ಸಮಾಜಮುಖಿ ಕವಿ: ಭಗತರಾಜ ನಿಜಾಮಕಾರ

ಸಮಾಜಮುಖಿ ಕವಿ: ಭಗತರಾಜ ನಿಜಾಮಕಾರ

ಸಮಾಜಮುಖಿ ಕವಿ: ಭಗತರಾಜ ನಿಜಾಮಕಾರ

ಬರೀ ಕತ್ತಲು ಕಗ್ಗತ್ತಲು

ಕುರುಡನ ಕೈಯಲ್ಲಿ ಕಂದೀಲು

ದಾರಿಯುದ್ದಕ್ಕೂ ಹೆಳವನ ಹೆಗಲು -( ಕುಬ್ಜ)

                      ಸದಾ ತಮ್ಮ ಒಡಲಾಳದ ನೋವ, ಸಂಕಟ, ಹಸಿವುಗಳಿಂದ ತತ್ತರಿಸಿಹೋದ ಜನ- ಸಮುದಾಯಗಳು ಬಹಳಷ್ಟು. ಆದರೆ ಅವುಗಳನ್ನು ಮರೆತು ಅಧಿಕಾರ,ಖುರ್ಚಿ ಸಿಕ್ಕರೆ ಮರೆತು ತಮ್ಮದೊಂದು ಹೊಸ ಸಾಮ್ರಾಜ್ಯ ನಿರ್ಮಿಸಿ ಅಮಲಿನಲಿ ತೇಲುವವರೇ ಹೆಚ್ವು‌ ಅಂತಹ ಹೊತ್ತಿನಲ್ಲಿ ಅಪವಾದವೆಂಬಂತೆ ಬದುಕು-ಬರಹ; ನಡೆ-ನುಡಿ- ನಡೆಯ ಮೂಲಕ ಬೆರಳೆಣಿಕೆಯ ಪ್ರಗತಿಪರ ವಿಚಾರಧಾರೆ ಹೊಂದಿ

ಬದುಕುತ್ತಿರುವ ಅಪರೂಪದ ಬದ್ಧತೆಯ ಕವಿ ಭಗತರಾಜ ನಿಜಾಮಕಾರ ಒಬ್ಬರು. ಅವರೊಂದು ಇಂದಿನ ಸಾಹಿತ್ಯ ಲೋಕಕ್ಕೆ ಆದರ್ಶ ಮಾದರಿ‌ ವ್ಯಕ್ತಿ. ಇವರ ಹೆಸರು ನಾನು ಬಾಲ್ಯದಿಂದಲೇ ಕೇಳುತ್ತ- ತಿಳಿಯುತ್ತ ಬೆಳೆದವನು.೧೯೯೨ ರಿಂದ ನಿಕಟ ಸಂಬಂಧ ಹೊಂದಿ ಎಂ.ಎ.ಓದುವಾಗ ಆಗಾ ಗ ರಾಯಚೂರಿನಲ್ಲಿ ಸಿಕ್ಕಾಗೊಮ್ಮೆ ಹೃದಯಸ್ಪರ್ಶಿ ಮಾತ ನಾಡುವ‌ದರಂತೆ ನಯ,ವಿನಯದ,ತೆಳು ವ್ಯಕ್ತಿ,ತೆಳು ಮಾತು ಎಂಥವರನ್ನು ಬೇಗನೆ ಮನಸ್ಸಿನ ಸೆಳೆತದ ಚುಂಬಕ ಶಕ್ತಿ ಅವರಲ್ಲಿದೆ.ಆದರೆ ಹಠ,ಛಲ ಇದ್ದಾಗ ಅವರ ಸಿಟ್ಟು, ಆಕ್ರೋಶ ವು ಮೇಳೈಸಿಕೊಂಡು ಬಂದಿವೆ.ಇವರ ಬಗ್ಗೆ ಮಾತನಾಡುವುದು,ಬರೆಯುವುದೆಂದರೆ ಸಾಹಿತ್ಯ- ರಾಯ ಚೂರಿನ ಚರಿತ್ರೆ ಇದ್ದಂತೆ.!

      ನಿಜಾಮಕಾರ ಅವರ ಮಾತುಗಳಲ್ಲಿ"ನನಗೆ ಆ ದಿನಗ ಗಳು ಇನ್ಮೂ ನೆನಪಿವೆ.ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ.ಅರಬ್ಬಿ ಸಮುದ್ರದಲ್ಲಿ ಅಲೆಗಳ ಏರಿಳಿತದ ಪರಿಣಾಮವಾಗಿ ಮಳೆ‌ ಸತತ ಆರೇಳು ದಿನ ಒಂದೇ ಸಮ ಸುರಿಯುತಿತ್ತು.ಮುಗಿಲಿಗೆ ತೂತು ಬಿದ್ದಿತ್ತೇನೋ.ನಾವು ಒಂದು ಹರಕಲು ಗುಡಿಸಿಲಿನಲ್ಲಿ ವಾಸಿಸುತ್ತಿದ್ದೇವು.ಗುಡಿಸ ಲು ಹಳೆಯದಾಗಿದ್ದರಿಂದ ಮಳೆಯ ನೀರು ಟಪ್- ಟಪ್ ಅಂತ ಎಲ್ಲಾ ಕಡೆ ಸೋರುತ್ತಿತ್ತು.ಗೋಣಿ ಚೀಲಗಳಲ್ಲಿ ನಾವು ಮಕ್ಕಳೆಲ್ಲರು ಕೈ- ಕಾಲು ಮುದುರಿಕೊಂಡು ಮಳೆ ನೀರು ಸೋರದ ಜಾಗ ಹಿಡಿದು ಸಾಮ್ರಾಜ್ಯ ಸ್ಥಾಪಿದಿಕೊ ಳ್ಳುತ್ತಿದ್ದೆವು.ರಾತ್ರಿ ತುಂಬ ಅಪ್ಪ- ಅಮ್ಮ ತೂಕಡಿಸುತ್ತಲೆ ಕಳೆ ಯುತ್ತಿದ್ದರು.ಮೊದಲೇ ಬಂಗಾಲ ಊರಾದ ನನ್ನೂರಿಗೆ ಮಳೆ ಬಂದರೆ ಎಲ್ಲರಿಗೆ ಎಲ್ಲಿಲ್ಲದ ಸಂತೋಷ!. ನಮಗೂ ಆನಂದ.ಆದರೆ ಮಳೆ ಎಷ್ಟು ಜೋರಾಗಿ ಬರುತ್ತಿತ್ತೋ, ಅಷ್ಟೇ ನಮ್ಮ ಒಡಲು ಉರಿ ಧಗಧಗಿಸುತ್ತಿತ್ತು.ಎಂದು ಬರೆದುಕೊಂಡ ಉರಿ ಇಂದಿಗೂ... ಈ ಜಗತ್ತಿನಲ್ಲಿ ಕಾಣಿ ಸುವುದರ‌ ಬಗ್ಗೆ ಪ್ರತಿಭಟನೆ ಮಾಡುತ್ತಲೇ ಬಂದ ನಿಜಾಮ ಕರ‌ ವ್ಯಕ್ತಿತ್ವವೇ‌ ಹಾಗೆ.ನೊಂದವರ ಪಾಲಿನ ಕವಿ.

       ಬಂಡಾಯದ ಎಪ್ಪತ್ತರ ದಶಕದಲ್ಲಿ ಬಂಡಾಯ -ದಲಿತ

ಸಾಹಿತ್ಯ-ಚಳವಳಿ ಏಕ ಕಾಲಕ್ಕೆ ಹುಟ್ಟಿಕೊಂಡವು.ಇದಕ್ಕೆ ಮೂಲ ಕಾರಣ ರಾಯಚೂರು!. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಧರ್ಮಸ್ಥಳದಲ್ಲಿ ಡಾ.ಎಂ.ಗೋಪಾ ಲಕೃಷ್ಣ ಅಡಿಗರ ಸರ್ವಾಧ್ಯಕ್ಷತೆ. ಆ ಸಮ್ಮೇಳನದಲ್ಲಿ ದಲಿತ ಗೋಷ್ಠಿ ಇಡಬೇಕೆಂದು ಡಾ.ಚನ್ನಣ್ಣ ವಾಲೀಕಾರ,ಬೋಳ ಬಂಡೆಪ್ಪ,ಅಮರಚಿಂತ,ನಿಜಾಮಕಾರ ಮೊದಲಾದವರು‌ ಸೇರಿ ಪತ್ರ ಬರೆದ‌ ಕಾರಣದಿಂದ ಬಂಡಾಯ ಸಾಹಿತ್ಯ ಸಂ ಘಟನೆ‌ಹುಟ್ಟಿಕೊಂಡು ಬರಲು ಮೂಲ ಕಾರಣರು.ಜೆಪ ಚಳವಳಿ,ಕಮ್ಯುನಿಸ್ಟ್ ಚಿಂತನೆ,ತೆಲುಗು ್ಇಗಂಬರ ಸಾಹಿತ್ಯ, ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್, ಆಫ್ರಿಕಾದ ಕಪ್ಪು ಸಾಹಿತ್ಯ, ವಚಬ ಚಳವಳಿ, ಮೊದಲಾದ ಕ್ರಾಂತಿ ಕಾರಕ,ಪ್ರಗತಿಪರ,ಚಿಂತಕರ ಚಿಂತನೆಗಳನ್ನು ಮೈಗೂಡಿಸಿ ಕೊಂಡವರು ಭಗತರಾಜರು.

      ಇವರು ಇವನೊಬ್ಬ‌ಬೇರೆ ಹುಟ್ಟಿದ (೨೯೮೨) ರಲ್ಲಿ ಅವರ ಮೊದಲ‌ ಕವನ‌ ಸಂಕಲನ ಪ್ರಕಟವಾಯಿತು. ಆಗಾ ಗಲೇ ಇವರೊಬ್ಬ ಕವಿಯಾಗಿ, ಸಂಘಟಕರಾಗಿ,ಚಳವಳಿಗಾ ರರಾಗಿ ರೂಪಿಸಿಕೊಂಡವರು.ವಿದ್ಯಾರ್ಥಿ ದೆಸೆಯ ಅವರ ಓದು,ಬರಹ,ಅವರಿಗೆ ಶಾಂತರಸರಂತ ಕವಿ ಗುರುಗಳಾಗಿ ಮಳೆಯ ಬಗ್ಗೆ ಪ್ರಬಂಧ ಬರೆದಾಗ ಯಾರು ಈ ಭಗತ್ ಎಂದು‌ ಹುಬ್ಬೇರಿಸುವಂತೆ ಮಾಡಿದವರು. ಆ ಪ್ರಬಂಧ ಬರೆಯುವಾಗ ಆಗಲೇ ಚನ್ನವೀರ ಕಣವಿಯವರ ಧಾರವಾ ಡದಲ್ಲಿ ಮಳೆಗಾಲ,ಮೇಘೋಪಾಸನೆ ಕವನ ಮತ್ತು ಆಂಗ್ಲ ಕವಿಯ 'The Coud' ಕವನಗಳನ್ನು ಉಲ್ಲೇಖಿಸಿ ಬರೆದ ಪ್ರಬಂಧ ಮೆಚ್ಚುಗೆ ಪಡೆಯಿತು.ಇದರಿಂದ ಬರವಣಿಗೆ ಕಡೆ ಮುಖ ಮಾಡಿದ ಭಗತರಾಜ ಹಿಂತಿರುಗಿ ನೋಡದೇ ಬರೆದ ಬರಹ ಮೌಲಿಕ.ಅಷ್ಟೇ ಗಟ್ಟಿಯಾದ ಬರಹಗಳು.ಅವರಿಗೆ ಕಾವ್ಯ ಕಟ್ಟುವುದಕ್ಕಿಂತ; ಬದುಕು ಕಟ್ಟಿ ಕೊಳ್ಳುವುದು ಮುಖ್ಯವಾಗಿತ್ತು.!.

  ‌‌‌‌ ‌‌‌ನಿಜಾಮನ ಕಾಲದಲ್ಲಿ ರಜಾಕಾರರ ಗುಂಪು ರಾಯಚೂ

ರಿನಲ್ಲಿ ಓಡಾಡಿ,ಹಳ್ಳಿ ಹಳ್ಳಿ ತಿರುಗಿ ರಾತ್ರಿ ಮತ್ತೆ ಬಂದಾಗ ರಾಯಚೂರು ಗಂಜ್ ಪ್ರದೇಶದಲ್ಲಿ ಒಂದು ಮಟನ್ ಖಾನಾವಳಿ ಅಲ್ಲಿಗೆ ಬಂದು‌ ತಿಂದು‌‌ ಹೋಗುವ ವರಿಗೆ‌‌ ಹಣ

ಕೇಳುವಂತಿಲ್ಲ.ಜೀವ ಭಯ!. ಕೊಟ್ಟರೆ ತಗೆದುಕೊಳ್ಳ ಬೇಕು.ಇರದಿದ್ದರೆ ಇಲ್ಲ.ಬಜಾರಿಗೆ ಸಾಮಾನು‌ ತರಲು ಹೋದಾಗ ಅಲ್ಲಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಹಿತಿ ಇವರ ತಂದೆ‌ನೀಡಿದರು.ಇದರಿಂದ‌ ಅನುಮಾನ ಬಂದು ಒಂದು‌ದಿನ ಮಾರ್ಗ ಮಧ್ಯ‌ನಿಲ್ಲಿಸಿ ಪ್ರಶ್ನಿಸಿದಾಗ ಇವರ ಖಾನಾವಳಿಯ ಬೀಡಿ ಅಂಗಡಿಯವ‌ ಬಚಾವ್ ಮಾಡಿ ಊರು ಬಿಡಲು ಹೇಳಿದಾಗ ಉಟ್ಟ ಬಟ್ಟೆಯಿಂದ ಪೂನಾವನ್ನು ಅಪ್ಪ- ಅಮ್ಮ,ಅಣ್ಣ- ಅಕ್ಕ ತಲುಪಿದರು. ನಂತರ ಭಾರತದ ಒಕ್ಕೂಟಕ್ಕೆ ಸೇರಿಕೊಂಡಾಗ ಮತ್ತೆ ಮರಳಿ ಬಂದರು. ಆಗ ನಾಲ್ಕು ವರ್ಷ ತರುವಾಯ ೧೯೫೨ ರಲ್ಲಿ ಶ್ರೀಮತಿ ಶಿವುಬಾಯಿ ಮತ್ತು ಶ್ರೀ ತುಳುಜಾರಾಮರ ಮಗನಾಗಿ ದಿನಾಂಕ: ೧೨-೦೬-೧೯೫೨ ರಂದು ಜನಿಸಿದರು

ರಾಯಚೂರಿನ‌ ಹಮದದ್೯ ಪ್ರಾಥಮಿಕ- ಪ್ರೌಢ ಶಿಕ್ಷಣ, ಎಲ.ವಿ.ಡಿ.ಕಾಲೇಜಿನಲ್ಲಿ ಬಿ.ಎ.ಪದವಿ‌ ೨೯೭೩ ರಲ್ಲಿ ಪಡೆದರು.ಅದೇ ವರ್ಷ ನ್ಯಾಯಾಂಗ ಇಲಾಖೆಯಲ್ಲಿ ಸೇರಿ ದರು.ತದನಂತರ ೧೯೭೭ ರಲ್ಲಿ ರಾಜ್ಯ ಲೆಕ್ಕ ಪತ್ರ ಇಲಾಖೆ ಪಬ್ಲಿಕ್ ಸರ್ವಿಸ್ ಕಮೀಷನರ್ ಮೂಲಕ ಆಯ್ಕೆ ಹೊಂದಿ ಸರಕಾರಿ ನೌಕರಿ ಮಾಡುತ್ತ ಲೆಕ್ಕಾಧಿಕಾರಿಯವರೆಗೆ ಹುದ್ದೆ ಸಮರ್ಥವಾಗಿ ನಿರ್ವಹಿಸಿದರು.ಕಪ್ಪು ಚುಕ್ಕೆ ಇಲ್ಲದೇ ಕರ್ತ ವ್ಯ ನಿರ್ವಹಿಸಿದರು. ೩೦-೦೬-೨೦೧೨ ರಲ್ಲಿ ಸೇವಾ ನಿವೃತ್ತಿ ಹೊಂದಿದರು.ಮೂವತ್ತೈದು ವರ್ಷಗಳ ಕಾಲ ಸುಧೀರ್ಘ ಸೇವಾ ಸಲ್ಲಿಸಿ ಇಲಾಖೆಗೆ- ತಮಗೂ ಒಳ್ಳೆಯ ಹೆಸರು ತಂದ ವರು.

   ‌‌‌‌‌ ಕವಿಯಾಗಿ ಭಗತರಾಜ ಅವರು‌ ಇವನೊಬ್ಬ ಬೇರೆ ಹುಟ್ಟಿದ ಎಂಬ ಕವನ ಸಂಕಲನದ ಮೂಲಕ ಚರ್ಚೆಗೆ ಕಾರಣವಾದರು.ಆದರೆ ವಿಮರ್ಶೆಗೆ‌ ಒಳಪಟ್ಟಿದ್ದು ಗಮನಾರ್ಹ.

ಉರಿವ ನಾಲಿಗೆಯ ಮಧ್ಯೆ

ಎಷ್ಟೊಂದು ಅಮವಾಸ್ಯೆ ಉಣಬೇಕು ಎಂಬ ಮನುಷ್ಯನ ನೋವಿನ ಆಶೆಯಗಳನ್ನು ಬಿತ್ತರಿಸುವ ಅವರು ನೋವು, ತಳಮಳ,ದಬ್ಬಾಳಿಕೆ,ಶೋಷಣೆ,ಕಂದಾಚಾರ,ಮೌಢ್ಯತೆ,ಸಂಪ್ರದಾಯ, ಶೋಷಣೆಗಳನ್ನು ಎದುರಿಸಿ ಜೀವನಕ್ಕಾಗಿ ಹಾತೊರೆವ ಕನಸುಗಾರ ಎಂಬುದಕ್ಕೆ‌ ಬೇರೆ ಉದಾಹರಣೆ ಬೇಕಾಗಿಲ್ಲ.ನಾಳೆಗಾಗಿ ಅವರು ಬಯಸುವ ಬಯಕೆ

ನೂರಾರು ಸೆಲೆ ಹರಿಯುವ ನದಿಗೆ

ಹಲವಾರು ಕೈಕಾಲು ಅದರ ಮೈಗರ

ಚವ ಇಗುರಿದ ಕನಸುಗಳು ಸಾವಿರಾರು

ಬರುವ ಹೊಸ ವರ್ಷಗಳಿಗೆ

ಪ್ರಯಾಣಿಸುತ್ತ,

ಬರಡು ಬಳ್ಳಿ ಚಿಗುರಿದಾಗ

ಹೂವು- ಕಾಯಿ ಬಿಎಡುವ ಸಮಯಕೆ

ಕನಸು ಬದುಕಾಗಿ

ಬದುಕು ನಾಳೆಗಾಗಿ ಕಾಯುತ್ತದೆ,ಈಗ ಮಬ ಸಾಲು ಗಳ ಮೂಲಕ ನಮ್ಮನ್ನು ಅಪಗಪಿಕೊಳ್ಳುತ್ತಾರೆ. ೨೫ ಕವನಗಳು

ಹತ್ತಾರು ವಸ್ತು ವೈವಿಧ್ಯತೆಯ ಭಾಬ ಬಿತ್ತುವ ಕವನಗಳು.

ಇಲ್ಲಿ ಪ್ರೀತಿ, ಪ್ರೇಮದ ಅನುಬಂಧವಿದೆ‌.ಪ್ರಕೃತಿ, ನಿಸರ್ಗದ ಒಳಪಿದೆ.ಬಯಲು ಸೀಮೆಯ ದಟ್ಡ ಬಿಸಿಲು ಇದೆ.ಅವನ್ನೆ ಲ್ಲವನ್ನು ಮೀರಿ ಪ್ರಚಲಿತ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸುವ ಮನೋಬಲವು ಇವೆ.

ಜಂಗು‌ ಹಿಡಿಯಲಿ

ಬಳಸುವ ಕೋವಿಗಳಿಗೆ ಈ‌ ಟ್ಯಾಂಕರಗಳಿಗೆ

ಕಿತ್ತು ಹೋಗಲಿ

ಗಡಿ ಯುದ್ಧಕ್ಕೂ ಹಬ್ಬಿದ ಈ ಬೇಲು,ಈ ರೇಖೆಗಳು- ಇಲ್ಲಿ‌ ಶಾಂತಿ ಕಾಪಾಡಲು ಬಯಸುತ್ತಲೇ,ಇವತ್ತಿನ ಜಾಗತೀಕರಣ

ಉದಾರೀಕರಣ, ಖಾಸಗೀಕರಣ, ಜಾತಿಕರಣದಿಂದ ಮನುಷ್ಯ ಮನುಷ್ಯ ನಡುವೆ ಕಂದಕ‌ ಸೃಷ್ಟಿ ಆಗುತ್ತಲಿದೆ. ಮನುಷ್ಯ, ಮಾನವೀಯತೆ ಸಂಬಂಧ‌ ಅಳಿಸಿ ಹೊಗುತ್ತಲಿ ವೆ.ಇವುಗಳನ್ನಿಲ್ಲಿ ಹೊರ ಹಾಕಿದ್ದಾರೆ.

    ‌ ಕವಿ‌ ಭಗತರಾಜ ಮನುಷ್ಯ ಪ್ರೇಮಿ.ಅದಕ್ಕೆ‌ಇಲ್ಲಿರುವ‌ ಅನೇಕ ವ್ಯಕ್ತಿ, ಸಾಧಕರನ್ನು ಕುರಿತು ಕಾವ್ಯ ಕಟ್ಟಿದ್ದಾರೆ. "ದೀನ ದಲಿತ,ಹಿಂದುಳಿದವರ ಭವಿಷ್ಯ ಬರೆದ ಯುಗಪುರು

ಷ‌ನೆಂದು- ಅರಸನ್ನು ಕರೆದರೆ ವಾಲೀಕಾರನನ್ನು" ಜೀವಂತ ಜೀವ ಸೆಲೆ ಹುಡುಕುತ್ತಿರುವ‌ಜಲಗಾರರು" ಎಂದಿದ್ದಾರೆ. ಅಮರ ಚಿಂತರಿಗೆ"ಅಂಕುಶ ಕೈಯಲ್ಲಿದ್ದರೂ/ತಿವಿಯಲು ಅರಿಯದವನು" ಎಂದರೆ ಡಿ.ಆರ್.ರನ್ನು

ಅಲ್ಲಮನ ಶೈವ‌ ಸಿದ್ಧಾಂತದಲ್ಲಿ

ಬಸವನ ಕಸಯಕ ವಚನಗಳಲ್ಲಿ

ಅಕ್ಕನ ಏಕಾಂತ ಹುಡುಕಾಟದಲ್ಲಿ...

ಎಂತಹ ಪ್ರತಿಮೆ,ಪ್ರತೀಕಗಳನ್ಮು ತಂದು‌ ಶಬ್ದ‌‌‌ಚಮತ್ಕಾರ ಮಾಡುವ‌ ಅವರ ಕಾವ್ಯ ಚಿಂತನೆಗೆ ಹಚ್ಚಿವೆ. ಐದು ಮಣಿಗ ಳು ಎಂದು‌ ಸೋನಿಯಾ, ಮೇನಕಾ,ಜಯಲಲಿತಾ, ಮಾಯಾವತಿ,ಲಲಿತಾ ನಾಯಕರ ಕುರಿತು ಸಣ್ಣ ಸಣ್ಣ ಪದ್ಯ

ದಲ್ಲಿ ಪಂಚ ಕೊಡುತ್ತಾರೆ.ಇದೇ‌ ಕಾವ್ಯಾಕರ್ಷಣೆ.

ಹಿತ್ತಲ ಗಿಡ

ಔಷಧಿ ಎಂದು ಗೊತ್ತಾಗುವ

ಮೊದಲೇ

ಹಾಸಿಗೆ ಹಿಡಿದ ಪರಿಸರ ಪ್ರೇಮಿ+ (ಮೇನಕಾ ಗಾಂಧಿ)

ಪ್ರೀತಿಯೆಂದರೆ

ಕಾಯಿ ಹೂವು ಹಣ್ಣಿನ

ವಗರು ಸಿಹಿ (ಹಾಯಿಕು)

ನೆನಪಿನ‌ ಅಲೆ

ಅಗೆದಷ್ಟು ಆಳ

ಗತಿಸಿದ ಗಳಿಗೆಗಳು

ಕೆಲವೊಮ್ಮೆ ತುಟಿ ಅರಳಿಸಿ

ಕಣ್ಣಲ್ಲಿ ಕರಗುತ್ತವೆ ( ಹನಿಗವನ) - ಈ ರೀತಿಯ ಅನೇಕ ಕವನಗಳು ನಮಗೆ‌ ಸ್ಫೂರ್ತಿ ನೀಡುತ್ತವೆ.

 ನಂತರ ಅಂದರೆ ಇಪ್ಪತ್ತು ವರ್ಷಗಳ ನಂತರ

ಬಿಸಿಲ್ಗುದುರೆ ಬೆನ್ನೇರಿ (೨೦೦೩) ಈ ಸಂಕಲನದ ಅನೇಕ ಕವಿತೆಗಳು ಹೈದಯಂಗಮವಾಗಿ ಮೂಡಿ ಬಂದಿವೆ. ಇಪತ್ತೈದು ವರ್ಷದ ಮತ್ತೆ ಭಗತನ ಪದಗಳು (೨೦೨೪) ಹೊರ ಬಂದಿವೆ.ಮೂರು ಕಾವ್ಯ ಸಂಕಲನ ಬಹು‌ ಪ್ರಸಿದ್ಧವಾದವು. ಅವರ ಬರಹವೇ ಹಾಗೆ.ದಲಿತ ಬಂಡಾಯ ಪ್ರಜ್ಞೆ, ಸಾಮಾಜಿಕ ತುಡಿತ ಅವರ ಕಾವ್ಯದಲ್ಲಿವೆ.ಮೊದಲ‌ ಸಂಕಲನ ಕ್ಕಿಂತ ಬಿಸಿಲ್ಗುದುರೆ ಬೆನ್ನೇರಿ ಈ‌ ಸಂಕಲನದಲ್ಲಿ ಪ್ರಬುದ್ಧತೆ,ಪಕ್ವತೆಯ ಅಂಶ‌ ಎದ್ದು ಕಾಣುತ್ತದೆ.ಜೀವನದ ಅಂತರಂಗ- ಬಹಿರಂಗ ಎರಡ ನ್ನು ಏಕ ಕಾಲಕ್ಕೆ ತೆರೆದಿಡುತ್ವವೆ.ಪ್ರೀತಿ,ಮಮತೆ,ವಾತ್ಸಲ್ಯ, ಸಾಮಾಜಿಕ ಕಳಕಳಿಯ ಮುಖಾಮುಖಿ ಆಗಿಸುವ‌ ಪದ್ಯಗ ಳಿವೆ.

ಇವರ ಕುರಿತು ಹಲವರ‌ ಅಭಿಪ್ರಾಯ:

ಜಂಬಣ್ಣ ಅಮರಚಿಂತ: ನಾನು ಕಂಡಂತೆ ಭಗತ್,ಒಬ್ಬ ಉಮೇದಿಯ ಮನುಷ್ಯ. ಉನ್ಮಾನದ ಮನುಷ್ಯನಲ್ಲ. ಭವಿಷ್ಯವನ್ನು ಕಣ್ಣಾಲಿಯಲ್ಲಿ ತುಂಬಿಕೊಂಡಿದ್ದ ಭಗತ. ಬಾಳಿನ ಜೊತೆ ಬರಹವನ್ನು ತಿದ್ದಿಕೊಳ್ಳುತ್ತಾ ಸುಂದರಗೊಳಿ ಸುವ ಯತ್ನದಲ್ಲಿ ತೊಎಗಿದ್ದಾನೆ.ತೊಡಗಿಸಿಕೊಂಡಿದ್ದಾನೆ. ನಮ್ಮ ನಿಮ್ಮ ಮಧ್ಯೆ ಎದ್ದು‌ ನಿಂತಿದ್ದಾನೆ.ಬರಹಗಾರನಾಗಿ

ಬಂಡಾಯ‌ ಸಾಹಿತ್ಯ ಸಂಘಟನೆಯ ಸಂಘಟನಾ ಚತುರ!.

ಚಿಕ್ಕಂದಿನಿಂದ ಬಡತನ,ನೋವು,ತಿರಸ್ಕಾರ,ಅನುಭವಿಸಿದ

ಭಗತರಾಜನಿಗೆ ಜೀವನ ಅನುಭವ ಸಹಜವಾಗಿ ದಕ್ಕಿವೆ.

ಡಾ.ಚನ್ನಣ್ಣ ವಾಲೀಕಾರ:ತಮ್ಮ ಇಲ್ಲಿಯ ಕವಿತೆಗಳ ಮೂಲಕ ಒರಟಾಗಿಯಾದರೂ ಭಗತರಾಜರು‌ ಉತ್ತರಿಸ ಲು ಹೊರಟದ್ದು ಬೆಳವಣಿಗೆಯ ಕೃಷಿಗೆ ಮಾರ್ಗದರ್ಶಿಯಾ ಗುವುದು.ರಾಯಚೂರಿನ ಭಾಷೆ,ಇಲ್ಲಿ ನೇರವಾಗಿ ನುಡಿದಿ ರುವುದು ಜನಸಾಮಾನ್ಯರಿಗೆ ಹತ್ತಿರವಾಗುವು್ಉ.

ಎಚ್.ಎಸ್.ಮುಕ್ತಾಯಕ್ಕ: ನಿಜಾಮಕಾರ ಕವಿತೆಗಳು ಬದುಕಿನ‌ ಗಾಢ ಅನುಭವಗಳು.ಒಳಹೊಕ್ಕು ನೋಡುವಿಕೆ,

ತಾನು ಕಂಡದ್ದನ್ನು ಕವನವಾಗಿಸಿ ಸಾರ್ವತ್ರಿಕ ವಾಗಿಸುವ

ಕಾಳಜಿ,ಜೀವನ ಪರವಾದ ಧೋರಣೆ ಪ್ರಗತಿಪರ ವಿಚಾರ ವನ್ನು ಪ್ರತಿನಿಧಿಸುತ್ತದೆ.

ಶಾಶ್ವತಸ್ವಾಮಿ ಮುಕ್ಕುಂದಿಮಠ:ಕವಿ ತತ್ವಜ್ಞಾನಿಯಂತೆ ವಿಚಾರಿಸಬೇಕು,ಚಿಂತನೆಗೈಯ್ಯಬೇಕು.ಬಂಡಾಯ ಕವಿಗ ಳು ಈ ತತ್ವದಿಂದ ಹೊರತಲ್ಲ.ಆತನ ಸಂದೇಶಗಳು ಜನರ ಹೃದಯ ವನ್ನು ತಟ್ಟಲು ಅವು ತತ್ವಜ್ಞಾನದ ಸ್ಪರ್ಶ ಪಡೆದಿರ ಬೇಕು.ಬಂಡಾಯದ ಕಸವಿನಲ್ಲಿಯೂ ಕಾವ್ಯಾನುಭವ ಮತ್ತು ತತ್ವಜ್ಞಾನಗಳ ಸಾರವನ್ನು ಮೇಳೈಸಿಕೊಂಡಿದೆ.

ಬಾಬು ಭಂಡಾರಿಗಲ್ಲ:ಈ ಜಿಲ್ಲೆಯ ಪ್ರಗತಿಪರ ವಿಚಾರವಾ ದಿ,ಕ್ರಿಯಾಶೀಲ ಕವಿ. ಶೋಷಣೆ ರಹಿತ ಸಮಾಜ ನಿರ್ಮಾಣಕ್ಕಾಗಿ ಹಾತೊರೆಯುವ‌ ಕವಿ‌.ಜ್ವಲಂತ ಸಮಸ್ಯೆಗಳನ್ನು ತಮ್ಮ ಕಾವ್ಯಕ್ಕೆ ವಸ್ತುವಾಗಿಸಿಕೊಂಡವರು.

      ಭಗತರಾಜ ಸೃಜನಶೀಲ, ಸೃಜನಶೀಲ ಮನಸ್ಸಿನ ಆಪ್ತ ಕವಿ.ಚಳವಳಿಗಾರ,ಹೋರಾಟಗಾರರು. ಸದ್ದುಗದ್ದಲವಿಲ್ಲದ ಸದುವಿನಯದ ಕವಿ ಪ್ರತಿಭೆ.ತನ್ನವರು,ನಮ್ಮವರು ಎಂಬ ಭಾವನೆ ಬಂದರೆ ಎಂದೂ ಕೂಡಾ ಮರೆಯದ ಮನುಷ್ಯ.

ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕರಾಗಿ, ದೇವರಾಜ ಅರಸು ವಿಚಾರ ವೇದಿಕೆ ಸಂಸ್ಥಾಪಕ ಸಂಚಾಲ‌ಕರಾಗಿ,ಕರ್ನಾಟಕ ಹಿಂದುಳಿದ ವರ್ಗದ ಒಕ್ಕೂಟ ಉಪಾಧ್ಯಕ್ಷರಾಗಿ,ಕರ್ನಾಟಕ ರಾಜ್ಯ ಕಾಟಿಕ್/ಖಟಕ್ ಸಮಾಜ ಸದಸ್ಯರಾಗಿ ಪ್ರಸ್ತುತ ಗಡಿ ಪ್ರದೇಶ ಅಭಿವೃದ್ಧಿ ಯ ಸದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಪ್ಪತ್ತುಮೂರು ವರ್ಷದ ಹಿರಿಯ ಜೀವಿ.ಮನೆ- ತಮ್ಮ ಪತ್ನಿಯ ಹೆಸರಲ್ಲಿ ಪ್ರತಿಷ್ಠಾನ ಮಾಡಿಕೊಂಡು ಸಾಹಿತಿಗಳ ಪತ್ನಿಯರ‌ ಸಾಧನೆ ಗುರುತಿ ಕೊಡುತ್ತಾ ಬಂದಿದ್ದಾರೆ.ಸಂಸಾರ,ಮನೆ,ಮಕ್ಕಳು, ಅಳಿಯ,ಸೊಸೆ,ಮೊಮ್ಮಕ್ಕಳಿಂದಿಗೆ‌ ಸುಖಮಯ ಜೀವನ‌ಸಾಗಿಸುತ್ತಾ ವ್ಯಷ್ಟಿ ಯಾಗಿ; ಬರಹ- ಚಳವಳಿ ಮೂಲಕ ಸಮಷ್ಟಿ ಪ್ರಜ್ಞೆ ಹೊಂದಿದ ವಿಶಿಷ್ಟ ವ್ಯಕ್ತಿತ್ವದ ಸಾಹಿತಿ ಭಗತರಾಜ ನಿಜಾಮಕಾರರಾಗಿದ್ದಾರೆ.

ಕಡ್ಡಿಗಳ ಗೀತಿ

ನನ್ನ ಮಗ ಜುಡುಕುತ್ತಿದ್ದಾನೆ

ನಾಳರಯ ಭಾರತವನ್ನು

ಎಂಬ ಸಾಲುಗಳ ಮೂಲಕ ಪ್ರಭುತ್ವ- ಬಹುತ್ವ‌ ಭಾರತದ

ಕನಸುಗಾರ ಕವಿಯಾಗಿ ನಮಗೆ ಕಾಣುತ್ತಾರೆ.

ಲೇಖಕರು: ಡಾ.ಗವಿಸಿದ್ಧಪ್ಪ ಎಚ್.ಪಾಟೀಲ

          ‌‌‌‌ ಸಾಹಿತಿ, ಕಲಬುರಗಿ- ಮೊ.೯೫೩೫೯೧೧೩೨೫

   ‌‌‌

      ಕಲಬುರ್ಗಿ ಜಿಲ್ಲೆಯ ಚಿತಾಪುರ ತಾಲೂಕಿನ ಶಹಬಾದ ಹತ್ತಿರದ ಶಂಕರವಾಡಿ ಒಂದು ಪ್ರಸಿದ್ಧವಾದ ಊರು. ಸುತ್ತಮುತ್ತಲಿನ ಹಳ್ಳಿಗಾಡಿನಲ್ಲಿ ಇರುವ ಕುರುಬರ ವಾಡಿ, ರಾವೂರವಾಡಿಗಳಂತೆ ಶಂಕರವಾಡಿಯು ಕೂಡ ಒಂದು. ಇಲ್ಲಿ ಅನೇಕ ಜನಪದ ವೃತ್ತಿ ಗಾಯಕರು, ಕಲಾವಿದರು, ಕಾಯಕ ಜೀವಿಗಳು, ಇದ್ದು ಅವರೆಲ್ಲ ತಮ್ಮ ಊರನ್ನು ಬೆಳಗಿದ್ದಾರೆ.ಇಂತಹ ಊರಲ್ಲಿ ವಾಲಿಕಾರ ಎಂಬ ಮನೆತನವು ಕೂಡ ಇದೆ. ಕೆಂಪಸಾಬಣ್ಣ ಈ ಮನೆತನದ ಮೂಲಪುರುಷ. ಊರಿನ ವಾಲಿಕಾರ ವೃತಿಯನ್ನು ಮಾಡುತ್ತಾ; ತಳವಾರ ಕಾಯಕವನ್ನು ಕೂಡ ನಿರ್ವಹಿಸಿಕೊಂಡು ಬಂದವರು. ಈ ಕೆಂಪ ಸಾಬಣ್ಣನ ಮಗ ಫಕೀರಪ್ಪ. ಫಕೀರಪ್ಪನವರಿಗೆ ದೊಡ್ಡ ಧೂಳಪ್ಪ ಮತ್ತು ಸಣ್ಣ ಸಿದ್ದರಾಮ ಎಂಬ ಇಬ್ಬರು ಗಂಡು ಮಕ್ಕಳು. ಧೂಳಪ್ಪ ಬಯಲಾಟ, ದೊಡ್ಡಾಟಗಳಲ್ಲಿ ಪಾತ್ರ ಮಾಡುವುದರಲ್ಲಿ ಸುತ್ತಮುತ್ತಲಿನ ಹಳ್ಳಿಗಳಿಗೆ ಹೆಸರಾಗಿದ್ದಾನೆ .ಅದರಂತೆ ತನ್ನ ಸಿರಿಕಂಠದ ಮೂಲಕ ಪ್ರಸಿದ್ಧವಾದ ಜಾನಪದ ಕವಿ ಜಾಪೂರ ರಾಯಪ್ಪನವರ ಮಗಳಾದ ಸಾಬವ್ವಳನ್ನು ಧೂಳಪ್ಪ ಅವರಿಗೆ ಕೊಟ್ಟು ಮದುವೆ ಮಾಡಿದರು. ಈ ಧೂಳಪ್ಪ ಮತ್ತು ಸಾಬಮ್ಮ ದಂಪತಿಗಳಿಗೆ ನಾಲ್ಕು ಮಕ್ಕಳು ಜನಿಸಿದರು. ಅವರಲ್ಲಿ ಬಸಂತ್ರಾಯ, ಸಾವಂತ್ರ್ಯಮ್ಮ , ನೀಲಮ್ಮ ಹಾಗೂ ನಾಲ್ಕನೆಯ ಮಗುವೇ ಚನ್ನಣ್ಣ.

   ‌‌‌ಇವರು ದಿನಾಂಕ:06-04-1943 ರಂದು ಜನಿಸಿದರು. ಕೇವಲ 10 ತಿಂಗಳ ಕೂಸಾಗಿದ್ದಾಗಲೇ ಚೆನ್ನಣ್ಣನ ಹಡೆದ ತಾಯಿಯ ನಿಧನರಾದರು.ತಾಯಿಯ ಹೆಸರು ಮತ್ತು ಸಾಕಿದ ಆ ತಾಯಿ ಹೆಸರು ಕೂಡ ಸಾಬವ್ವ ಇರುವುದು ನಮಗೆ ಕಂಡುಬರುತ್ತದೆ. ಎಂಟನೆಯ ತರಗತಿಯವರೆಗೆ ದನ-ಕುರಿ ಕಾಯುವುದರ ಜೊತೆಗೆ ಮಾವ ಸಾಬಣ್ಣ ಮತ್ತು ಅಕ್ಕ ಸಾವಂತ್ರಮ್ಮನವರು ಕೊನೆಗೆ ಶಾಲೆಗೆ ಕಳಿಸುತ್ತಾರೆ.ಶಂಕರವಾಡಿ,ನಾಲವಾರದಲ್ಲಿ ಶಿಕ್ಷಣಾಭ್ಯಾಸ. 1965 ರಲ್ಲಿ ಕಲಬುರ್ಗಿ ಶರಣಬಸವೇಶ್ವರ ಕಲಾ ಮಹಾವಿ‌ ದ್ಯಾಲಯದಿಂದ ಬಿ.ಎ. ಪದವಿ ಪಡೆದುಕೊಂಡರು. 1971ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಕನ್ನಡ ಎಂ.ಎ. ಪದವಿಯನ್ನು ಪಡೆದುಕೊಂಡು ಹೈದರಾಬಾದನ ಕರ್ನಾಟಕ ಗ್ರಾಮದೇವತೆಗಳು ಎಂಬ ವಿಷಯವನ್ನು ಆಯ್ದುಕೊಂಡು ಡಾ. ಎಂ.ಬಿ.ಕೊಟ್ರಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಪಿಎಚ್ .ಡಿ ಪದವಿಯನ್ನು ಪಡೆದುಕೊಂಡರು. ಚೆನ್ನಣ್ಣನವರು ಓದುವಾಗಲೇ ಸಾಬಣ್ಣ ಸುಣಗಾರರ ೧೯೬೨ ರಲ್ಲಿ,ಅಕ್ಕ ನೀಲಮ್ಮ ೧೯೬೪ ರಲ್ಲಿ , ೨೯೭೫ ರಲ್ಲಿ ಅಣ್ಣ ಬಸವಂತ್ರಾಯ ೧೯೮೫ ರಲ್ಲಿ ತಂದೆ ಧೂಳಪ್ಪ ನಿಧನರಾದರು. ಈ ಅನೇಕ ಬಾಲ್ಯದಲ್ಲಿ ಸಾವು-ನೋವುಗಳನ್ನು ಉಂಡು ಬಂದಿರುವ ಅನೇಕ ದುಃಖದ ಮೌನಗಳ ನಡುವೆ ಬಡತನದ ಮಧ್ಯದಲ್ಲಿ ಬೆಳೆದರು.ಆದರೆ ಸಾಹಿತಿಕ, ಸಾಂಸ್ಕೃತಿಕ ಕಲೆಗಳಿಂದ ಅತ್ಯಂತ ಶ್ರೀಮಂತವಾದ ಒಂದು ಮನೆತನವಾಗಿದೆ. 

      ಚೆನ್ನಣ್ಣ ವಿದ್ಯಾರ್ಥಿದೆಸೆಯಿಂದಲೇ ಪ್ರಬಂಧ, ಭಾಷಣ, ಗೀತ ಗಾಯನ,ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿ ಸುತ್ತಿದ್ದರು. ಅದರಂತೆ ಜಾನಪದ ಮೇಳ,ದೊಡ್ಡಾಟ, ಸಣ್ಣಾ ಟ ಹಾಡುಗಳ ಜೊತೆಗೆ ಇದ್ದವರು. ಆಡುತ್ತಾ ಕೇಳುತ್ತಾ,ನೋಡುತ್ತಾ ಬೆಳೆದವರು.ಊರಿನ ಗರಡಿ ಮನೆಯಲ್ಲಿ ವ್ಯಾಯಾಮ ಮಾಡಿ ಕುಸ್ತಿ ಪೈಲ್ವಾನ್ ಆಗಿದ್ದರು. ಜನಪದ ಕನ್ನಡ, ನುಡಿ ಆಚಾರ ವಿಚಾರ ಸಂಪ್ರದಾಯಗಳನ್ನು ರೂಢಿಸಿಕೊಂಡು ಬಂದಿರುವ ಅವರೊಬ್ಬ ಬಯಲು ವಿಶ್ವವಿದ್ಯಾಲಯದ ವಿದ್ಯಾರ್ಥಿಯಾದವರು.

            ಸೇಡಂ ತಾಲೂಕಿನ ಮುಧೋಳದಲ್ಲಿ ಇವರು ಶಿಕ್ಷಕರಾಗಿ,ಕಡಗಂಚಿಗಳಲ್ಲಿ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಿ ರಾಯಚೂರಿನ ಪಂಡಿತ್ ತಾರಾನಾಥ್ ಶಿಕ್ಷಣ ಸಂಸ್ಥೆಯ ಹಮದರ್ದ ಪ್ರೌಢ ಶಾಲೆಯಲ್ಲಿ ಕಾಯಂ ಶಿಕ್ಷಕರಾಗಿ ಸೇರಿಕೊಂಡರು. ತಮ್ಮ ವೃತ್ತಿಗಷ್ಟೇ ಅವರು ಸೀಮಿತಗೊಳ್ಳದೆ ನಂತರದಲ್ಲಿ ಎಂ.ಎ. ಪದವಿಯನ್ನು ಮಾಡಿಕೊಂಡರು.

     1971ರಲ್ಲಿ ರಾಯಚೂರಿನ ಲಕ್ಷ್ಮಿ ವೆಂಕಟೇಶ್ವರ (ಎಲ್. ವಿ. ಡಿ )ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿಗೆ ಸೇರಿದರು. ಪ್ರವಾಚಕರಾಗಿ,ಕಾರ್ಯನಿರ್ವಹಿಸಿದರು. ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ೧೯೮೭ ರಲ್ಲಿ ಪ್ರವಾಚಕರಾಗಿ,ರಾಯಚೂರು‌ ಸ್ನಾತಕೋತ್ತರ ಕೇಂದ್ರದ ಪ್ರವಾಚಕರಾಗಿ,ಪ್ರಾಧ್ಯಾಪಕ ರಾಗಿ,ಮುಖ್ಯಸ್ಥರಾಗಿ,ಸಿನೇಟ್,ಸಿಂಡಿಕೇಟ್ ಸದಸ್ಯರಾಗಿ ಸೇವೆ ಸಲ್ಲಿಸಿ 2003 ರಲ್ಲಿ ನಿವೃತ್ತರಾದರು.      

          ‌ರಾಯಚೂರಿನಲ್ಲಿದ್ದಾಗಲೇ ಅವರು ದಲಿತರ ಅಂಬೇಡ್ಕರ್ ಚಿಂತನೆಗಳನ್ನ ಓದಿಕೊಂಡವರು.ದಲಿತ ಪ್ಯಾಂಥರ್,ವಿಪ್ಲವ,ದಿಗಂಬರ ಕ್ರಾಂತಿಕಾರಿ ಚಿಂತನೆ ಅಳವ‌ಡಿಸಿಕೊಂಡು ಬಂದವರು. 

         ಅಕ್ಕ ಸಾವಂತ್ರಮ್ಮ ಮತ್ತು ಸಾಬಣ್ಣನವರ ಮಗಳಾದ‌ ಸಿದ್ಧಮ್ಮಳನ್ನು ಮದುವೆಯಾಗಿ ಸಂಸಾರದ‌‌ ಜವಾಬ್ದಾರಿ ಹೊತ್ತ ಸಿದ್ಧಮ್ಮ ಚನ್ನಣ್ಣರ ಬೆನಗನಹಿಂದಿನ ಬೆಳಕಾದರು. ತಮಗೆ ಮಕ್ಕಳಾಗಲಿಲ್ಲ ಎಂಬ ಕೊರಗು ಇದ್ದರೂ ತೋರ ಗೊಡದೇ ಹೆಂಡತಿಗೆ ಕಡೆಯಿಂದ ಮತ್ತು ತಮ್ಮ ಕಡೆಯಿಂದ

ಶಿವಪ್ರಕಾಶ,ಧೂಳರಾಜ,ಕಮಲಾಬಾಯಿ ಅವರನ್ನು ದತ್ತು ಪಡೆದವರು.ಹಿಂದೆ ಸಾವಿತ್ರಿ ಬಾಯಿ ಮತ್ತು ಜ್ಯೋತಿ ಬಾಫು ಲೆ ಅವರಂತೆ ಚನ್ನಣ್ಣ ಮತ್ತು ಸಿದ್ಧಮ್ಮ ತಮ್ಮದಲ್ಲದ ಮಗು ವಿಗೆ ಜೋಗುಳ ಹಾಡಿದವರು.ಇದು ಇತರರಿಗೆ ಮಾದರಿ.

ಕಾವ್ಯ: ಚನ್ನಣ್ಣ ಬಹುಮುಖಿ ಪ್ರತಿಭೆ.ಅವರದ್ದು ಕಾವ್ಯವೇ ಜೀವಸಳ.ಜಾನಪದ ಭಾಷೆ,ವಸ್ತು, ಲಯವನ್ನು ಹೊಂದಿದ

ಬೇಂದ್ರೆ, ಕಂಬಾರರ ತರುವಾಯ ಕಾವ್ಯದಲ್ಲಿ ಜಾನಪದ ಲಯಗಾರಿಕೆ ತಂದವರು.ನವ್ಯದ ಸಂದರ್ಭದಲ್ಲಿ ಕಾವ್ಯ ಬರೆಯಹತ್ತಿದ ಅವರು ಶಾಂತರಸ,ಕುಸನೂರು,ಮುದ್ದಣ್ಣ ನವರ ಗರಡಿಯಲ್ಲಿ ಬೆಳೆದು,ಚಂಪಾ,ಹಿಂಗಮಿರೆ,ಗಿರಡ್ಡಿ,ಪಟ್ಟಣಶೆಟ್ಟಿ,ಬಿದರಕುಂದಿಯವರ ಒಡನಾಟ ಕ ಸದ ಣುತ್ತೇವೆ‌ ನವ್ಯ ದಾಟಿ ಬಂಡಾಯ ಚಳ ಳವಳಿ ಹುಟ್ಟಿಗೆ ಕಾರಣರಾದವರು.ಬೊಳಬಂಡೆಪ್ಪ,ಅಮರ ಚಿಂತ,ಭಗತರಾಜ್,ರೊಂದಿಗೆ ಸೇರಿದವರು.ವಿದ್ಯಾರ್ಥಿ ಯಿಂದಾಗುನಿಂದ ಕಾವ್ಯ ಪ್ರಯೋಗಿದಿದವರು.ಮರದ ಮೇಲಿನ ಗಾಳಿ ಅವರ ಪ್ರಥಮ ಕವನ‌ ಸಂಕಲ ೧೯೯೬೯ ರಲ್ಲಿ ಪ್ರಕಟವಾಯಿತು. ಅಲ್ಲಿಂದ ನಿಲ್ಲದ ಅವರ ಕಾವ್ಯ ಬತ್ತದ ಝರಿಯಂತೆ ಹರಿದು ಸಾಮಾಜಿಕ‌ ಸಂವೇದನೆ, ಮನು ಕುಲದ ಚಿಂತನೆ ಹಚ್ವುತ್ತವೆ.ಕರಿತೆಲಿ ಮಾನವ‌ ಜೀಪದ,ಹಾಡಕ್ಕಿ ಹಾಗೂ ಇತರ ಪದಗಳು,ಪ್ಯಾಂಥರ್ ಪದ್ಯಗಳು,ಬಂಡೆದ್ದ ದಲಿತರ ಬೀದಿ ಹಾಡುಗಳು,ಧಿಕ್ಕಾರದ ಹಾಎಉಗಳು,ಐದು ಸಮಾಜವಾದಿ ಕಾವ್ಯಗಳು, ವಾಲೀಕಾರ ಚನ್ನಣ್ಣನ ಮುನ್ನೂರು ಮೂರು ವಚನಗಳು, ವೈರಿಗಳ ಮಧ್ಯ ಎದ್ದ ಕಗ್ಗತ್ತಲೆಯ ಖಂಡ ಕಾವ್ಯ,ಆಯ್ದ ಕವನಗಳು,ಉರ್ದು ಕವಿತೆಗಳ ಅನುವಾದ ಹೀಗೆ ಹನ್ನೊಂದು ಕವನ ಸಂಕಲನ ಮತ್ತು ಸಮಗ್ರ ಕಾವ್ಯ ಸಂಪುಟ ಹೊರ ಬಂದಿವೆ.

  ಗಪದ್ಯದ ಲಯ,ದಿಗಂಬರ ಕಾವ್ಯಕ್ಮಿಂತ ವಿಭಿನ್ನ ದಾರಿಯ 

ಕಾವ್ಯ.ಪ್ರತಿಮಾತ್ಮಕ ಕಾವ್ಯದಲ್ಲಿ ವ್ಯಕ್ತಿ ಕವಿತೆ,ಸಮಾಜ ಸ್ಪಂದನ ಕವಿತೆಗಳಿವೆ.

ಈಗೆದ್ದ ಈ ಗಾಳಿ

ಧೂಳಿಯಲಿ ನಿನ್ನ

ಮುಖ ಕಾಣದಾಗಿದೆ

ನಮಗಾವ ಹಾದಿ 

ಎಂದು ವರ್ತಮಾನದ ತಲ್ಲಣಕೆ ನಿರೇರಿಯುವರು.

ಜಾನಪದ ದಾಟಿ,ನವ್ಯದ ಆಶಯ ಹೊತ್ತರು.ಪೌರಾಣಿಕ,

ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಚಿಂತನೆಯ ಕವಿತೆಯು ಬರೆದು ಪ್ರಕಟಿಸಿದರು.

         "ಯಾವ ಅಕ್ಷರದಿಂದ ಬರೆದು ತೋರಿಸಲಯ್ಯಾ ನನ್ನ ಜನರಿಗಾದ ಎದಿಯ‌ಬ್ಯಾನಿ"- ಎಂದು ದಲಿತ,ಶೋಷಿತ ಜನಾಂಗದ ಮುಖವಾಣಿಯಾಗಿ ಬರೆದವರು.ಹಿಂದುಳಿದ ವರ್ಗದ ಕಬ್ಬಲಿಗ ಜನಾಂಗದಲ್ಲಿ ಹುಟ್ಟಿದರು ಅಂಬೇಡ್ಕರ್ ಅವರ ವಿಚಾರಧಾರೆಗೆ ಮಾರು ಹೋದವರು.

"ನೀ ಹೋದ ಮರುದಿನ ನಮ ಬದುಕು ಮೊದಲಂಗ ಆಗ್ಯಾದೋ ಬಾಬಾಸಾಹೇಬ" ಕವನ ಹಾಡದ ಹಾಡುಗಾರನಿಲ್ಲ.ಅಷ್ಟೊಂದು ಪ್ರಸಿದ್ಧವಾಗಿವೆ.

         ಅವರು ಮಹಾ ಕವಿ.ವ್ಯೋಮಾ ವ್ಯೋಮಾ, ಬುದ್ಧನ ಕುರಿತು ಮಹಾಕಾವ್ಯ ರಚಿಸಿದ್ದಾರೆ. ಸರಳ ಮುಕ್ತ ಛಂದಸ್ಸಿನಲ್ಲಿ ಬರೆದವರು.ಎಲ್ಲೂ ಪ್ಯಾರಾ, ಫುಲ್ ಸ್ಟಾಪ್,ಕಾಮ ಇಲ್ಲದ ಮುಕ್ತವಾದ ಕಾವ್ಯ.ಕಾದಂಬರಿ, ಕಥೆ,ನಾಟಕ, ಜಾನಪದ, ದೇವದಾಸಿಯರ ಸಮಗ್ರ ಅಧ್ಯಯನ,ಹೈ.ಕ. ಗ್ರಾಮ ದೇವತೆಗಳು,ಒಂದು ಗ್ರಾಮದ ಜಾನಪದೀಯ ಅಧ್ಯಯನ,

ಸಂಶೋಧನೆ, ಪ್ರವಾಸ ಸಾಹಿತ್ಯ, ಸಂಪಾದನೆ ಅವರ ಸಾಹಿತ್ಯ ಕ್ಷೇತ್ರದ ಹರವು ಬಹು ವಿಸ್ತಾರವಾದುದು.

            ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ, ಜಾನಪದ ಅಕಾಡೆಮಿ ಪ್ರಶಸ್ತಿ, ಗುಲ್ಬರ್ಗಾ ವಿಶ್ವವಿದ್ಯಾಲಯ

ರಾಜ್ಯೋತ್ಸವ ಪ್ರಶಸ್ತಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಅಲ್ಲದೇ ಹಲವಾರು ಪ್ರಶಸ್ತಿ ಗೌರವ ಲಭಿಸಿವೆ. ಜೊತೆಗೆ ಕಲಬುರಗಿ ಜಿಲ್ಲೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ಕಲ್ಯಾಣ ಕರ್ನಾಟಕದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಗೌರ ವಗಳು ಲಭಿಸಿವೆ.ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ, ಜಾನಪದ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿ ಕಾರ ಸದಸ್ಯರಾಗಿ,ಸಾರ್ವಜನಿಕ ಗ್ರಂಥಾಲಯ ಇಲಾಖೆ ಯ ಪುಸ್ತಕ ಆಯ್ಕೆ ಸಮಿತಿ ಧ್ಯಕ್ಷರಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದಾರೆ.

         ಚಿಂಚನಸೂರು ಮಾಪುರತಾಯಿ,ಕುದರಿಮೋತಿ ಚಳ ವಳಿ,ಚಂದ್ರಗುತ್ತಿ ಮೊದಲಾದ ಮಹಿಳಾ ಹೋರಾಟ,ಪ್ರಗತಿ

ಪರ ಚಳವಳಿ, ಮೊದಲಾದ ಜೊತೆ ತಮ್ಮದೇ ಸ್ವಂತ ಸಂಘ ಗಳ ಮಾಡಿ ಜನಜಾಗೃತಿ ತಂದವರು.ಬರೆಯವ,ಓದುವ, ಸಂಘಟಿಸುವ ಮನೋಭಾವ ಸದಾ ಹೊಂದಿದ್ದರು.ಅವರು ಪಟ್ಟ ಕಷ್ಟ ಕ್ಕೆ ಹಲವಾರು ಹುದ್ದೆಗಳು ದೊರಕಲಿಲ್ಲ.ಈ ಪ್ರದೇಶದ ಮುಖ ವಾಣಿ ಯಾಗಿ ಕೆಂಪಗಿಯ ಚನ್ನಣ್ಣ ಎಲ್ಲರ ಹೃದಯದ ಮಾತಾಗಿದ್ದರು.ಅವರ ಹೆಸರಲ್ಲಿ ಸರಕಾರ ಪ್ರಶಸ್ತಿ ಘೋಷಿಸಬೇಕು.ಪ್ರತಿಷ್ಠಾನ ಮಾಡಬೇಕು

ಅವರ ಸಮಗ್ರ ಸಾಹಿತ್ಯ ಸರಕಾರ ಪ್ರಕಟಿಸಿ ನ್ಯಾಯ ಒದಗಿಸಬೇಕಾಗಿದೆ.ಸಾಮಾಜಿಕ ನ್ಯಾಯದ ಪರವಾದ ಚಿಂತಕ,ಕವಿ ಡಾ.ಚನ್ನಣ್ಣ ವಾಲೀಕಾರ ನಮ್ಮ ಕಲ್ಯಾಣ ಕರ್ನಾಟಕ ಅಷ್ಟೇ ಅಲ್ಲ ಕನ್ನಡ ನಾಡಿನ ಸಾಹಿತ್ಯ ಲೋಕದ ಅಸ್ಮಿತೆಯಾಗಿದ್ದಾರೆ.

ಲೇಖಕರು: ಡಾ.ಗವಿಸಿದ್ಧಪ್ಪ ಎಚ್.ಪಾಟೀಲ, ಸಾಹಿತಿ- ಲೇಖಕ,ಕಲಬುರಗಿ-೯೫೩೫೯೧೧೩೧೫

(ಇಂದು: ದಿನಾಂಕ: ೨೯-೦೪-೨೦೨೫ ರಂದು ಅವರ ೮೩ ನೆಯ ಹುಟ್ಟು ಹಬ್ಬದ ಪ್ರಯುಕ್ತ ವ್ಯೋಮಾ ವ್ಯೋಮಾ ಪ್ರಶಸ್ತಿ ಪ್ರದಾನ ಹಿನ್ನೆಲೆಯಲ್ಲಿ ಅವರ ಬರಹ)