ಬಸವಣ್ಣ ನಿಜವಾದ ಸಮಾಜ ಸುಧಾರಕ: ಸುರೇಶ್ ಕಾನೇಕರ

ಬಸವಣ್ಣ ನಿಜವಾದ ಸಮಾಜ ಸುಧಾರಕ: ಸುರೇಶ್ ಕಾನೇಕರ
ಕಲಬುರಗಿ: ಹನ್ನೆರಡನೆಯ ಶತಮಾನದ ಬಸವಣ್ಣ ವರ್ಗ,ವರ್ಣ,ಲಿಂಗ,ಭೇದ ಭಾವವನ್ನು ಹೊಡೆದೊಡಿಸಿದ ನಿಜವಾದ ಸಾಮಾಜಿಕ ಸುಧಾರಕರಾಗಿದ್ದರು ಎಂದು ಯುವ ಧುರೀಣ ಸುರೇಶ ಕಾನೇಕರ ಬಣ್ಣಿಸಿದರು.
ಕೃಷ್ಣಾ ನಗರದಲ್ಲಿ ಜಿಲ್ಲಾ ಸಿರಿಗನ್ನಡ ವೇದಿಕೆ ಹಮ್ಮಿಕೊಂಡ ಬಸವ ಜಯಂತಿಯನ್ನು ಸಸಿಗೆ ನಿರೆರೆದು ಉದ್ಘಾಟಿಸಿ ಮಾತನಾಡಿದರು. ನಮ್ಮ ಅಂಧಕಾರ, ಮೌಢ್ಯ ಸಂಪ್ರದಾಯಗಳನ್ನು ಮೀರಿ ಸಮ ಸಮಾಜವನ್ನು ನಿರ್ಮಿ ಸಿದವರು ಎಂದರು.
ಸಾಹಿತಿ ಡಾ.ಜಯದೇವಿ ಗಾಯಕವಾಡ ಅವರು
ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂಬುದರ ಲ್ಲಿ ಎರಡು ಮಾತಿಲ್ಲ.ಅವರ ಹಲವಾರ ಯೋಜನೆಗಳು ಇಂದಿಗೂ ಅನುಕರಣೀಯ. ಬುದ್ಧ ಮಹಿಳೆಗೆ ಸ್ವಾತಂತ್ರ್ಯ ನೀಡಿದ ನಂತರದಲ್ಲಿ ಬಸವಣ್ಣ ಮಹಿಳಾ ಸಮಾನತೆ ತಂದವರೆಂದರು.
ಅಧ್ಯಕ್ಷತೆ ವಹಿಸಿದ ಜಿಲ್ಲಾ ಸಿರಿಗನ್ನಡ ವೇದಿಕೆ ಅಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ ಮಾತನಾಡಿ ಬುದ್ಧ,ಬಸವ, ಅಂಬೇಡ್ಕರ್ ಅವರು ತ್ರಿರತ್ನರಾಗಿ ಸಮಾಜ ಸುಧಾರಕ,ಚಿಂತಕ,ಸಾಹಿತ್ಯ-ಚಳವಳಿ ಮಾಡಿದ ಮಹಾತ್ಮರು ಎಂದರು. ಡಾ.ರಾಜಕುಮಾರ ಮಾಳಗೆ ಸ್ವಾಗತಿಸಿದರು ಡಾ.ಶೀಲಾದೇವಿ ಬಿರಾದಾರ, ಡಾ.ಸುಖದೇ ವಿ ಘಂಟೆ,ಸಾಕ್ಷಿ ಜಿ,ಡಾ.ಅವಿನಾಶ ದೇವನೂರ,ಡಾ.ಬಸವರಾಜ ದಯಾಸಾಗರ,ವಿಜಯಕುಮಾರ ಚೆಟ್ಟಿ ಬಸವಣ್ಣನವರ ಕುರಿತು ಕವನ ವಾಚಿಸಿದರು.ಡಾ.ಪೀರಪ್ಪ ಸಜ್ಜನ ನಿರೂಪಿ ಸಿದರು.ಹಳಕಟ್ಟಿ ಪ್ರತಿಷ್ಠಾನ ಕಾರ್ಯದರ್ಶಿ ಆಕಾಶ ತೆಗನೂರು ವಂದಿಸಿದರು
ವರದಿ ಡಾ. ಅವಿನಾಶ್ ಎಸ್ ದೇವನೂರ,