ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ 6 ವರ್ಷದ ತೋಶ್ನಿ

ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ  6 ವರ್ಷದ ತೋಶ್ನಿ

ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ 6 ವರ್ಷದ ತೋಶ್ನಿ 

ಬೆಂಗಳೂರಿನಲ್ಲಿ ಈಚೆಗೆ ಕರ್ನಾಟಕದ ಎಲ್ಲ ಜಿಲ್ಲೆಗಳ ಹೆಸರುಗಳನ್ನು ಕೇವಲ 10 ಸೆಕೆಂಡ್ 65 ಮಿಲಿ ಸೆಕೆಂಡ್‍ನಲ್ಲಿ ಹೇಳುವ ಮೂಲಕ ಬೆಂಗಳೂರಿನಲ್ಲಿ ಈಚೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಡೆಸಿದ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಕಮಲನಗರದ ಬಾಲಕಿ ತೋಶ್ನಿ ಘಾಟೆ ಪ್ರಶಸ್ತಿಯೊಂದಿಗೆ ಇದ್ದಾರೆ.

ಪ್ರತಿಭೆ ತೋರಿದ ಕಮಲನಗರದ ತೋಶ್ನಿ | ಬಾಲಕಿ ಸಾಧನೆಗೆ ಗಣ್ಯರ ಶ್ಲಾಘನೆ

ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ

ಕಮಲನಗರ : ಪಟ್ಟಣದ 6 ವರ್ಷದ ಪೋರಿ ತೋಶ್ನಿ ಘಾಟೆ, ಕರ್ನಾಟಕದ ಎಲ್ಲ ಜಿಲ್ಲೆಗಳ ಹೆಸರುಗಳನ್ನು ಕೇವಲ 10 ಸೆಕೆಂಡ್ 65 ಮಿಲಿ ಸೆಕೆಂಡ್‍ನಲ್ಲಿ ಹೇಳುವ ಮೂಲಕ ಬೆಂಗಳೂರಿನಲ್ಲಿ ಈಚೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಡೆಸಿದ ಸ್ಪರ್ಧೆಯಲ್ಲಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಸಾಧಕರ ಪಟ್ಟಿಗೆ ಸೇರಿದ್ದಾಳೆ.

ಶೈಲೇಶ ಮತ್ತು ಅಶ್ವಿನಿ ದಂಪತಿ ಪುತ್ರಿ ತೋಶ್ನಿ ಸಧ್ಯ ಯುಕೆಜಿ ಓದುತ್ತಿದ್ದಾಳೆ. ಶೈಲೇಶ ಅವರು ಬೆಂಗಳೂರಿನಲ್ಲಿ ಇ-ಕಾಮರ್ಸ್ ಬ್ರ್ಯಾಂಡ್ ಮ್ಯಾನೇಜರ್ ಆಗಿ ಬೆಂಗಳೂರಿನ ಮಾರತಹಳ್ಳಿಯಲ್ಲಿ ಉದ್ಯೋಗದಲ್ಲಿದ್ದಾರೆ.

ಈ ಹಿಂದೆ 17 ಸೆಕೆಂಡ್‍ಗಳಲ್ಲಿ ರಾಜ್ಯದ ಜಿಲ್ಲೆಗಳ ಹೆಸರು ಹೆಳಿದ್ದ ಧ್ವನಿ ಮಲ್ಪಾಡ್ ಎಂಬ ಬಾಲಕಿಯ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿಯುವ ಮೂಲಕ ತೋಶ್ನಿ ತನ್ನ ಪ್ರತಿಭೆ ಮೆರೆದಿದ್ದಾಳೆ.

ಬಾಲಕಿ ತೋಶ್ನಿ ಸಾಧನೆಗೆ ಕಮಲನಗರ ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ, ತಾಪಂ ಇಒ ಮಾಣಿಕರಾವ ಪಾಟೀಲ್, ಗ್ರಾಪಂ ಅಧ್ಯಕ್ಷೆ ಸುಶೀಲಾ ಸಜ್ಜನಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಅಧ್ಯಕ್ಷ ಪ್ರಶಾಂತ ಮಠಪತಿ, ಶಾಸ್ತ್ರೀ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ. ಅಜಿತಕುಮಾರ ಶಾಸ್ತ್ರೀ, ಭಗಿರಥಿ ಪಬ್ಲಿಕ್ ಶಾಲೆ ಮುಖ್ಯ ಶಿಕ್ಷಕ ಮನೋಜಕುಮಾರ ಹಿರೇಮಠ ಸೇರಿ ವಿವಿಧ ಸಂಘಟನೆಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಕಮಲನಗರ ಪಟ್ಟಣದ ನಿವಾಸಿ ಶೈಲೇಶ ಮತ್ತು ಅಶ್ವಿನಿ ದಂಪತಿ ಪುತ್ರಿ ತೋಶ್ನಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧಕರ ಪಟ್ಟಿಗೆ ಸೇರಿದ್ದು ಅತ್ಯಂತ ಹರ್ಷದ ಸಂಗತಿಯಾಗಿದ್ದು, ಬಾಲಕಿಯ ಸಾಧನೆಗೆ ತಾಲೂಕು ಆಡಳಿತ ವತಿಯಿಂದ ಸನ್ಮಾನಿಸಲಾಗುವುದು.

-ಅಮಿತಕುಮಾರ ಕುಲಕರ್ಣಿ, ತಹಸೀಲ್ದಾರ್ ಕಮಲನಗರ.

ಕಮಲನಗರ ಪಟ್ಟಣದ ಪ್ರತಿಭಾವಂತ ಹೆಮ್ಮೆಯ ಪುತ್ರಿ ತೋಶ್ನಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧಕರ ಪಟ್ಟಿಗೆ ಸೇರಿದ್ದು ನಮಗೆಲ್ಲರಿಗೂ ಸಂತೋಷ ತಂದಿದೆ. ಬಾಲಕಿಯ ಸಾಧನೆಗೆ ಶಾಸತ್ರೀ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನವೆಂಬರ್ 1 ರ ಕರ್ನಾಟಕ ರಾಜ್ಯೋತ್ಸವ ದಿನದಂದು ಸನ್ಮಾನಿಸಿ ಗೌರವಿಸಲಾಗುವುದು. 

  • ಡಾ. ಅಜಿತಕುಮಾರ ಶಾಸ್ತ್ರೀ, ಸಂಸ್ತಾಪಕ-ಅಧ್ಯಕ್ಷರು ಶಾಸ್ತ್ರೀ ಶಿಕ್ಷಣ ಸಂಸ್ಥೆ ಕಮಲನಗರ.