ವಿದ್ಯಾರ್ಥಿಗಳ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ದುರ್ಬಳಕೆ? ತನಿಖೆ ಬೇಡಿಕೆ!

ವಿದ್ಯಾರ್ಥಿಗಳ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ದುರ್ಬಳಕೆ? ತನಿಖೆ ಬೇಡಿಕೆ!
ವಿದ್ಯಾರ್ಥಿಗಳ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ದುರ್ಬಳಕೆ? ತನಿಖೆ ಬೇಡಿಕೆ!

ವಿದ್ಯಾರ್ಥಿಗಳ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ದುರ್ಬಳಕೆ? ತನಿಖೆ ಬೇಡಿಕೆ!

ಕಲಬುರಗಿ : ಕಲಬುರಗಿ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಡಿ ಕಾರ್ಯನಿರ್ವಹಿಸುತ್ತಿರುವ ಡಿ. ದೇವರಾಜ ಅರಸು ಮೇಟ್ರಿಕ್ ನಂತರ ಬಾಲಕಿಯರ ವಸತಿ ನಿಲಯಗಳಲ್ಲಿ ಆಕ್ರಮ ಮತ್ತು ಅವ್ಯವಹಾರಗಳು ನಡೆದಿವೆ ಎಂಬ ಗಂಭೀರ ಆರೋಪಗಳು ಹೊರಬಿದ್ದಿವೆ.

ಕಲಬುರಗಿ ತಾಲ್ಲೂಕಿನಡಿ ಒಟ್ಟು 19 ವಸತಿ ನಿಲಯಗಳು ಇದ್ದು, ಅವುಗಳಲ್ಲಿ ಪ್ರಮುಖವಾಗಿ — ವೆಂಕಟೇಶನಗರ (BCWD 2108), ಎನ್‌ಜಿಒ ಕಾಲೋನಿ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ವಸತಿ ನಿಲಯ (BCWD 2105), ಶಾಸ್ತ್ರಿ ನಗರ (BCWD 2098), ಐವಾನ ಶಾಹಿ (BCWD 2099), ಹಾಗೂ ಶಾಂತಿ ನಗರ (BCWD 2100) ನಿಲಯಗಳಲ್ಲಿ ವ್ಯಾಪಕವಾದ ಅಕ್ರಮ ನಡೆದಿರುವ ಮಾಹಿತಿ ಲಭ್ಯವಾಗಿದೆ.

ಸರ್ಕಾರದಿಂದ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೆ ತಂದಿದ್ದರೂ, ಕೆಲವಾರು ವಾರ್ಡನ್‌ಗಳು ನಕಲಿ ಬೆರಳಚ್ಚುಗಳನ್ನು ಪಡೆದು ಗೈರುಹಾಜರಾತಿ ವಿದ್ಯಾರ್ಥಿಗಳಿಗೂ ಹಾಜರಾತಿ ದಾಖಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ವಾಸ್ತವದಲ್ಲಿ ನಿಲಯದಲ್ಲಿ ವಾಸಿಸದ ಅಥವಾ ಬೇರೆ ಜಿಲ್ಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಹೆಸರಿನಲ್ಲಿ ಹಾಜರಾತಿ ತೋರಿಸಿ, ಆಹಾರ ಧಾನ್ಯ ಹಾಗೂ ಇತರ ವೆಚ್ಚಗಳ ಸಂಪೂರ್ಣ ಬಿಲ್‌ಗಳನ್ನು ಪಾಸ್‌ ಮಾಡಿಕೊಳ್ಳುವ ಅಕ್ರಮ ನಡೆದಿದೆ ಎಂಬ ಆರೋಪಗಳಿವೆ.

ಹೆಚ್ಚಾಗಿ, ನಿಲಯಗಳಿಗೆ ಅಗತ್ಯವಾದ ಆಹಾರ ಧಾನ್ಯ, ತರಕಾರಿ, ಹಾಲು ಮುಂತಾದ ಸಾಮಗ್ರಿಗಳನ್ನು ಟೆಂಡರ್‌ದಾರರಿಂದ ನೇರವಾಗಿ ಪೂರೈಸದೇ, ವಾರ್ಡನ್‌ಗಳು ನಗದು ಹಣ ಪಡೆದು ಕಡಿಮೆ ಪ್ರಮಾಣದಲ್ಲಿ ವಸ್ತುಗಳನ್ನು ಖರೀದಿ ಮಾಡಿ ಬಿಲ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ಪಾಸ್ ಮಾಡಿಸುತ್ತಿದ್ದಾರೆ. ಸರ್ಕಾರದ ಗೋದಾಮಿನಿಂದ ಕೆಎಫ್‌ಸಿಯ ಮೂಲಕ ಬಂದ ಅಕ್ಕಿ, ಗೋಧಿಯನ್ನು ಸಹ ಒಂದೇ ನಿಲಯದಲ್ಲಿ ಸಂಗ್ರಹಿಸಿ ಆಕ್ರಮವಾಗಿ ಮಾರಾಟ ಮಾಡುವ ಘಟನೆಗಳು ನಡೆದಿವೆ ಎಂಬ ಮಾಹಿತಿ ಹೊರಬಂದಿದೆ.

ಈ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಉಪನಿರ್ದೇಶಕರು (ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ) ಅವರು ತಕ್ಷಣವೇ ಈ ಆಕ್ರಮಗಳ ಕುರಿತು ವಿಸ್ತೃತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಮಾಜದ ಹಲವು ವಲಯಗಳಿಂದ ಆಗ್ರಹ ವ್ಯಕ್ತವಾಗಿದೆ.