ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ರಾಜ್ಯೋತ್ಸವ ಪ್ರಶಸ್ತಿಗೆ ಕೃತಿಗಳು ಆಹ್ವಾನ
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಲೇಖಕರಿಗೆ, ಪ್ರಕಾಶಕರಿಗೆ ,ಕಲಾವಿದರಿಗೆ ಗುಲಬರ್ಗಾ ವಿ.ವಿ.ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನವೆಂಬರ್‌ನಲ್ಲಿ ನೀಡುವ 2023ನೇ ಸಾಲಿನ ಗೌರವಧನಕ್ಕಾಗಿ ಅರ್ಜಿ ಹಾಗೂ ಕೃತಿಗಳನ್ನು ಮತ್ತು ರಾಜ್ಯ ಮಟ್ಟದ ಕನ್ನಡ ಕಥಾ ಸ್ಪರ್ಧೆಗೆ ಸಣ್ಣ ಕಥೆಗಳನ್ನು ಆಹ್ವಾನಿಸಿದೆ.
ಕಲ್ಯಾಣ ಕರ್ನಾಟಕ ಭಾಗದ , ಲೇಖಕರು, ಚಿತ್ರಕಲಾವಿದರು, ಶಿಲ್ಪಕಲೆ (ಮೂರು) ಪ್ರಕಾಶಕರು (ಎರಡು) ಜನಪದ ಕಲಾವಿದರು ,ವಚನ,ಅನುವಾದ, ಹಿಂದಿ, ಮರಾಠಿ, ಉರ್ದು, ಇಂಗ್ಲಿಷ್, ತೆಲುಗು, ಹಾಗೂ ಗಡಿನಾಡು ಲೇಖಕರ ಕೃತಿ ತುಲಾ ಒಬ್ಬ ಲೇಖಕರಿಗೆ (ಒಟ್ಟ 15) ತಲಾ 5 ಸಾವಿರ ಪ್ರೋತ್ಸಾಹಧನ, ಜೊತೆಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವದು
ಡಾ.ಬಿ.ಆರ್.ಅಂಬೇಡ್ಕರ್ ಕೃತಿಗೆ ರಾಜ್ಯಮಟ್ಟದ ಪ್ರಶಸ್ತಿ:
ಕರ್ನಾಟಕ ರಾಜ್ಯ ಗ್ರಂಥಾಲಯ ಇಲಾಖೆಯ ನಿರ್ದೇಶಕರಾಗಿದ್ದ ಸತೀಶಕುಮಾರ ಹೊಸಮನಿ ಅವರು (ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ) ತಮ್ಮ ತಾಯಿವರ ಸ್ಮರಣಾರ್ಥ ₹1 ಲಕ್ಷ ಇಡುಗಂಟಿನ ರೂಪದಲ್ಲಿ ವಿಶ್ವವಿದ್ಯಾಲಯಕ್ಕೆ ಪಾವತಿ ಮಾಡಿದ್ದಾರೆ. ಆದ್ದರಿಂದ ಮಾಪಮ್ಮ ಶಂಭುಲಿಂಗ ಹೊಸಮನಿ ಅವರ ಸ್ಮರಣಾರ್ಥ ಕನ್ನಡದಲ್ಲಿ ಅಂಬೇಡ್ಕರ್ ಅವರ ಕುರಿತು ಬರೆದು ಪ್ರಕಟಿಸಿದ ಗ್ರಂಥವೊಂದಕ್ಕೆ ₹5 ಸಾವಿರ ನಗದು, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು.
ದಿ.ಜಯತೀರ್ಥ ರಾಜಪುರೋಹಿತ ಸ್ಮರಣಾರ್ಥ ಸ್ಮಾರಕ ದತ್ತಿ ರಾಜ್ಯ ಮಟ್ಟದ ಕಥಾ ಸ್ಪರ್ಧೆ:
ಈ ಸ್ಪರ್ಧೆಯಲ್ಲಿ ಭಾಗವಹಿಸಿ ಅತಿ ಹೆಚ್ಚು ಅಂಕ ಪಡೆದು ಪ್ರಥಮ ಸ್ಥಾನ ಪಡೆದ ಕಥೆಗೆ ಚಿನ್ನದ ಪದಕದೊಂದಿಗೆ ₹5 ಸಾವಿರ ನಗದು, ದ್ವಿತೀಯ ಸ್ಥಾನಗಳಿಸಿದ ಕಥೆಗೆ ಬೆಳ್ಳಿ ಪದಕ ₹3 ಸಾವಿರ ನಗದು ಹಾಗೂ ತೃತೀಯ ಸ್ಥಾನ ಗಳಿಸಿದ ಕಥೆಗೆ ಕಂಚಿನ ಪದಕ ಹಾಗೂ ₹2 ಸಾವಿರ ನಗದು, ಪ್ರಶಸ್ತಿ ಫಲಕಗಳನ್ನು ನೀಡಿ ಗೌರವಿಸಲಾಗುವುದು.
ವಿಜ್ಞಾನ ಪುಸ್ತಕಕ್ಕೆ ರಾಜ್ಯಮಟ್ಟದ ಪ್ರಶಸ್ತಿ
ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಪುಸ್ತಕವನ್ನು ಕನ್ನಡದಲ್ಲಿ ಬರೆದು ಪ್ರಕಟಿಸಿರಬೇಕು. ರಾಜ್ಯದ ಯಾವುದೇ ಜಿಲ್ಲೆಯ ಲೇಖಕರು ಸ್ಪರ್ಧಿಯಲ್ಲಿ ಭಾಗವಹಿಸಬಹುದು. ಪ್ರಶಸ್ತಿ 5 ಸಾವಿರ ನಗದು ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು.
ಲೇಖಕರು, ಪ್ರಕಾಶಕರು ತಮ್ಮ ಅರ್ಜಿ, ಪುಸ್ತಕ ಹಾಗೂ ಕಲಾಕೃತಿಗಳನ್ನು ಆಗಸ್ಟ್ 31ರ ಒಳಗಾಗಿ ನಿರ್ದೇಶಕರು, ಪ್ರಸಾರಾಂಗ, ಗುಲಬರ್ಗಾ ವಿಶ್ವವಿದ್ಯಾಲಯ-585106 ಕಲಬುರಗಿ ವಿಳಾಸಕ್ಕೆ ಕಳುಹಿಸಬೇಕು ಎಂದು ಪ್ರಸಾರಾಂಗದ ನಿರ್ದೇಶಕ ಪ್ರೊ. ಎಚ್.ಟಿ.ಪೋತೆ ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 9880088643.