ಚಂದಕೇರಾ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಗೆ: ಬಾಬುರಾವ ಭೋಯಿ ಅವಿರೋಧ ಆಯ್ಕೆ
ಚಂದಕೇರಾ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಗೆ : ಬಾಬುರಾವ ಭೋಯಿ ಅವಿರೋಧ ಆಯ್ಕೆ
ಚಿಂಚೋಳಿ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭೀವೃದ್ದಿ ಬ್ಯಾಂಕಿನ ಚಂದನಕೇರಾ ಸಾಲಗಾರರ ಕ್ಷೇತ್ರಕ್ಕೆ ಹಿರಿಯ ಮುಖಂಡ ಬಾಬುರಾವ್ ಬೋಯಿ ಅವಿರೋಧ ಆಯ್ಕೆಯಾದರು. ಹಿಂದಿನ ನಿರ್ದೇಶಕ ಸುಭಾಷ ಮಂತ್ರಿ ನಿಧನದಿಂದ ತೆರವಾದ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿತ್ತು. ಕಾಂಗ್ರೆಸ್ ಬೆಂಬಲಿತ ಬಾಬುರಾವ್ ಬೋಯಿ, ಬಿಜೆಪಿ ಬೆಂಬಲಿತ ಹಣಮಂತರಾವ್ ಸಿನಿಗೊಂಡ ನಾಮಪತ್ರ ಸಲ್ಲಿಸಿದ್ದರು.ನಾಮಪತ್ರ ವಾಪ ಪಡೆಯಲು ಕೊನೆಯ ದಿನವಾಗಿದ್ದ ಗುರುವಾರ ಹಣಮಂತರಾವ್ ತಮ್ಮನಾಮಪತ್ರ ವಾಪ್ ಪಡೆದಿದ್ದರಿಂದ ಬ್ಯಾಂಕಿನ ನಿರ್ದೇಶಕರಾಗಿ ಬಾಬುರಾವ್ ಬೋಯಿ ಚೇಂಗಟಾ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು
ಸನ್ಮಾನಿಸಿದ ಕಾಂಗ್ರೆಸ್ ಮುಖಂಡರು : ಸುಬ್ಬಣ್ಣ ಗುಂಡಪ್ಪ ಮಂತ್ರಿ ಚಂದನಕೇರಾ ಅವರಿಂದ ತೆರೆವಾದ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಬಾಬುರಾವ ಬಸವಣ್ಣಪ್ಪ ಅವರು ಅವಿರೋಧ ಆಯ್ಕೆ ಗೊಂಡಿರುವುದಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡ ಅಬ್ದುಲ್ ಬಾಶೀದ್, ಲಕ್ಷ್ಮಣ ಆವಂಟಿ, ಹಫಿಜ್ ಅಬ್ದುಲ್ ಹಮೀದ್ ಅವರು ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ವಕೀಲ ಪ್ರಕಾಶ ಭೋವಯಿ, ಬಸವರಾಜ ಕೋಲಕುಂದಿ ಚಂದನಕೇರಾ ಅವರು ಉಪಸ್ಥಿತರಿದ್ದರು.
