ಕಲಬುರಗಿ: ಶಾಲೆಯ ವಾರ್ಷಿಕೋತ್ಸವ

ಕಲಬುರಗಿ: ಶಾಲೆಯ ವಾರ್ಷಿಕೋತ್ಸವ

ಕಲಬುರಗಿ: ಶಾಲೆಯ ವಾರ್ಷಿಕೋತ್ಸವ ಜರುಗಿತು 

ಕಲಬುರಗಿ: ನಗರದ ಶಾಹಬಜಾರಲ್ಲಿರುವ ಶುಕ್ಲಾ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಷಾ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ದಕ್ಷಿಣ ಬಿಇಒ ವಿಜಯಕುಮಾರ್ ಜಮಖಂಡಿ ಉದ್ಘಾಟಿಸಿದರು.

"ಈ ವರ್ಷ ನಮ್ಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವು ಯಶಸ್ವಿಯಾಗಿ ಜರಗಿತು. ವಿವಿಧ ಸಾಂಸ್ಕೃತಿಕ, ಕ್ರೀಡಾ, ಮತ್ತು ಶಿಕ್ಷಣದ ಕಾರ್ಯಕ್ರಮಗಳು ಏರ್ಪಡಿಸಲ್ಪಟ್ಟವು. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅತ್ಯುತ್ತಮ ಅವಕಾಶವನ್ನು ಪಡೆದರು. ಈ ವರ್ಷ ನಡೆಯುವ ಈ ಮಹತ್ವದ ಕಾರ್ಯಕ್ರಮವು ಎಲ್ಲಾ ಭಾಗವಹಿಸಿದವರಿಗಾಗಿ ಸ್ಮರಣೀಯ ಅನುಭವವಾಗಿತ್ತು. ಎಂದರು.

ಈ ಸಂದರ್ಭದಲ್ಲಿ (ಮಾಜಿ ಪಾಲಿಕೆ ಸದಸ್ಯರು ಹಾಗೂ ನ್ಯಾಯವಾದಿ ಆರತಿ ತಿವಾರಿ, ಗೋದುತಾಯಿ ಮಹಿಳಾ ಬಿ.ಎಡ್ ಕಾಲೇಜಿನ ಉಪ ಪ್ರಾಂಶುಪಾಲರಾದ ಸುಪ್ರಿಯಾ ಅರಳಿಮಾರ್, ಜಿಲ್ಲಾ ರಜಪೂತ ಸಮಾಜದ ಮಹಿಳಾ ಅಧ್ಯಕ್ಷೆ ಅನಿತಾ ಸದ್ದಿವಾಲ್, ಶಾಲೆಯ ಅಧ್ಯಕ್ಷ ವಿನಯ್ ಶುಕ್ಲಾ, ಕಾರ್ಯದರ್ಶಿ ವರ್ಷಾ ಶುಕ್ಲಾ, ಎಸ್‌ಬಿ ಪಿಯುಸಿ ಕಲಾ ಕಾಲೇಜಿನ ಪ್ರಾಚಾರ್ಯ ಬಸಮ್ಮ ಶಂಕ್ರಲಿಂಗ್, ಶಾಲೆಯ ಮುಖ್ಯೋಪಾಧ್ಯಾಯ ವಸಂತರಾವ್ ಕದಂಖಾನೆ ಸೇರಿದಂತೆ ಶಿಕ್ಷಕಿಯರು, ನರ್ಸರಿ, ಎಲ್‌ಕೆಜಿ, ಯುಕೆಜಿ ಮಕ್ಕಳು, ಪಾಲಕರು ಇದ್ದರು.