ಹಬ್ಬಗಳು ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ: ಮಠಪತಿ

ಹಬ್ಬಗಳು ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ: ಮಠಪತಿ

  ಹಬ್ಬಗಳು ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ: ಮಠಪತಿ 

ಕಲಬುರಗಿ:ಹಬ್ಬಗಳು ಆಚರಿಸುವ ಪದ್ಧತಿ ಇಂದು ನಿನ್ನೆಯದಲ್ಲ.ಹಬ್ಬಗಳು ಸಂಬಂಧಗಳನ್ನು ಬೆಸೆಯುವ ಕೊಂಡಿಯಾಗಿವೆ.ಯುಗಾದಿ ಹಬ್ಬವು ಸಾಮರಸ್ಯದ ಹೊಸ ಬೆಳಕು ಎಂದು ಸಂಸ್ಕೃತ ಪಂಡಿತ,ಚಿಂತಕ ಶ್ರೀ ಶಿವರುದ್ರಯ್ಯ ಮಠಪತಿ ಅವರು ಅಭಿಪ್ರಾಯಪಟ್ಟರು.

ಜಯನಗರದ ಶಿವಮಂದಿರದಲ್ಲಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಯುಗಾದಿ ಹಬ್ಬದ ನಿಮಿತ್ತ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಯುಗಾದಿ ಸಂಭ್ರಮ ಬೇವು-ಬೆಲ್ಲ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಯುಗಾದಿ ಅಂದರೆ ಹೊಸ ಯುಗ ಪ್ರಾರಂಭ. ಇಂದಿನ ಪೀಳಿಗೆ ಹಬ್ಬಗಳ ಆಚರಣೆ ಮಹತ್ವ ಅರಿತಿಲ್ಲ.ಅವರಿಗೆ ಈ ಕುರಿತು ತಿಳಿ ಹೇಳುವ ಕೆಲಸ ಆಗಬೇಕು.ಹಿರಿಯರು ಹಾಕಿಕೊಟ್ಟ ಸಂಪ್ರದಾಯಗಳು ಮುಂದುವರೆಸುವ ಕೆಲಸ ನಮ್ಮ ನಿಮ್ಮೆಲ್ಲರದಾಗಿದೆ. ಬೇವು ಬೆಲ್ಲ ಸುಖ ದು:ಖಗಳಂತೆ.ಅವರೆಡು ಸಮನಾಗಿ ಸ್ವೀಕರಿಸುವ ಮನೋಭಾವ ಹೊಂದಿರಬೇಕು ಎಂದರು.

ಟ್ರಸ್ಟ್ ಅಧ್ಯಕ್ಷ ಡಾ.ಲಿಂಗರಾಜ ಸಿರಗಾಪೂರ ಮಾತನಾಡಿ ಸಂಪ್ರದಾಯಗಳು, ಹಬ್ಬಗಳು ಭಾವೈಕ್ಯತೆಯ ಸಂಕೇತಗಳು.ಹಿಂದೂ ಸಂಪ್ರದಾಯದಲ್ಲಿ ಯುಗಾದಿ ಹೊಸ ವರ್ಷದ ಪ್ರಾರಂಭ ಹಬ್ಬವಾಗಿದೆ.ಪ್ರಕೃತಿಯಲ್ಲಿ ಹೊಸ ಬದಲಾವಣೆಗಳಾಗುತ್ತದೆ.ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂಬಂತೆ ಎಲ್ಲವೂ ಮರಳಿ ಬರಬೇಕು.ಹೊಸತನ ಪ್ರಾರಂಭವಾಗುತ್ತದೆ ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಟ್ರಸ್ಟ್ ಹಿರಿಯ ಸದಸ್ಯ ಎಂ.ಡಿ.ಮಠಪತಿ ಮಾತನಾಡಿ ಬೇವು ಬೆಲ್ಲದಂತೆ ಮನುಷ್ಯ ಜೀವನದಲ್ಲಿ ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸಬೇಕು ಎಂದರು.ನಂತರ ಬೇಂವು ರಸ ಸೇವಿಸುವ ಮೂಲಕ ಶುಭಾಷಯ ವಿನಿಮಯ ಮಾಡಿಕೊಂಡರು.

ಟ್ರಸ್ಟ್ ಸೂರ್ಯಕಾಂತ ಕೆ.ಬಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ವಾಲಿ ವೇದಿಕೆ ಮೇಲೆ ಉಪಸ್ಥಿತರಿದ್ದರು.ಟ್ರಸ್ಟ್ ಸಂಘಟನಾ ಕಾರ್ಯದರ್ಶಿ ಬಂಡಪ್ಪ ಕೇಸೂರ,ಕೋಶಾಧ್ಯಕ್ಷ ಬಸವರಾಜ ಮಾಗಿ ಹಿರಿಯರಾದ ಬಸವರಾಜ ಅನ್ವರಕರ, ಭೀಮಾಶಂಕರ ಶೆಟ್ಟಿ, ಗುರುಪಾದಪ್ಪ ಕಾಂತಾ,ಮನೋಹರ ಬಡಶೇಷಿ, ಮಲ್ಲಯ್ಯ ಸ್ವಾಮಿ ಗಂಗಾಧರಮಠ , ಮಲ್ಲಿಕಾರ್ಜುನ ಕಲ್ಲಾ,ಬಸವರಾಜ ಪುರ್ಮಾ, ವೀರಪ್ಪ ಹುಡುಗಿ,ಎಸ್.ಡಿ.ಸೇಡಂಕರ, ನೇಮಿನಾಥ ಜೈನ್,ರಾಜಶೇಖರ ಮಾಗ,ಟ್ರಸ್ಟ್ ಮಹಿಳಾ ಘಟಕದ ಉಪಾಧ್ಯಕ್ಷೆ ಅನಿತಾ ನವಣಿ, ಸುಷ್ಮಾ ಮಾಗಿ, ಲತಾ ತುಪ್ಪದ,ಸುರೇಖಾ ಬಾಲಕೊಂದೆ, ಗೀತಾ ಸಿರಗಾಪೂರ, ಪಾರ್ವತಿ ಶೆಟ್ಟಿ, ಗೀತಾ ಹುಡುಗಿ, ಜಗದೇವಿ ಭೂತಪುರ ಸೇರಿದಂತೆ ಅನೇಕ ಮಹಿಳೆಯರು, ಹಿರಿಯರು ಭಾಗವಹಿಸಿದ್ದರು.