ವಿದ್ಯಾರ್ಥಿಗಳಿಗೆ ವಕ್ಫ್ ಆಸ್ತಿಗಳ ಡಿಜಿಟಲೀಕರಣದಲ್ಲಿ ಅಪ್ರೆಂಟಿಸ್‌ಶಿಪ್ ಅವಕಾಶ

ವಿದ್ಯಾರ್ಥಿಗಳಿಗೆ ವಕ್ಫ್ ಆಸ್ತಿಗಳ ಡಿಜಿಟಲೀಕರಣದಲ್ಲಿ ಅಪ್ರೆಂಟಿಸ್‌ಶಿಪ್ ಅವಕಾಶ

ವಿದ್ಯಾರ್ಥಿಗಳಿಗೆ ವಕ್ಫ್ ಆಸ್ತಿಗಳ ಡಿಜಿಟಲೀಕರಣದಲ್ಲಿ ಅಪ್ರೆಂಟಿಸ್‌ಶಿಪ್ ಅವಕಾಶ

ಕಲಬುರಗಿ: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರಾದ ಜನಾಬ ಸಯ್ಯದ ಮುಹಮ್ಮದ ಅಲಿ ಅಲ್ ಹುಸ್ಸೇನಿ ಅವರ ನಿರ್ದೇಶನದಂತೆ ಯುಮೀದ್ ಕೇಂದ್ರ ಪೋರ್ಟಲ್‌ (Unified Waqf Management, Empowerment, Efficiency and Development – UMEED) ಮುಖಾಂತರ ವಕ್ಫ್ ಆಸ್ತಿಗಳ ಡಿಜಿಟಲೀಕರಣ ಮತ್ತು ನಿರ್ವಹಣೆಯ ಕೆಲಸವನ್ನು ಕೈಗೊಳ್ಳಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಅಪ್ರೆಂಟಿಸ್‌ಶಿಪ್‌ ಅವಕಾಶ ನೀಡಲಾಗುವುದು ಎಂದು ಜಿಲ್ಲಾ ವಕ್ಫ್‌ ಅಧಿಕಾರಿ ಅಬ್ದುಲ್ ಮನ್ನಾನ ತಿಳಿಸಿದ್ದಾರೆ.

ಅವರು ಹೇಳಿದರು — “ವಿದ್ಯಾರ್ಥಿಗಳು ವಕ್ಫ್ ಆಸ್ತಿಗಳ ಮಾಹಿತಿಯನ್ನು ಪೋರ್ಟಲ್‌ಗೆ ಅಪ್‌ಲೋಡ್ ಮಾಡುವ ಕೆಲಸದಲ್ಲಿ ಪಾಲ್ಗೊಳ್ಳುವ ಮೂಲಕ ನೈಜ ಅನುಭವ ಪಡೆದುಕೊಳ್ಳಬಹುದು. ಭಾಗವಹಿಸುವವರಿಗೆ ಸಂಭಾವನೆ ಮತ್ತು ಪ್ರಮಾಣಪತ್ರ ನೀಡಲಾಗುತ್ತದೆ,” ಎಂದು ಹೇಳಿದರು.

ಖಾಜಾ ಬಂದೆನವಾಜ ವಿಶ್ವವಿದ್ಯಾನಿಲಯವು ಈ ಯೋಜನೆಗೆ ಸಹಭಾಗಿಯಾಗಿದ್ದು, ವಿವಿ ಉಪಕುಲಪತಿ ಪ್ರೊ. ಅಲಿ ರಜಾ ಮೂಸ್ವಿ ಅವರು ವಿದ್ಯಾರ್ಥಿಗಳಿಗೆ ಉತ್ಸಾಹ ತುಂಬಿದರು. ಈ ಯೋಜನೆಯಡಿಯಲ್ಲಿ ಕೆಬಿಎನ್ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದ ಕಂಪ್ಯೂಟರ್ ಲ್ಯಾಬ್‌ನಲ್ಲಿ ಡೇಟಾ ಅಪ್‌ಲೋಡ್ ಕಾರ್ಯ ನಡೆಯಲಿದೆ.

ಈ ಸಂದರ್ಭದಲ್ಲಿ ಹಜರತ್ ಅಲಿ ನದಾಫ್ (ಜಿಲ್ಲಾ ವ್ಯವಸ್ಥಾಪಕರು, ಕೆಎಂಡಿಸಿ ಕಲಬುರಗಿ), ಪರ್ವೇಜ್ ಆಲಂ (ಲೆಕ್ಕ ಪರಿಶೋಧಕ), ಕೆಬಿಎನ್ ಕುಲಸಚಿವ ಮಿರ ವಿಲಾಯತ ಅಲಿ, ಐಕ್ಯೂಏಸಿ ನಿರ್ದೇಶಕ ಡಾ. ಅಬ್ದುಲ ಬಷೀರ್, ವಿದ್ಯಾರ್ಥಿ ಕಲ್ಯಾಣ ಡೀನ್ ಡಾ. ಅನೂಪ, ಡಾ. ಸಿದ್ದೇಶ್ ಸಿರವಾರ, ಡಾ. ಆಜಾಮ್ ಸೇರಿದಂತೆ ಎಲ್ಲ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜಿಲ್ಲಾ ವಕ್ಫ್ ಅಧಿಕಾರಿಗಳ ಪ್ರಕಾರ, ಕಲಬುರಗಿ ಜಿಲ್ಲೆಯಡಿ ಸುಮಾರು 6,000 ವಕ್ಫ್ ಆಸ್ತಿಗಳು ಇದ್ದು, ಅವುಗಳ ನೋಂದಣಿ ಕೆಲಸವನ್ನು ಡಿಸೆಂಬರ್ 5 ರೊಳಗೆ ಪೂರ್ಣಗೊಳಿಸುವ ಗುರಿ ನಿಗದಿಪಡಿಸಲಾಗಿದೆ.