ಬೀದಿ ಬದಿಯಲ್ಲಿ ಕುಳಿತುಕೊಂಡು ವ್ಯಾಪಾರಸ್ಥರಿಗೆ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಮೇಯರ್‌ಗೆ ಮನವಿ

ಬೀದಿ ಬದಿಯಲ್ಲಿ ಕುಳಿತುಕೊಂಡು ವ್ಯಾಪಾರಸ್ಥರಿಗೆ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಮೇಯರ್‌ಗೆ ಮನವಿ

ಬೀದಿ ಬದಿಯಲ್ಲಿ ಕುಳಿತುಕೊಂಡು ವ್ಯಾಪಾರಸ್ಥರಿಗೆ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಮೇಯರ್‌ಗೆ ಮನವಿ

ಕಲಬುರಗಿ : ನಗರದ ಬೀದಿ ಬದಿಯಲ್ಲಿ ಕುಳಿತುಕೊಂಡು ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರಿಗೆ ಈಗಾಗಲೇ ಪಾಲಿಕೆಯಿಂದ ನೀಡಿರುವ ಹಳೆ ಜೈಲ್ ಸೂಪರ 2008/24 ಮಾರ್ಕೆಟದಲ್ಲಿ ವ್ಯಾಪಾರ ಮಳಿಗೆ, ವಲಯ-1 ಗುರುತಿಸಲ್ಪಟ್ಟಿದ್ದು ಸದರಿ ಸ್ಥಳದಲ್ಲಿ ಮೂಲಭೂತ ಸೌಕರ್ಯ ಒದಗಿಸಬೇಕು, ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಬ್ಬಗಳು ಹತ್ತಿರದಲ್ಲಿದ್ದು ಸದರಿ ಸ್ಥಳದಲ್ಲಿ ಎಲ್ಲಾ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ಅನುಕೂಲಗಳನ್ನು ಮಾಡಿಕೊಡಬೇಕೆಂದು ಅಖಿಲ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ಜಗನ್ನಾಥ ಸೂರ್ಯವಂಶಿ ಅವರು ಮೇಯರ್ ಯಲ್ಲಪ ನಾಯ್ಕೋಡಿ ಅವರಿಗೆ ಮನವಿ ಸಲ್ಲಿಸಿದರು. 

ಉಲ್ಲೇಖ ದಿನಾಂಕ: 22.07.2024ರಲ್ಲಿ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈಗಾಗಲೇ ಹಳೆ ಜೇಲ್ ಚೌಪಾಟಿ ಸೂಪರ ಮಾರ್ಕೆಟ್ ಜಾಗದಲ್ಲಿ ಬೀದಿ ಬದಿಯಲ್ಲಿ ಕುಳಿತುಕೊಂಡು ಸರಾಫ್ ಬಜಾರ, ಕಿರಾಣಾ ಬಜಾರ, ಚಪ್ಪಲ ಬಜಾರ, ಕಪಡಾ ಬಜಾರ, ಜನತಾ ಬಜಾರ, ದತ್ತ ಮಂದಿರ, ಸಿಟಿ ಬಸ್ ನಿಲ್ದಾಣ ಸೇರಿದಂತೆ ಕಲಬುರಗಿ ನಗರದಾದ್ಯಂತ ರಸ್ತೆ ಬೀದಿ ಬದಿಯಲ್ಲಿ ಕುಳಿತುಕೊಂಡು ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರಿಗೆ 2014 ಮತ್ತು 2019 ರ ಕಾಯ್ದೆಯನ್ವಯ ದಿನಾಂಕ: 02.08.2017 ರಂದು ಅಂದಿನ ನಗರಾಭಿವೃದ್ಧಿ ಸಚಿವರಾದ ಸನ್ಮಾನ್ಯ ಶ್ರೀ ರೋಷನ್ ಬೇಗ್ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶರಣಪ್ರಕಾಶ ಪಾಟೀಲ ಹಾಗೂ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀ ಪಿ.ಸುನೀಲ ಕುಮಾರ ರವರು ಮತ್ತು ಅಧಿಕಾರಿ ವರ್ಗದವರು ಹಳೆ ಜೇಲ್ ಚೌಪಾಟಿ ಸ್ಥಳವನ್ನು ಪರಿಶೀಲಿಸಿ ಈ ಸ್ಥಳದಲ್ಲಿ ಬೀದಿ ಬದಿಯಲ್ಲಿ ಕುಳಿತುಕೊಂಡು ಸೂಪರ ಮಾರ್ಕೆಟ್ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರನ್ನು ಈ ಸ್ಥಳದಲ್ಲಿ ವ್ಯಾಪಾರ ಮಾಡಲು ಮತ್ತು ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸೌಕರ್ಯಗಳನ್ನು ಒದಗಿಸಬೇಕೆಂದು ನಗರಾಭಿವೃದ್ಧಿ ಸಚಿವರು ಪಾಲಿಕೆಯ ಆಯುಕ್ತರಾದ ಪಿ.ಸುನೀಲ ಕುಮಾರ ರವರಿಗೆ ನಿರ್ದೇಶನ ನಿಡಿದ್ದರು. ಆದರೆ 2017 ರಿಂದ ಇಲ್ಲಿಯವರೆಗೆ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳು ಕೂಡ ಒದಗಿಸಿಲ್ಲ. 

ಅಲ್ಲದೆ ಪಾಲಿಕೆಯ ವಲಯ-1, 2 ಮತ್ತು 3 ರ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಐ.ಟಿ.ಐ. ಕಾಲೇಜು ಎದುರುಗಡೆ, ಎಂ.ಎಸ್.ಕೆ.ಮಿಲ್ ರಸ್ತೆ ಕಲಬುರಗಿ, ಡಂಕಾ ವೃತ್ತದಿಂದ ಪಾಕಿಜಾ ವೈನ್ ಶಾಪ್ ವರೆಗೆ, ಕೆ.ಎಂ.ಎಫ್. ಡೈರಿ ಎದುರುಗಡೆ, ಅಣಕಲ್ ಪೆಟ್ರೋಲ್ ಬಂಕ್ ಎದುರುಗಡೆ, ಅಂಡರಬ್ರಿಜ್ ಪಂಚಶೀಲ ನಗರ, ಆಳಂದ ಚೆಕ್‌ಪೊಸ್ಟ, ಸೂಪರ ಮಾರ್ಕೆಟ್, ಕಲಬುರಗಿ ಈ ಏಳು ಪ್ರದೇಶಗಳಲ್ಲಿ ಬೀದಿ ಬದಿಯಲ್ಲಿ ಕುಳಿತುಕೊಂಡು ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರನ್ನು ಈ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ವ್ಯಾಪಾರ ಮಾಡಲು ವ್ಯವಸ್ಥೆಗಳನ್ನು ಮಾಡಿಕೊಡುತ್ತೇವೆ ಎಂದು ದಿನಾಂಕ: 25.04.2015 ರಂದು ಅಂದಿನ ಕಲಬುರಗಿ ಮಹಾನಗರಪಾಲಿಕೆಯ ಆಯುಕ್ತರಾದ ಶ್ರೀ ಎಸ್.ಬಿ.ಕಟ್ಟಿಮನಿಯವರು ಈಗಾಗಲೇ ನಿರ್ದೇಶನವನ್ನು ನೀಡಿದ್ದರು. ಆದರೆ, ಇಲ್ಲಿಯವರೆಗೆ ಬೀದಿ ಬದಿಯಲ್ಲಿ ಕುಳಿತುಕೊಂಡು ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರನ್ನು ಏಳು ಪ್ರದೇಶಗಳಲ್ಲಿ ಸ್ಥಳ ನಿಗದಿ ಮಾಡಿರುವುದಿಲ್ಲ, ಕುಡಿಯುವ ನೀರು, ವಿದ್ಯುತ್, ಶೌಚಾಲಯ ಯಾವುದೇ ಸೌಲಭ್ಯಗಳು ನೀಡದೇ ಕಲಬುರಗಿ ನಗರದಲ್ಲಿ ಜನರು ಓಡಾಡಲು, ನಡೆದಾಡಲು, ಈ ಬೀದಿ ಬದಿಯಲ್ಲಿ ಕುಳಿತುಕೊಂಡು ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರಿಂದ ವಾಹನ ಸವಾರರಿಗೆ ಮತ್ತು ಜನಸಾಮಾನ್ಯರಿಗೆ ತುಂಬಾ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಅಲ್ಲದೆ ದಸರಾ, ದೀಪಾವಳಿ, ಗಣೇಶ ಚತುರ್ಥಿ, ರಮ್ಜಾನ್ ಈ ಧಾರ್ಮಿಕ ಹಬ್ಬಗಳಲ್ಲಿ ಸಾರ್ವಜನಿಕರು ಪೂಜಾ ಸಾಮಗ್ರಿಗಳನ್ನು ಖರೀದಿಸಲು ಅಥವಾ ಇನ್ನಿತರ ವಸ್ತುಗಳ ಖರೀದಿಗೆ ಆಗಮಿಸಿದ ಸಂದರ್ಭಗಳಲ್ಲಿ ಮೊಬೈಲ್ ಕಳ್ಳತನ, ಕಳ್ಳತನ, ಧರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ತಾವುಗಳು ಹಾಗೂ ಪೊಲೀಸ ಆಯುಕ್ತರು, ಸಂಚಾರಿ ಪೊಲೀಸರು ಈಗಾಗಲೇ ತಮ್ಮ ಇಲಾಖೆಯಿಂದ ಗುರುತಿಸಿರುವ ಏಳೂ ಸ್ಥಳಗಳಲ್ಲಿ ವ್ಯಾಪಾರ ಮಾಡಲು ಅನುಕೂಲಗಳನ್ನು, ವ್ಯವಸ್ಥೆಗಳನ್ನು ಮಾಡಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು.

ಈ ವಿಷಯವಾಗಿ ಮಾನ್ಯ ಆಯುಕ್ತರು, ಕಲಬುರಗಿ ಮಹಾನಗರ ಪಾಲಿಕೆ, ಕಲಬುರಗಿ ರವರಿಗೆ ಉಲ್ಲೇಖದನ್ವಯ ಮನವಿ ಅರ್ಜಿ ಸಲ್ಲಿಸಿರುತ್ತೇವೆ ಹಾಗೂ ಮೌಖಿಕವಾಗಿಯೂ ಕೂಡಾ ಮನವಿ ಮಾಡಿಕೊಂಡಿರುತ್ತೇವೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ಅಲ್ಲದೆ ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಬ್ಬಳು ಹತ್ತಿರದಲ್ಲಿದ್ದು, ಸದರಿ ಹಳೆ ಜೈಲ್ ಸೂಪರ ಮಾರ್ಕೆಟದಲ್ಲಿ ವ್ಯಾಪಾರ ಮಳಿಗೆ, ವಲಯ-1 ಗುರುತಿಸಲ್ಪಟ್ಟಿದ್ದು ಸದರಿ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ವ್ಯಾಪಾರ ಮಾಡಿಕೊಳ್ಳಲು ಸೌಕರ್ಯಗಳನ್ನು ಒದಗಿಸಬೇಕು. ಅಲ್ಲದೆ ತಾವುಗಳು ಸ್ಥಳಕ್ಕೆ ಭೇಟಿ ನೀಡಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಹೋರಾಟಗಾರ ಮಂಜುನಾಥ ನಾಲವಾರಕರ ಇದ್ದರು.