ಫೆ. 3ರಿಂದ ಅಳ್ಳೋಳ್ಳಿ ಅಯ್ಯಪ್ಪಯ್ಯ ಸ್ವಾಮೀಜಿ ಜಾತ್ರೆ

ಫೆ. 3ರಿಂದ ಅಳ್ಳೋಳ್ಳಿ ಅಯ್ಯಪ್ಪಯ್ಯ ಸ್ವಾಮೀಜಿ ಜಾತ್ರೆ

ಫೆ. 3ರಿಂದ ಅಳ್ಳೋಳ್ಳಿ ಅಯ್ಯಪ್ಪಯ್ಯ ಸ್ವಾಮೀಜಿ ಜಾತ್ರೆ

ಚಿತ್ತಾಪುರ ತಾಲೂಕಿನ ಅಳೋಳ್ಳಿ ಗ್ರಾಮದ ಗದ್ದಗಿ ಮಠದ ಅಯ್ಯಪ್ಪಯ್ಯಸ್ವಾಮೀಜಿ ಅವರ ಜಾತ್ರಾ ಮಹೋತ್ಸವ ಫೇ. 3ರಿಂದ ಶೇ. 27ರವರೆಗೆ ನಡೆಯಲಿದೆ ಎಂದು ಬಾಬು ಜಗಜೀವನರಾಂಅಖಿಲ ಭಾರತೀಯಸಮತಾ ಆಂದೋ ಲನಾ ಸಮಿತಿ ತಾ ಲೂಕು ಅಧ್ಯಕ್ಷ ರಾಜಣ್ಣ ಕರದಾಳ ತಿಳಿಸಿದ್ದಾರೆ.

ಫೇ.3 ರಂದು ಸೋಮವಾರ ಗಂಗಾಸ್ಥಳ, 4ರಂದು ಮಂಗಳವಾರ ಮಹಾಪ್ರಸಾದ. ಕಾರಣಿಕ ಪೂಜೆ, 5ರಂದು ಬುಧವಾರ ಮಹಾಸೇವೆ. ರಾತ್ರಿ 9ಕ್ಕೆ ಶ್ರೀ ನಾಗಪ್ಪಯ್ಯ ಮಹಾಸ್ವಾಮಿಗಳಿಗೆ ತುಲಾಬಾರ ಕಾರ್ಯಕ್ರಮ, 6ರಂದು ಗುರುವಾರ ಕುಸ್ತಿ ಪಂದ್ಯ, 7ರಂದು ಶುಕ್ರವಾರ ದಶಮಿ ಮೌನೇಶ್ವರ ಮಹಾಪ್ರಸಾದ, 8ರಂದು ಶನಿವಾರ ದಶಮಿಸೇವೆ, 12ರಂದು ಬುಧವಾರ ಹಾಲೋಕುಳಿ, 14ರಂದು ಶುಕ್ರವಾರ ಗಂಗಮ್ಮನ ಪೂಜೆ, 18ರಂದು ಮಂಗಳವಾರ ತುರಕರ ಲಂಕಿ ಪ್ರಸಾದ. 26ರಂದು ಬುಧವಾರ ಶಿವರಾತ್ರಿ ಜಾಗರಣೆ. 27ರಂದು ಗುರುವಾರ ಶಿವರಾತ್ರಿ ಅಮವಾಸ್ಯೆ ಕಾರ್ಯಕ್ರಮಗಳು ಜರುಗಲಿವೆ.

ಜಾತ್ರಾ ಮಹೋತ್ಸವ ನಿಮಿತ್ತ ಫೇ.6 ರಿಂದ 10 ದಿನ ಜಾನುವಾರು ಜಾತ್ರೆ ನಡೆಯಲಿದೆ.ಫೇ. 5ರಿಂದ ರಿಂದ ಸತತ 4 ದಿನಗಳವರೆಗೆ ಪ್ರತಿದಿನ ರಾತ್ರಿ 10.30ಕ್ಕೆ "ಎಚ್ಚರ ತಂಗಿ ಎಚ್ಚರ" ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.