ವಿಧಾನ ಪರಿಷತ್ ಸಭಾಪತಿಗಳಿಗೆ ಕಲ್ಬುರ್ಗಿಯಲ್ಲಿ ಅಭಿನಂದನೆ ಹಾಗೂ ಸನ್ಮಾನ
ವಿಧಾನ ಪರಿಷತ್ ಸಭಾಪತಿಗಳಿಗೆ ಕಲ್ಬುರ್ಗಿಯಲ್ಲಿ ಅಭಿನಂದನೆ ಹಾಗೂ ಸನ್ಮಾನ
ಕಲ್ಬುರ್ಗಿ: ಇಂದು ವಿಧಾನ ಪರಿಷತ್ ಸಭಾಪತಿಗಳಾಗಿ ಬಸವರಾಜ ಹೊರಟ್ಟಿ ಅವರ ಅನುಪಸ್ಥಿತಿಯಲ್ಲಿ ನೇಮಕಗೊಂಡಿರುವ ಸನ್ಮಾನ್ಯರಾದ ಶ್ರೀ ತಿಪ್ಪಣ್ಣಪ್ಪ ಕಮಕ್ನೂರ್ ಅವರಿಗೆ ಕಲ್ಬುರ್ಗಿ ನಗರದ ಸ್ವಗೃಹದಲ್ಲಿ ಭರ್ಜರಿ ಅಭಿನಂದನೆ ಸಲ್ಲಿಸಿ ಗೌರವ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ನಗರದ ಖ್ಯಾತ ವೈದ್ಯರಾದ ಡಾ. ಶ್ರೀರವೀಂದ್ರ ಪಾಟೀಲ್ ಅವರು ಹಾಗೂ ಸರಳ ಸಜ್ಜನಿಕೆಯ ಹೃದಯವಂತ ಕರುಣಾಮಯರಾದ ಶ್ರೀ ಪವನಕುಮಾರ ಬಿ ವಳಕೇರಿ ಅವರೊಂದಿಗೆ ಸಾನಿಧ್ಯದಲ್ಲಿ ಶ್ರೀ ಶ್ರೀ ವಿಜಯಕುಮಾರ ಮುತ್ಯ ನಂದಿಕೂರ, ಲೋಹಿತ್ ವೈ ಕಲ್ಲೂರ (ಮಾಜಿ ಅಧ್ಯಕ್ಷರು, ವಿಶ್ವಕರ್ಮ ನಿಗಮ, ಬೆಂಗಳೂರು), ನಾರಾಯಣ ಸರ್ವಶೆಟ್ಟಿ (ಉದ್ಯಮಿ) ಹಾಗೂ ವೀರೇಶ್ ಸೇರಿದಂತೆ ಅನೇಕ ಅಭಿಮಾನಿ ಬಳಗದವರು ಉಪಸ್ಥಿತರಿದ್ದು, ಸಭಾಪತಿಗಳವರನ್ನು ಗೌರವಿಸಿ ಶುಭಾಶಯಗಳನ್ನು ಅರ್ಪಿಸಿದರು.
ಸಭೆಯಲ್ಲಿ ಮಾತನಾಡಿದ ಗಣ್ಯರು, ಶ್ರೀ ತಿಪ್ಪಣ್ಣಪ್ಪ ಕಮಕ್ನೂರ್ ಅವರು ಜನಪರ ಸೇವೆಯಲ್ಲಿ ತೊಡಗಿ ಸಮಾಜದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಪ್ರಶಂಸಿಸಿದರು. ಅವರ ನೂತನ ಜವಾಬ್ದಾರಿಯಲ್ಲಿ ಯಶಸ್ಸು ಸಾಧಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಹಲವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
