ಹೆಚ್.ವೈ. ಮೇಟಿ ಅವರ ನಿಧನ

ಹೆಚ್.ವೈ. ಮೇಟಿ ಅವರ ನಿಧನ

ಹೆಚ್.ವೈ. ಮೇಟಿ  ನಿಧನ 

ಕಲಬುರಗಿ : ಮಾಜಿ ಸಚಿವರು, ಉತ್ತರ ಕರ್ನಾಟಕದ ಹಿರಿಯ ನಾಯಕರು ಹಾಗೂ ಹಾಲಿ ಶಾಸಕರಾದ ಹೆಚ್.ವೈ. ಮೇಟಿ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾದರು. ಅವರ ಅಗಲಿಕೆಯಿಂದ ರಾಜ್ಯದ ರಾಜಕೀಯ ವಲಯದಲ್ಲೇ ಅಲ್ಲದೆ, ಸಮಾಜದಲ್ಲಿಯೂ ಆಳವಾದ ದುಃಖದ ಛಾಯೆ ಆವರಿಸಿದೆ.

ಬಹು ವರ್ಷಗಳ ಕಾಲ ಸಾರ್ವಜನಿಕ ಬದುಕಿನಲ್ಲಿ ಜನರ ಹಿತಕ್ಕಾಗಿ ಶ್ರಮಿಸಿದ ಮೇಟಿ ಅವರು ಜನಪರತೆ, ಸರಳತೆ ಹಾಗೂ ಅಭಿವೃದ್ಧಿಪರ ನಿಲುವಿನಿಂದ ವಿಶಿಷ್ಟ ಗುರುತಿಸಿಕೊಂಡಿದ್ದರು. ತಮ್ಮ ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಕಲ್ಯಾಣವೇ ಅವರ ರಾಜಕೀಯ ಜೀವನದ ಧ್ಯೇಯವಾಗಿತ್ತು.

ಮೇಟಿ ಅವರ ನಿಧನದಿಂದ ಉತ್ತರ ಕರ್ನಾಟಕದ ರಾಜಕೀಯ ಕ್ಷೇತ್ರವು ಒಬ್ಬ ಪ್ರಜಾಸತ್ತಾತ್ಮಕ, ಸಂವೇದನಾಶೀಲ ನಾಯಕನನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಶಾಂತಿ ಲಭಿಸಲಿ ಎಂಬುದು ಅಭಿಮಾನಿಗಳ, ನಾಯಕರು ಹಾಗೂ ಸಹೋದ್ಯೋಗಿಗಳ ಪ್ರಾರ್ಥನೆ.

ರಾಜಕೀಯ ಮುಖಂಡರು ಅನೇಕ ಗಣ್ಯ ವ್ಯಕ್ತಿಗಳು , ಸಂತಾಪ ಸೂಚಿಸಿದ್ದಾರೆ.