶರಣ ಅಂಬಿಗರ ಚೌಡಯ್ಯ ನವರ 905ನೇ ಜಯಂತ್ಯೋತ್ಸವ ಹಾಗೂ ಕೋಲಿ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಮೇ.4 ರವಿವಾರದಂದು ಸುಲೇಪೇಟ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕೋಲಿ ಸಮಾಜದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಆವಂಟಿ ಅವರು ತಿಳಿಸಿದ್ದಾರೆ. 

ಪ್ರಕಟಣೆ ಹೊರಡಿಸಿರುವ ಅವರು, ಅಂಬಿಗರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲರು ಉದ್ಘಾಟಿಸಲಿದ್ದಾರೆ. ರಟಕಲ ಗೌರಿ ಗುಡ್ಡ ಆಶ್ರಮದ ಶ್ರೀ ರೇವಣಸಿದ್ದ ಶರಣರು ಹಾಗೂ ಸುಲೇಪೇಟ ತೆಂಗಿನ ಮಠದ ಶ್ರೀ ಸಿದ್ದರಾಮಯ್ಯ ಸ್ವಾಮಿ ಅವರು ದಿವ್ಯ ಸಾನಿಧ್ಯ ವಹಿಸಿಕೊಳ್ಳಲಿದ್ದಾರೆ. ಮಾಜಿ ಸಚಿವರು ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣಪ್ಪ ಕಮಕನೂರ ಹಾಗೂ ಡಾ. ಸಾಯಿಬಣ್ಣ ತಳವಾರ, ಶಾಸಕ ಡಾ. ಅವಿನಾಶ ಜಾಧವ, ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಕೆಪಿಸಿಸಿ ಉಪಾಧ್ಯಕ್ಷ ಸುಭಾಶ ರಾಠೋಡ, ಬಾಲರಾಜ ಗುತ್ತೇದಾರ, ಸಂಜೀವನ ಯಾಕಾಪೂರ ಅವರು ಆಗಮಿಸಲಿದ್ದು, ಕೋಲಿ ಸಮಾಜದ ಕೂಲ ಬಾಂಧವರು ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶ್ವಸಿಗೊಳಿಸಬೇಕೆಂದು ಕೋರಿದ್ದಾರೆ.