ನಮ್ಮ ದೇಶ ಭಾವೈಕ್ಯತೆಯ ನೆಲೆವೀಡು : ಸಾಹಿತಿ ಡಾ ಕೆ ಗಿರಿಮಲ್ಲ
ನಮ್ಮ ದೇಶ ಭಾವೈಕ್ಯತೆಯ ನೆಲೆವೀಡು : ಸಾಹಿತಿ ಡಾ ಕೆ ಗಿರಿಮಲ್ಲ
ಕಲಬುರಗಿ : ಭಾರತೀಯ ಇತಿಹಾಸ ಮತ್ತು ಪರಂಪರೆಯನ್ನು ಅವಲೋಕಿಸಿದಾಗ ಹಿಂದು ಮತ್ತು ಮುಸ್ಲಿಂ ಧರ್ಮದವರು ಸಹೋದರತೆಯಿಂದ ಬಾಳುವ ಮೂಲಕ ನಮ್ಮ ನಾಡು ಭಾವೈಕ್ಯತೆಯ ನೆಲೆವೀಡಾಗಿಸಿದ್ದು ಭಾರತೀಯರಾದ ನಮಗೆ ಹೆಮ್ಮೆಯ ಸಂಗತಿ ಎಂದು ಸಾಹಿತಿ ಹಾಗೂ ಸರಕಾರಿ ಕಿರಿಯ ತಾಂತ್ರಿಕ ಶಾಲೆಯ ಪ್ರಾಂಶುಪಾಲ ಡಾ ಕೆ ಗಿರಿಮಲ್ಲ ಅಭಿಪ್ರಾಯಪಟ್ಟಿದ್ದಾರೆ.
ನಗರದ ಪ್ರೀಯದರ್ಶಿನಿ ಇಂದಿರಾಗಾಂಧಿ ಕೈಗಾರಿಕಾ ತರಬೇತಿ ಕಾಲೇಜಿನಲ್ಲಿ ಶಿವಬಸವ ಸಾಂಸ್ಕೃತಿಕ ಸಂಸ್ಥೆಯಿಂದ ಯುಗಾದಿ ಹಾಗೂ ರಂಜಾನ್ ಹಬ್ಬಗಳ ಪ್ರಯುಕ್ತ ಆಯೋಜಿಸಿದ್ದ "ಭಾವೈಕ್ಯ ಬೇಸುಗೆ ಭಾರತ ವಿಶೇಷ ಭಾವ ಸಮ್ಮಿಲನ" ಕಾರ್ಯಕ್ರಮವನ್ನೂ ಉದ್ಘಾಟಿಸಿ ಅವರು ಮಾತನಾಡಿದರು.
ಖ್ಯಾತ ಚಿತ್ರ ಕಲಾವಿದ ಡಾ ರೇಹಮಾನ ಪಟೇಲ್ ಮಾತನಾಡಿ, ಭಾವೈಕ್ಯತೆ, ಸಹಬಾಳ್ವೆಯು ಸಮಾಜದ ಸುಸ್ಥಿರ ಅಭಿವೃದ್ಧಿಗೆ ಮತ್ತು ರಾಷ್ಟ್ರೀಯ ಏಕತೆಗೆ ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನದಿಸಿನ್ನೂರಿನ ಮಹಾಲಕ್ಷ್ಮಿ ಗುರುಪೀಠ ಹಾಗೂ ಶರಣ ಹೂಗಾರ ಮಾದಯ್ಯ ಗುರುಪೀಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಗುರು ರಾಜೇಂದ್ರ ಶೀವಯೋಗಿಗಳು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ, ಕೃಷಿ ಶ್ರೀ ಪ್ರಶಸ್ತಿ ಪುರಸ್ಕೃತ ಲೇಖಕ, ಪ್ರೊ ಯಶವಂತರಾಯ ಅಷ್ಠಗಿ, ಕವಿ ಖಾಜಾ ಪಟೇಲ್ ಭಂಕುರ, ಸಮಾಜ ಸೇವಕ ರಮೇಶ್ ತೇಗ್ಗಿನಮನಿ, ಮಾತನಾಡಿದರು.
ಪ್ರೀಯದರ್ಶಿನಿ ಇಂದಿರಾಗಾಂಧಿ ಕೈಗಾರಿಕಾ ತರಬೇತಿ ಕಾಲೇಜಿನ ಪ್ರಾಂಶುಪಾಲ ಸಿದ್ದಣ್ಣ ಭಾವಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಶಿವಬಸವ ಸಾಂಸ್ಕೃತಿಕ ಸಂಸ್ಥೆಯ ಕಾರ್ಯದರ್ಶಿ ಹಾಗೂ ಜಾನಪದ ಕಲಾವಿದ ವಿಶ್ವನಾಥ ತೋಟ್ನಳ್ಳಿ ನೀರೂಪಿಸಿದರು.ಸಂಜು ಹಾಗರಗಿ ಸ್ವಾಗತಿಸಿದರು. ನಾಗೇಂದ್ರ ಭಜಂತ್ರಿ ವಂದಿಸಿದರು. ಸಿಬ್ಬಂದಿ ವರ್ಗದ, ದತ್ತಪ್ಪ, ಕಲ್ಲಪ್ಪ, ಕಲಾವಿದ ರಾಮು ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಹಿಂದೂ-ಮುಸ್ಲಿಂ ಭಾವೈಕ್ಯತೆಯು ಭಾರತದ ಸಾಂಸ್ಕೃತಿಕ ಪರಂಪರೆಯ ಭಾಗವಾಗಿದ್ದು, ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆಯಿಂದ ಬದುಕುವುದು ಇದರ ಮೂಲ ತತ್ವವಾಗಿದೆ
-ಪ್ರೊ ಯಶವಂತರಾಯ ಅಷ್ಠಗಿ
ಕೃಷಿ ಶ್ರೀ ಪ್ರಶಸ್ತಿ ಪುರಸ್ಕೃತ ಲೇಖಕರು, ಕಲಬುರಗಿ
