ಬಿ.ಇಡಿ ಫಲಿತಾಂಶ: ಸ್ವಾತಿಗೆ ಆರನೇ ರ್ಯಾಂಕ್, ಸಿಮ್ರಾಗೆ 7ನೇ ರ್ಯಾಂಕ್
ಬಿ.ಇಡಿ ಫಲಿತಾಂಶ: ಸ್ವಾತಿಗೆ ಆರನೇ ರ್ಯಾಂಕ್, ಸಿಮ್ರಾಗೆ 7ನೇ ರ್ಯಾಂಕ್
ಕಲಬುರಗಿ: ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ಇತ್ತೀಚೆಗೆ ನಡೆಸಿದ ಬಿ.ಇಡಿ ಪರೀಕ್ಷೆಯಲ್ಲಿ ನಗರದ ದರ್ಗಾ ರಸ್ತೆಯ ನಾಗಾಂಬಿಕಾ ಬಿ.ಇಡಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಆರು ಮತ್ತು ಏಳನೇ ರ್ಯಾಂಕ್ ಪಡೆದಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಬಿರಾದಾರ ತಿಳಿಸಿದ್ದಾರೆ.
ಕಾಲೇಜಿನ ಸ್ವಾತಿ (ಶೇ 92.29) ಹಾಗೂ ಸಿಮ್ರಾ ನಿಶಾತ್(ಶೇ 92.08) ಕ್ರಮವಾಗಿ 6 ಮತ್ತು 7ನೇ ಪಡೆದಿದ್ದು, ಇತ್ತೀಚೆಗೆ ನಡೆದ ವಿಶ್ವವಿದ್ಯಾಲಯದ 16 ನೇ ಘಟಿಕೋತ್ಸವದಲ್ಲಿ ಪದವಿ ಪ್ರಮಾಣಪತ್ರ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಆರ್. ಎಸ್. ಪಾಟೀಲ್, ಪ್ರಾಚಾರ್ಯ ಡಾ. ಅರವಿಂದ ಬಿರಾದಾರ, ಉಪನ್ಯಾಸಕರಾದ ಸಬಿಹಾ ಸುಲ್ತಾನಾ, ಮಹಾನಂದಾ ಪಾಟೀಲ್, ಪಾರ್ವತಿ ಶಿವಲಿಂಗಪ್ಪ, ಭಾಗ್ಯಶ್ರೀ ಪಾಟೀಲ, ವಿಜಯ್ ಕುಮಾರ ಮಡಿವಾಳ, ಬಸವರಾಜ ಶರಣಬಸಪ್ಪ ಹಾಗೂ ಸಿಬ್ಬಂದಿ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.