ಡಾ.ಜಗದೇವಿ ತಿಬಶೆಟ್ಟಿ

ಡಾ.ಜಗದೇವಿ ತಿಬಶೆಟ್ಟಿ

 ಸಾಹಿತಿ ಸಮಾಜ ಚಿಂತಕಿ, ಡಾ.ಜಗದೇವಿ ತಿಬಶೆಟ್ಟಿ

ಡಾ. ಜಗದೇವಿ ತಿಬಶೆಟ್ಟಿಯವರು ಸ್ತ್ರೀ ಪರ ಕಾಳಜಿಯುಳ್ಳ ಸಾಹಿತಿಗಳಾಗಿದ್ದು ಸ್ತ್ರೀಯರ ಬವಣೆಗಳ ಬಗ್ಗೆ ಬಂಧನ ಕಟ್ಟುಪಾಡುಗಳ ಬಗ್ಗೆ ಬರೆದಿರುವರು.

ಸ್ತ್ರೀಯರನ್ನು ಸಮಾಜದಲ್ಲಿ ಸಮಭಾವದಿಂದ ಕಾಣಬೇಕೆಂದು ಪ್ರತಿಪಾದಿಸುವ ಇವರು ಮಹಿಳಾ ಪರ ಬರಹಗಾರರಲ್ಲಿ ಅಪರೂಪದ ಸಾಹಿತಿ ತಿಬಶೆಟ್ಟಿಯವರು

ಬಾಲ್ಯ ಜೀವನ

ಜಗದೇವಿ ತಿಬಶೆಟ್ಟಿಯವರು ಹುಮನಾಬಾದ ತಾಲೂಕಿನ ಹಳ್ಳಿಖೆಡ ಗ್ರಾಮದ ತಿಬಶೆಟ್ಟಿ 

ಶರಣದಂಪತಿಗಳಾದ ತಂದೆ ಬಸವಣ್ಣಪ್ಪಾ, ತಾಯಿ ಗೋದಾವರಿ ಅವರ ಉದರದಲ್ಲಿ 17.9.1972 ಜನಿಸಿದರು.

 ಶರಣ ತತ್ವದ ನಡೆ ನುಡಿಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡ ಇವರ ತಂದೆ ವೃತ್ತಿಯಲ್ಲಿ ಗ್ರಾಮಲೆಕ್ಕಿಗರಾಗಿ ಸೇವೇಸಲ್ಲಿಸಿದ್ದಾರೆ.ನಂತರ ಬಸವಣಪ್ಪನವರು ಬಸವ ಕಲ್ಯಾಣದ ಅನುಭವ ಮಂಟಪದಲ್ಲಿ ಉಳಿದು ಶರಣರ ಸೇವೆಗೈದಿದ್ದಾರೆ.

ಶಿಕ್ಷಣ

 ಜಗದೇವಿಯವರ ಶಿಕ್ಷಣ ಒಂದೇ ಕಡೆಯಾಗದೆ ತಮ್ಮ ತಂದೆಯವರ ವರ್ಗಾವಣೆಯಿಂದ ಪ್ರಾಥಮಿಕ ಶಿಕ್ಷಣ ಹಳ್ಳಿಖೆಡ , ಪ್ರೌಢ ಶಿಕ್ಷಣ ಸ್ವಗ್ರಾಮ, ಪದವಿ ಪೂರ್ವ ಬೀದರನಲ್ಲಿ , "ಶರಣರಲ್ಲಿ ದಾಂಪತ್ಯ ದರ್ಶನ ವಿಷಯದ ಮೇಲೆ "ಡಾ. ಪಿ. ಕೆ. ಖಂಡೊಬ ಅವರ ಮಾರ್ಗದರ್ಶನದಲ್ಲಿ ಪ್ರಭಂದ ಮಂಡಿಸಿ ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಪಿ.ಎಚ್. ಡಿ. ಪಡೆದರು.

  ಇವರ ಬಾಳಸಂಗಾತಿ ಸಂಜಯ ಮೈನಾಳೆಯವರು ಇವರಿಗೆ ಬಸವಶ್ರೀ, ಹಾಗೂ ವಚನಶ್ರೀ ಇಬ್ಬರು ಮಕ್ಕಳು,

ವೃತ್ತಿ

ಡಾ. ಜಗದೇವಿ ತಿಬಶೆಟ್ಟಿಯವರು ವೃತ್ತಿಯಲ್ಲಿ ಉಪನ್ಯಾಸಕಿಯಾಗಿದ್ದು,

ಹುಮನಾಬಾದನ ಪ್ರಥಮ ದರ್ಜೆ ಸರ್ಕಾರಿ ಕಾಲೇಜನಲ್ಲಿ ಅತಿಥಿ ಉಪನ್ಯಾಸಕರಾಗಿ (2007-2009).

ಬೀದರನ ಕರ್ನಾಟಕ ಕಾಲೇಜನಲ್ಲಿ ಮೂರುವರ್ಷ ಸೇವೆ, ಪ್ರಸ್ತುತ ಸ್ನಾತಕೋತ್ತರ ಕೇಂದ್ರ ಹಾಲಹಳ್ಳಿಯ ಕನ್ನಡ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಾಹಿತ್ಯ ಸೇವೆ

 ತಿಬಶೆಟ್ಟಿಯವರು ಬಾಲ್ಯದಿಂದಲೆ ಸಾಹಿತ್ಯದ ಅಭಿರುಚಿ ಹೊಂದಿರುವ ಇವರು ಬಸವ ಪಥ, ಆಚಾರ ಸತಿ, ಅಕ್ಕಮಹಾದೇವಿ ಕುರಿತು ಲೇಖನಗಳು ಸಾಹಿತ್ಯ ಸಿಂಚನ ತ್ರೈಮಾಸಿಕ ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

"ಅನರ್ಘ್ಯ ರತ್ನ", ಕವನ ಸಂಕಲನ "ಸೋಮನಾಥ ಏಳವಾರ" ಸಾಹಿತಿಗಳ ಕುರಿತು "ಹೊಂಗಿರಣ" ಪುಸ್ತಕವನ್ನು ಹೊರತಂದಿರುವರು.

" ಅನರ್ಘ್ಯ ರತ್ನ" ಕೃತಿಯು, ಶರಣ ಧರ್ಮ, ತತ್ವ, ಆದರ್ಶಗಳ ಸುತ್ತಮುತ್ತ ಬರಹ ಮೂಡಿಬಂದಿದೆ. ಹಾಗು ಬೀದರ ಜಿಲ್ಲೆಯ ಜಾನಪದ ಶ್ರೀಮಂತಿಕೆ ಕುರಿತು ಲೇಖನಗಳು ಪ್ರಕಟವಾಗಿವೆ.

ಕ್ಯಾತ ವಿಮರ್ಶಕರಾದ ನಾಸಾ ಕವಿಗಳೆಂದು ಖ್ಯಾತನಾಮರಾದ ಯುವ ಬರಹಗಾರ ನಾಗೇಶ ಸ್ವಾಮಿಗಳ ಅನರ್ಘ್ಯ ರತ್ನ ಕುರಿತು ತಮ್ಮ ಕೃತಿಬಿಂಬ ಪುಸ್ತಕದಲ್ಲಿ ವಿಮರ್ಶೆ ಮಾಡಿದ್ದಾರೆ.

ಸಾಹಿತ್ತಿಕ ಹಾಗು ಶೈಕ್ಷಣಿಕ ಚಟುವಟಿಕೆಗಳು

ಡಾ. ಜಗದೇವಿಯವರು ರಾಷ್ಟೀಯ ಸಂಕಿರಣ ಗೋಷ್ಠಿ, ರಾಜ್ಯ ಮಟ್ಟದ ಕವಿಗೋಷ್ಠಿ, ಹಾಗೂ ಶಿಕ್ಷಣಕ್ಕೆ ಸಂಬಂಧ ಪಟ್ಟ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ವಿಚಾರ ಸಂಕಿರಣ ಇನ್ನಿತರ ಚಟುವಟಿಕೆಗಳು.

1)Natinanal leval symposium (ಶ್ರೀಮತಿ, ಚೆನ್ನಮ್ಮ ಬಸಪ್ಪ ಪಾಟೀಲ್ ಆರ್ಟ್ಸ್ ಮತ್ತು ಕಾಮರ್ಸ್ ಪದವಿ ವಿದ್ಯಾಲಯ.

2)ಅಖಿಲ ಭಾರತ ಜಾನಪದ ಸಮ್ಮೇಳನ 2011ಬೀದರ.

3)osmaniya univarsity (ಡಿಪಾರ್ಟ್ಮೆಂಟ್ of ಕನ್ನಡ )ಹೈದ್ರಾಬಾದ. ಕನ್ನಡ ತತ್ವಪದ ಸಾಹಿತ್ಯ ಕುರಿತು ವಿಚಾರಗೋಷ್ಠಿ.

4)ಬಸವೇಷವರ ವಚನಗಳಲ್ಲಿ ಸಾಮಾಜಿಕ ಪರಿವರ್ತನೆ ವಿಷಯ ಕುರಿತು ಉಪನ್ಯಾಸ (ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಬಿವಿಬಿ ಕಾಲೇಜು ಬೀದರ)

5)ಜಾನಪದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಅವ್ಹಾನಿತರಾಗಿ ಭಾಗಿ (ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಂಯುಕ್ತಾಶ್ರಯದಲ್ಲಿ )

6)ಕನ್ನಡ ಸಂಶೋಧನ ವಿಧಾನ ಒಂದು ದಿನದ ರಾಜ್ಯ ಕಮ್ಮಟ. ಕರ್ನಾಟಕ ಕಾಲೇಜು ಬೀದರ.

7)ಭಾಷೆ ಕಮ್ಮಟ ಕುರಿತು ಉಪನ್ಯಾಸ(ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ)

8)ಉಪನ್ಯಾಸ (ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಬೀದರ 2011)

8)ನವೋದಯ ವಿಷಯ ಕುರಿತು ಉಪನ್ಯಾಸ (ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಬೀದರ 2013)

9)ಬಸವಣ್ಣನವರ ಸಾಮಾಜಿಕ ಕ್ರಾಂತಿ ಉಪನ್ಯಾಸ(ಬಸವಶ್ವರ ಜಾತ್ರೆ ಮಹೋತ್ಸವ ಬಸವಕಲ್ಯಾಣ2012)

10)ಮಹಿಳಾ ಜಾಗೃತಿ ಚಿಂತನೆ ಉಪಸ್ಥಿತಿ (ರಂಗಮಂದಿರ 2013ರ ಘ.ಗು ಹಳಕಟ್ಟಿ ವಚನೋತ್ಸವ ಸಮ್ಮೇಳನ )

11)ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಗಡಿನಾಡು ಘಟಕ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಉಪನ್ಯಾಸ ರಾಷ್ಟ್ರ ಕವಿ ಗೋವಿಂದ ಪೈಯವರ ಕುರಿತು 2013 ರಲ್ಲಿ ಸ್ಥಳ :-ಹಾವಗಿ ಸ್ವಾಮಿ ಮಠ ಉದ್ದಗೀರ.

12)ಕರ್ನಾಟಕ ಯಕ್ಷಗಾನ ಬೆಂಗಳೂರೂ ಸೇರಿದಂತೆ ಬೀದರ್ .

 ನಡೆಯುವ ಉಪನ್ಯಾಸ ನೀಡಿದರು.

ಪ್ರಶಸ್ತಿಗಳು

1)ಸಮಾಜ ಕಲಾ ರತ್ನ ಪ್ರಶಸ್ತಿ 

(ದೇಶಪಾಂಡೆ ಪ್ರತಿಷ್ಠಾನ 2018)

2)ಕಾವ್ಯ ಕಮಲ ರಾಜ್ಯ ಪ್ರಶಸ್ತಿ

3)ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ (2011)

4)ಕಾವ್ಯ ಶಾರದೆ ರಾಜ್ಯಪ್ರಶಸ್ತಿ (2019 ಕಾಸರಗೋಡು )

5)ಡಾ. ಸರೋಜನಿ ಚೆಲವ ಪ್ರಶಸ್ತಿ (ಚೇತನ ಪ್ರಕಾಶನ ಬೆಂಗಳೂರು )

6)ಸಾಹಿತ್ಯ ರತ್ನ ಪ್ರಶಸ್ತಿ (ಹೂವಿನ ಹಡಗಲಿ )

ಹೀಗೆ ಹಲವಾರು ಪ್ರಶಸ್ತಿ ಗೌರವ ,ಪುರಸ್ಕಾರ ಲಭಿಸಿವೆ .

ಲೇಖನ -ಓಂಕಾರ ಪಾಟೀಲ

ಕಾರ್ಯದರ್ಶಿ :--ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ.