ಎಂ ಎಸ್ ಎ ಎಲ್ ಮಧ್ಯದಂಗಡಿಗಳಲ್ಲಿ ಎಂ ಆರ್ ಪಿ ದರದಲ್ಲಿ ಮದ್ಯ ಮಾರಾಟ ಮಾಡುವಂತೆ ಆಗ್ರಹಿಸಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ: ಶ್ರೀರಾಮ ಸೇನಾ ತಾಲೂಕ ಅಧ್ಯಕ್ಷ ಮಲ್ಕಣ್ಣ ಹಿರೇ ಪೂಜಾರಿ ಉಪಾಧ್ಯಕ್ಷ ಭಗವಂತರಾಯ ಗಾಣಿಗೇರ್
ಎಂ ಎಸ್ ಎ ಎಲ್ ಮಧ್ಯದಂಗಡಿಗಳಲ್ಲಿ ಎಂ ಆರ್ ಪಿ ದರದಲ್ಲಿ ಮದ್ಯ ಮಾರಾಟ ಮಾಡುವಂತೆ ಆಗ್ರಹಿಸಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ: ಶ್ರೀರಾಮ ಸೇನಾ ತಾಲೂಕ ಅಧ್ಯಕ್ಷ ಮಲ್ಕಣ್ಣ ಹಿರೇ ಪೂಜಾರಿ ಉಪಾಧ್ಯಕ್ಷ ಭಗವಂತರಾಯ ಗಾಣಿಗೇರ್.
ಜೇವರ್ಗಿ: ತಾಲೂಕಿನಲ್ಲಿರುವ ಎಂ ಎಸ್ ಐ ಎಲ್ ಮಧ್ಯದ ಅಂಗಡಿಗಳಲ್ಲಿ ಎಂ ಆರ್ ಪಿ ದರ ಬಿಟ್ಟು ಒಂದು ಬಾಟಲಿಯಿಂದ ಐದು ರೂಪಾಯಿ ಹತ್ತು ರೂಪಾಯಿ ಹೆಚ್ಚು ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಎಮ್ ಎಸ್ ಐ ಎಲ್ ಜಿಲ್ಲಾ ವ್ಯವಸ್ಥಾಪಕರು ತಿಂಗಳು ತಿಂಗಳು ಹಣ ತಿನ್ನುತ್ತಿದ್ದಾರೆ ಅದಕ್ಕೆ ಸೂಕ್ತವಾದ ಕ್ರಮ ಕೈಗೊಳ್ಳಬೇಕು.
ಇಲ್ಲವಾದರೆ ಜೇವರ್ಗಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುತ್ತದೆ ಶ್ರೀರಾಮ ಸೇನೆಯ ತಾಲೂಕ ಅಧ್ಯಕ್ಷರಾದ ಮಲಕಣ್ಣ ಹಿರೇ ಪೂಜಾರಿ ಹಾಗೂ ಉಪಾಧ್ಯಕ್ಷರಾದ ಭಗವಂತರಾಯ ಗಾಣಿಗೇರ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಇಂತಹ ಅಂಗಡಿಗಳಿಗೆ ಸೂಕ್ತ ಕ್ರಮ ಜರುಗಿಸುವಂತೆ ತಾಲೂಕ ಅಬಕಾರಿ ಆರಕ್ಷಕರಾದ ರೇವಣಸಿದ್ದಪ್ಪ ಜೇರಟಗಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಎಮ್ ಎಸ್ ಐ ಎಲ್ ಮಧ್ಯದ ಅಂಗಡಿಗಳಿಗೆ ಭೇಟಿ ನೀಡಿ ಎಂ ಆರ್ ಪಿ ಬಿಟ್ಟು ಹೆಚ್ಚಿನ ದರದಲ್ಲಿ ಮಧ್ಯವನ್ನು ಮಾರಾಟ ಮಾಡುತ್ತಿದ್ದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.ಶ್ರೀರಾಮ ಸೇನೆ ತಾಲೂಕ ಅಧ್ಯಕ್ಷರು ಮಲ್ಕಣ್ಣ ಹಿರೇ ಪೂಜಾರಿ ಶ್ರೀರಾಮ ಸೇನೆ, ಶಿವಕುಮಾರ್ ಮಡಿವಾಳ, ಜಗಳಗೊಂಡ, ಸಚಿನ್ ಚಂದ್ರು, ದೇಸಾಯಿ ಶರಣು ಸಿದ್ದು, ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ ಜಟ್ಟಪ್ಪ ಎಸ್ ಪೂಜಾರಿ