ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಹತ್ತು ಜನ ಮಹಿಳೆಯರಿಗೆ ಮಹಿಳಾ ಕಣ್ಮಣಿ ಪ್ರಶಸ್ತಿ ಪ್ರದಾನ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಹತ್ತು ಜನ ಮಹಿಳೆಯರಿಗೆ ಮಹಿಳಾ ಕಣ್ಮಣಿ ಪ್ರಶಸ್ತಿ ಪ್ರದಾನ
ಕಲಬುರಗಿ: ನಗರದ ಕನ್ನಡ ಭವನದಲ್ಲಿ ತ್ರೀಶಾ ಎಜುಕೇಶನ್ ಚಾರಿಟೇಬಲ್ ಮತ್ತು ವೆಲ್ವೇರ್ ಟ್ರಸ್ಟ್ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕರಾದ ಯಶೋಧಾ ಕಟಕೆ, ಸವಿತಾ ಬಿ. ನಾಸಿ, ಶೋಭಾ ಪಾಟೀಲ್, ಸಿಂಧುಮತಿ ಭೋಸ್ಲೆ, ಜ್ಯೋತಿ ಹಂಚಾಟೆ, ಜ್ಯೋತಿ ಅಕ್ಷಯ, ಸುನಿತಾ ಚೌವ್ಹಾಣ್, ರೇಖಾ ಪಾಟೀಲ್, ಮಲ್ಲಮ್ಮ ಭೀಮರೆಡ್ಡಿ, ಜಯಶ್ರಿ ಸಾಯಬಣ್ಣ ಯಾದಗಿರಿ ಇವರಿಗೆ ಮಹಿಳಾ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ, ಮಹಾನಗರ ಪಾಲಿಕೆ ಮಹಾಪೌರ ಯಲ್ಲಪ್ಪ ನಾಯಕೋಡಿ, ಲೋಕೋಪಯೋಗಿ ಇಲಾಖೆಯ ಅಧಿಕ್ಷಿಕ ಅಭಿಯಂತರ ಡಾ. ಸುರೇಶ್ ಶರ್ಮಾ, ತ್ರೀಶಾ ಎಜುಕೇಶನ್ ಚಾರಿಟೇಬಲ್ ಆಂಡ್ ವೆಲ್ವೇರ್ ಟ್ರಸ್ಟ್ ಅಧ್ಯಕ್ಷೆ ಅಶ್ವಿನಿ ಚವ್ಹಾಣ್, ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮೂಲಗೆ, ಲಕ್ಷö್ಮಣ ಚವ್ಹಾಣ ಕೆ.ಬಿ, ಪತ್ರಕರ್ತ ಸುರೇಶ ಬಡಿಗೇರ, ಸಮಾಜ ಸೇವಕಿ ಮಾಲಾ ಕಣ್ಣಿ, ಸಂಗೀತಾ ಚವ್ಹಾಣ, ಕುಮಾಸಿಂಗ್ ರಜಪುತ್, ಬ್ರಹ್ಮವೇಣಿ ಪೋತೆ, ಸುನಂದಾ ರಾಠೋಡ್ ಸೇರಿದಂತೆ ಟ್ರಸ್ಟ್ನ್ ಸದಸ್ಯರು ಇದ್ದರು.