ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣದ ದೀಪ ಹಚ್ಚಿದ ರಾಂಪೂರೆಯವರು
Education HKE
ಶೈಕ್ಷಣಿಕ ಅಂಧಕಾರದಲ್ಲಿದ್ದ ಕಲ್ಯಾಣ ಕರ್ನಾಟಕ ಭಾಗವನ್ನೂ ಶಿಕ್ಷಣ ಎಂಬ ದೀಪದಿಂದ ಬೆಳಗಿದ ಮಹಾನ್ ನಾಯಕ ಮಹಾದೇವಪ್ಪ ರಾಂಪೂರೆಯವರು
ಕಲಬುರಗಿ ದಕ್ಷಿಣ ಭಾರತದ ಮದನ ಮೋಹನ ಮಾಳವೀಯ ಎಂದೆ ಪ್ರಸಿದ್ಧವಾಗಿರುವ ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಕ್ರಾಂತಿಯ ರೂವಾರಿ, ಶಿಕ್ಷಣದ ಅಂಧಕಾರದಲ್ಲಿ ಮುಳುಗಿದ್ದ ಕಲ್ಯಾಣ ಕರ್ನಾಟಕದ ಭಾಗಕ್ಕೆ ಶೈಕ್ಷಣಿಕ ದೀಪವನ್ನು ಬೆಳಗಿದ ಮಹಾನ್ ನಾಯಕ ಲಿಂ. ಮಹಾದೇವಪ್ಪ ರಾಂಪೂರೆಯಾಗಿದ್ದಾರೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಅವರು ಹೇಳಿದರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಆರ್ ಎಂ ಸಿ ಮೇಡಿಕಲ್ ಕಾಲೇಜಿನಲ್ಲಿ ನಡೆದ ಮಹಾದೇವಪ್ಪ ರಾಂಪೂರೆಯವರ 103 ನೇಯ ಜನ್ಮ ದಿನೋತ್ಸವ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬೀದರ ದಿಂದ ಬೆಂಗಳೂರುವರೆಗೆ ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಕಲ್ಯಾಣ ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ವರು ರಾಂಪೂರೆಯವರು. ಇಂದು ಅವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಯ ಪರಿಣಾಮವಾಗಿ ಇಂದು ಕಲಬುರ್ಗಿ ನಗರ ಶೈಕ್ಷಣಿಕ ಹಬ್ ಆಗಿ ಪರಿವರ್ತನೆಯಾಗಿದೆ. ಕಲಬುರ್ಗಿ ನಗರ ಕೇಂದ್ರ ಸರ್ಕಾರದ ಒಂದು ವಿವಿ ,ರಾಜ್ಯ ಸರ್ಕಾರದ ಒಂದು ವಿವಿ ಹಾಗೂ ಖಾಸಗಿ 3 ವಿ ವಿ.ಒಟ್ಟು 5 ವಿಶ್ವವಿದ್ಯಾಲಯಗಳನ್ನು 4 ಮೆಡಿಕಲ್ ಕಾಲೇಜು ಹಲವಾರೂ ಎಂಜಿನಿಯರಿಂಗ್ ಕಾಲೇಜು ಹತ್ತು ಹಲವು ವಿವಿಧ ವಿಷಯಗಳ ಕಾಲೇಜು ಹೊಂದಿ ಇಂದು ಉನ್ನತ ಶಿಕ್ಷಣ ಪಡೆಯಬೇಕಾದರೆ ನಮ್ಮ ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಕಲಬುರ್ಗಿ ಕಡೆ ನೋಡುವ ದೃಷ್ಟಿ ಕೋನಕ್ಕೆ ರಾಂಪೂರೆಯವರ ದೂರದೃಷ್ಟಿ ಕಾರಣವಾಗಿದೆ ಎಂದು ಹೇಳಿದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಇನ್ನೂ ಹೆಮ್ಮರವಾಗಿ ಬೇಳೆಯ ಬೇಕಾಗಿತ್ತು ಆದರೆ ರಾಂಪೂರೆಯವರು ಕಂಡ ಕನಸಿನಂತೆ ಬೆಳೆಯದೆ ಇರುವುದಕ್ಕೆ ಬೇಸರವು ಆಗುತ್ತದೆ. ಈಗ ಅಧಿಕಾರಕ್ಕೆ ಬಂದ ನಾನು ರಾಂಪೂರೆಯವರ ಕಂಡ ಕನಸನ್ನು ನನಸು ಮಾಡುವ ಪ್ರಯತ್ನ ಮಾಡುತ್ತೇನೆ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತೇನೆ ಎಂದು ಹೇಳಿದರು.
ಉಪಾಧ್ಯಕ್ಷರಾದ ರಾಜು ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯ ಚಿಂಚೊಳ್ಳಿ, ಸಹ ಕಾರ್ಯದರ್ಶಿಗಳಾದ ಕೈಲಾಸ ಪಾಟೀಲ್
ಆಡಳಿತ ಮಂಡಳಿ ಸದಸ್ಯರಾದ ಡಾ ಶರಣಬಸಪ್ಪ ಹರವಾಳ, ಅನೀಲ ಮರಗೋಳ, ನಾಗಣ್ಣ ಘಂಟಿ, ಸಾಯಿನಾಥ ಪಾಟೀಲ್, ಮಹಾದೇವಪ್ಪ ರಾಂಪೂರೆಯವರು ಡಾ ಅನಿಲ ಪಟ್ಟಣ ಡಾ ಕಿರಣ್ ದೇಶಮುಖ್ ಮೆಡಿಕಲ್ ಕಾಲೇಜು ಡೀನ್ ಡಾ ಶರಣಗೌಡ ಪಾಟೀಲ ಪಾಳಾ ಉಪಸ್ಥಿತರಿದ್ದರು