ಮೋಹಿತ್ ನರಸಿಂಹಮೂರ್ತಿ ಅವಹೇಳನಕಾರಿ ಹೆಳಿಕೆಯ ವಿರುದ್ಧ. ದಲಿತ ಸಂಘರ್ಷ ಸಮಿತಿ ಆಕ್ರೋಶ

ಮೋಹಿತ್  ನರಸಿಂಹಮೂರ್ತಿ ಅವಹೇಳನಕಾರಿ ಹೆಳಿಕೆಯ ವಿರುದ್ಧ. ದಲಿತ ಸಂಘರ್ಷ ಸಮಿತಿ ಆಕ್ರೋಶ

ಮೋಹಿತ್ ನರಸಿಂಹಮೂರ್ತಿ ಅವಹೇಳನಕಾರಿ ಹೆಳಿಕೆಯ ವಿರುದ್ಧ. ದಲಿತ ಸಂಘರ್ಷ ಸಮಿತಿ ಆಕ್ರೋಶ

ಯಾದಗಿರಿ : ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಸಚಿವ ಸಂಪುಟದ ಹಲವು ಸಚಿವರ ವಿರುದ್ಧ ಸಮಾಜಕ ಜಾಲತಾಣದಲ್ಲಿ ಅವಹೇಳನ ಕಾರಿಯಾಗಿ ನಿಂದಿಸಿರುವ ಮೋಹಿತ್ ನರಸಿಂಹಮೂರ್ತಿಯವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ)ಹೋಬಳಿ ಶಾಖೆ ಕೆಂಭಾವಿ ವತಿಯಿಂದ ಉಪ ತಹಶೀಲ್ದಾರ್ ಅವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

       ಈ ಸಂದರ್ಭದಲ್ಲಿ ಹೋಬಳಿ ಶಾಖೆ ಸಂಚಲಕರಾದ ಬಸವರಾಜ ಹೇಮನೂರು ಮಾತನಾಡಿದರು ಶೋಷಿತರ ಧ್ವನಿಯಾಗಿ ಕೆಲಸ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಸತೀಶ್ ಜಾರಕಿಹೊಳಿ ಅವರ ವಿರುದ್ಧ ಕೀಳು ಮಟ್ಟದ ಪದ ಬಳಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಲಕ್ಷಾಂತರ ಅಭಿಮಾನಿಗಳ ಮನಸ್ಸಿಗೆ ನೋವುಂಟು ಮಾಡಿದ್ದಾರೆ .ಹಾಗೂ ತುಮಕೂರು ಮೂಲದ ಮೋಹಿತ್ ನರಸಿಂಹ ಮೂರ್ತಿ ವಿರುದ್ಧ ಜಾತಿ ನಿಂದನೆ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಮತ್ತು ಗಡಿಪರು ಮಾಡಬೇಕು ಎಂದು ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿ ಒತ್ತಾಯಿಸಿದರು ಹಾಗೂ ಶಿವಶರಣಪ್ಪ ವಾಡಿ ರಾಜ್ಯ ಸಮಿತಿ ಸದಸ್ಯರು ಬೆಂಗಳೂರು ಇವರು ಮಾತನಾಡುತ್ತಾ ಇಂಥ ನೀಚ ಮನಸ್ಥಿತಿಯ ಬಾಯಿಯಲ್ಲಿ ಅವಚ್ಯಾ ಶಬ್ದಗಳಿಂದ ನಿಂದಿಸಿರುವನ್ನು ಮೋಹಿತ್ ನರಸಿಂಹಮೂರ್ತಿ ಎಂಬ ವ್ಯಕ್ತಿಯನ್ನು ಪೊಲೀಸ್ ಇಲಾಖೆಯವರು ಅರೆಸ್ಟ್ ಮಾಡದೆ ಹೋದರೆ ರಾಜ್ಯದಾದ್ಯಂತಹ ಕ್ರಾಂತಿಕಾರಕ ಹೋರಾಟ ಮಾಡಬೇಕೆಂದು ಈ ಸಂದರ್ಭದಲ್ಲಿ ಎಚ್ಚರಿಸಿದರು. ಅದೇ ರೀತಿಯಾಗಿ ಜಟ್ಟಪ್ಪ ಮುಷ್ಠಳ್ಳಿ,ಯಲ್ಲಪ್ಪ ಭಾವಿಮನಿ,ಧರ್ಮಣ್ಣ ಚಿಂಚೋಳಿ,ಪರಶುರಾಮ್ ಚಿಂಚೋಳಿ,ನಿಂಗಣ್ಣ ಕಟ್ಟಿಮನಿ, ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು.

ವರದಿ ಜೆಟ್ಟೆಪ್ಪ ಎಸ್ ಪೂಜಾರಿ