ಉಮೇಶ್ ಕೆ ಮುದ್ನಾಳ್ ನೇತೃತ್ವದಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ
(ಯಾದಗಿರ ಜಿಲ್ಲಾ ವರದಿಗಾರರು : ಶರಣಪ್ಪ ಸಾವೂರ್)
ಉಮೇಶ್ ಕೆ ಮುದ್ನಾಳ್ ನೇತೃತ್ವದಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ
ಯಾದಗಿರ : ಯಾದಗಿರ ನಗರದ ಹೊರವಲಯದಲ್ಲಿ ನಿರ್ಮಾಣವಾಗಿರುವ ಡಿ ದೇವರಾಜ ಅರಸು ಬಾಲಕರ ಮೆಟ್ರಿಕ್ ಪೂರ್ವ ವಸತಿ ನಿಲಯವು ಎರಡು ವರ್ಷಗಳ ಹಿಂದೆ ಉದ್ಘಾಟನೆಯಾಗಿದ್ದು ಇದರಲ್ಲಿ ಎರಡು ವರ್ಷ ನರಕ ಅನುಭವಿಸತಿದ್ದ ವಿದ್ಯಾರ್ಥಿಗಳ ಪರಸ್ಥಿತಿ ಮನಗಂಡು ಉಮೇಶ್ ಕೆ ಮುದ್ನಾಳ್ ನೇತೃತ್ವದಲ್ಲಿ ದೀಡಿರ್ ಪ್ರತಿಭಟನೆ ನಡೆಸಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ರಸ್ತೆ ಮತ್ತು ಮೂಲಭೂತ ಸೌಕರ್ಯ ಒದಗಿಸಿ ಕೊಡಬೇಕೆಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
ನಿರಂತರ ಧಾರಾಕಾರ ಮಳೆಯಿಂದ ವಿದ್ಯುತ್ ಸಮಸ್ಯೆ, ರಸ್ತೆ ತಗ್ಗು ಗುಂಡಿ ಬಿದ್ದು ಸಮಸ್ಯೆ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ತೊಂದರೆಯಾಗುತ್ತಿದ್ದು ಕೂಡಲೇ ಸಚಿವರು ಗಮನಹರಿಸಬೇಕು. ವಿದ್ಯಾರ್ಥಿಗಳನ್ನು ಪೋಷಕರು ನೋಡಲು ಬಂದಾಗ ಎರಡು ಕಡೆ ದಾರಿ ಇಲ್ಲದೇ ಪರದಾಡುವ ಪರಿಸ್ಥಿತಿ ಉಂಟಾಗಿದೆ.
ಗಂಜಿನಲ್ಲಿರುವ ಪದವಿ ಪೂರ್ವ ವಸತಿ ನಿಲಯ ನಿರ್ಮಾಣವಾಗಿದ್ದು, ಹಳೆಯದು ಮತ್ತು ಹೊಸ ಕಟ್ಟಡ 3 km ಅಂತರ ವಾಗಿದ್ದು ಪದವಿ ಪೂರ್ವ ಹಾಸ್ಟೆಲ್ ಹೊಸದು ನಿರ್ಮಾಣವಾಗಿದ್ದು ಅತೀ ಶೀಘ್ರದಲ್ಲಿ ಉದ್ಘಾಟನೆ ಮಾಡಿ ಕೊಡ್ಬೇಕು. ಸಮೀಪದಲ್ಲಿ ಗ್ರಂಥಾಲಯವಿದ್ದು ಮಕ್ಕಳು ಉಪಹಾರದ ನಂತರ ಅಭ್ಯಾಸ ಮಾಡೋಕೆ ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಶಾಸಕರು ಅನುಕೂಲ ಮಾಡಿ ಕೊಡಬೇಕು.
ಈ ವಸತಿ ನಿಲಯಕ್ಕೆ ಎರಡು ಕಡೆ ಇಂದ ಬರಲು ರಸ್ತೆ ಇಲ್ಲಾ ಧಾರಾಕಾರ ಮಳೆ ಇಂದ ಕಾಲು ದಾರಿ ಸಂಪೂರ್ಣ ಹದೆಗೆಟ್ಟಿದ್ದು ರಾತ್ರಿ ವೇಳೆ ವಿಷ ಜಂತು ಗಳಿಂದ ಭಯದ ವಾತಾವರಣದಲ್ಲಿ ವಿದ್ಯಾರ್ಥಿಗಳು ಬದುಕುವಂತಾಗಿದೆ.
ಈ ವಸತಿ ನಿಲಯಕ್ಕೆ ಗ್ರಾಮೀಣ ಭಾಗದ ವಿದ್ಯುತ್ ಸಂಪರ್ಕವನ್ನು ತೆರವು ಗೊಳಿಸಿ ನಗರ ಸಂಪರ್ಕ ವಿದ್ಯುತ್ ಮಾಡಿ ಕೊಡಬೇಕು. ಒಂದು ವಾರದಲ್ಲಿ ಉದ್ಘಾಟನೆ ಮಾಡಿ ಕೊಡದಿದ್ದರೆ ಇದೆ ಹೊಸ ಕಟ್ಟಡದಲ್ಲಿ ಮುಂಭಾಗದಲ್ಲಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿದಾರೆ.ಇದೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಇದ್ದರು.
ಡಿ.ದೇವರಾಜು ಅರಸು ಪದವಿ ಪೂರ್ವ ವಸತಿ ನಿಲಯ ವಿದ್ಯಾರ್ಥಿಗಳಿಗೆ ಬಿಲ್ಡಿಂಗ್ ಇಲ್ಲದ ಕಾರಣ ಈ ವಿದ್ಯಾರ್ಥಿಗಳಿಗೆ ಡಿ ದೇವರಾಜ ಅರಸು ವಸತಿ ನಿಲಯದಲ್ಲಿ ತಾತ್ಕಾಲಿಕವಾಗಿ ಬಳಸಲಾಗಿದ್ದು ಈ ನಿಲಯಕ್ಕೆ ಮೂಲಭೂತ ಸೌಕರ್ಯವಿಲ್ಲ ಮೂಲಭೂತ ಸೌಕರ್ಯ ಒದಗಿಸಿ ಪದವಿ ಪೂರ್ವ ಬಿಲ್ಡಿಂಗ್ ಉದ್ಘಾಟನೆ ಮಾಡಿ ಆ ಮಕ್ಕಳನ್ನು ಅಲ್ಲಿಂದ ಸ್ಥಳಾಂತರ ಮಾಡಿ ಶಿಕ್ಷಣಕ್ಕೆ ಅನುವು ಮಾಡಿ ಕೊಡಬೇಕೆಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ ಮುದ್ನಾಳ್ ಆಗ್ರಹಿಸಿದ್ದಾರೆ.