ಉದನೂರಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ರೈತ ಭವನ ಶಾಸಕ ಅಲ್ಲಂಪ್ರಭು ಪಾಟೀಲರಿಂದ ಲೋಕಾರ್ಪಣೆ

ಉದನೂರಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ರೈತ ಭವನ ಶಾಸಕ ಅಲ್ಲಂಪ್ರಭು ಪಾಟೀಲರಿಂದ  ಲೋಕಾರ್ಪಣೆ

ಉದನೂರಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ರೈತ ಭವನ ಶಾಸಕ ಅಲ್ಲಂಪ್ರಭು ಪಾಟೀಲರಿಂದ ಲೋಕಾರ್ಪಣೆ

ಕಲಬುರಗಿ : ಹೊರ ವಲಯದಲ್ಲಿರುವ ಉದನೂರ್ ಗ್ರಾಮದಲ್ಲಿ ಕೆ.ಎನ್.ಎನ್.ಎಲ್. ಅನುದಾನದಲ್ಲಿ 50 ಲಕ್ಷ ರುಪಾಯಿಗಳ ವೆಚ್ಚದಲ್ಲಿ ನಿರ್ಮಿಸಿರುವ ರೈತ ಭವನವನ್ನು ಸೋಮವಾರ ಸಂಜೆ ಲೋಕರ್ಪಾಣೆಗೊಳಿಸಲಾಯ್ತು.

ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರು ರೈತ ಭವನ ಉದ್ಘಾಟಿಸಿ ಮಾತನಾಡುತ್ತಾ ರೈತರ ಸಂಕಷ್ಟಗಳಿಗೆ ರಾಜ್ಯ ಸಕ್ರಾರ ಸದಾಕಾಲ ಸ್ಪಂದಿಸುತ್ತದೆ ಎಂದರು. ಸತತ ಮಳೆ, ನೆರೆ ಹಾವಳಿಯಿಂದಾಗಿ ಜಿಲ್ಲೆಯಲ್ಲಿ ಈ ಬಾರಿ ಸಾಕಷ್ಟು ಬೆಳೆಹಾನಿಯಾಗಿದೆ. 

ಈಗಾಗಲೇ ಸಿಎಂ ಸಿದ್ದರಾಮಯ್ಯನವರು ಬೆಳೆಹಾನಿ ವೀಕ್ಷಣೆ ಮಾಡಿ ರೈತರ ಸಂಕಟಗಲಿಗೆ ಸ್ಪಂದಿಸಿದ್ದಾರೆ. ಪ್ರತಿ ವಿಕೋಪ ಪರಿಹಾರ ನಿಧಿಯೊಂದಿಗೆ ರಾಜ್ಯದ ಪಾಲು ಪ್ರತಿ ಹೆಕ್ಟರ್‌ಗೆ 8, 500 ರೂ. ಸೇರಿಸಿ ಪರಿಹಾರ ನೀಡೋದಾಗಿ ರೈತರಿಗೆ ಭರವಸೆ ನೀಡಿದ್ದು ಈಗಾಗಲೇ ಸಮೀಕ್ಷೆ ಚಾಲ್ತಿಯಲ್ಲಿದೆ. ರೈತರು ಪರಿಹಾರ ಹಣ ಪಡೆದು ಉತ್ತಮ ಬದುಕು ಕಟ್ಬಬೇಕೆಂದರು.

ಉದನೂರು ಗ್ರಾಮದಲ್ಲಿನ ರೈತ ಭವನದ ಲೋಕಾರ್ಪಣೆಯಲ್ಲಿ ಸುಕ್ಷೇತ್ರ ಉದನೂರ, ಜಿಡಗಾ ಮುಗಳಖೋಡಮಠದ ಪೀರಾಧಿಪತಿಗಳಾದ ಪ. ಪೂ. ಶ್ರೀ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದರು.  

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪವನಕುಮಾರ್ ವಳಕೇರಿ, ನೀಲಕಂಠರಾವ ಮೂಲಗೆ, ಧುತ್ತರಗಾಂವ್ ಸಿದ್ದಮಾಂಬೆ ತಾಯಿ, ನಂದಿಕೂರ ಗ್ರಾಪಂ ಅಧ್ಯಕ್ಷ ಚಂದ್ರಕಾAತ ಸೀತನೂರ್, ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಕುಪೇಂದ್ರ, ನ್ಯಾಯವಾದಿ ಶಿವಪುತ್ರ ಬರೋಡೆ, ಮಾಜಿ ಮಹಾಪೌರ ಸಂಜಯ್ ಸಿಂಗ್, ಜೋಡಬಸವೇಶ್ವರ ದೇವಾಲಯದ ಅಧ್ಯಕ್ಷ ನೀಲಕಂಠರಾವ ಪೊಲೀಸ್ ಪಾಟೀಲ್, ಸೇರಿದಂತೆ ಅನೇಕರಿದ್ದರು.

ಶಿವಲಿಂಗಯ್ಯ ಮಠಪತಿ, ಬಲಬಿಮ ಬಿರಾದಾರ, ಶಿವಪುತ್ರ ಪಾಟೀಲ್, ಶಾಂತಕುಮಾರ ಬಿರಾದಾರ, ರಾಜಕುಮಾರ್ ಬಿರಾದಾರ, ಬಲವಂತ ಉದನೂರ, ಮಲ್ಲಿನಾಥ ಬಿರಾದಾರ, ಲಕ್ಷ್ಮಣ ಪೂಜಾರಿ, ಹನುಮಂತರಾಯ ಕಪನೂರ, ಶಾಂತಪ್ಪ ಪಾಟೀಲ್, ರಾಜು ನವಲದಿ, ಹನುಮಂತರಾವ್ ಬಿರಾದಾರ, ಸುಭಾಷ್ ಮೂಲೆಗೆ, ಹಜರತ್ ಸಾಬ್ ಸೇರಿದಂತೆ ಗ್ರಾಮದ ಮುಖಂಡರು ಇದ್ದರು

.