ಕಲಿತ ಶಾಲೆಗೆ ದೇಣಿಗೆ : ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

ಕಲಿತ ಶಾಲೆಗೆ ದೇಣಿಗೆ : ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

ಕಲಿತ ಶಾಲೆಗೆ ದೇಣಿಗೆ : ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ 

ಶಹಾಬಾದ : - ಜೆ.ಪಿ ಕಾಲೋನಿಯ ಎಚ್ಎಮ್ ಪಿ ಶಾಲೆಯಲ್ಲಿ ಬಾಲ್ಯದ ಶಿಕ್ಷಣ ಪಡೆದು ವಿದ್ಯಾವಂತ, ನೌಕರಸ್ತ ರಾಗಿ ಸೇವೆ ಸಲ್ಲಿಸುತ್ತಿರುವ ಎಲ್ಐಸಿ ಫೀಲ್ಡ್ ಆಫೀಸರ್ ಎಸ.ಶಾಮ ಕುಮಾರ ರವರು ತಾವು ಕಲಿತ ಶಾಲೆಯ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಿದರು.

ಶಾಮಕುಮಾರ ಮಾತನಾಡಿ, ನಾವು ವಿದ್ಯಾಭ್ಯಾಸ ಮಾಡಿದ ಶಾಲೆಗಳಿಗೆ ಏನಾದರೂ ಕೊಡುಗೆ ನೀಡಿದರೆ ಮಾತ್ರ ಸಾರ್ಥಕತೆಯಾಗುತ್ತದೆ, ಈ ಮೂಲಕ ನಾವು ಓದಿದ ಶಾಲೆಗೆ ಋಣ ತೀರಿಸುವಂತಾಗುತ್ತದೆ, ಶಾಲಾ ಮಕ್ಕಳಿಗೆ ಸಮ ವಸ್ತ್ರಗಳನ್ನು ದೇಣಿಗೆ ನೀಡುವುದರಿಂದ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಶಿಕ್ಷಣದ ಕಡೆಗೆ ಅವರ ಆಸಕ್ತಿ ಹೆಚ್ಚುತ್ತದೆ ಎಂದರು. 

ದೇಣಿಗೆ ಸ್ವೀಕರಿಸಿ ಮಾತನಾಡಿದ ಮುಖ್ಯ ಗುರು ಬಲವಂತಪ್ಪ ಓಲೇಕಾರ, ಕಲಿತ ಶಾಲೆಗೆ ದೇಣಿಗೆಯಾಗಿ ಸಮವಸ್ತ್ರ ವಿತರಣೆ ಮಾಡುವುದು ಶ್ಲಾಘನೀಯ ಕಾರ್ಯ, ಈ ರೀತಿ ಸಮವಸ್ತ್ರಗಳನ್ನು ದಾನ ಮಾಡುವುದರಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ ಮತ್ತು ಎಲ್ಲರೂ ಸಮಾನವಾಗಿ ಶಾಲೆಗೆ ಹೋಗಲು ಪ್ರೋತ್ಸಾಹ ಸಿಗುತ್ತದೆ ಎಂದು ಶ್ಲಾಘಿಸಿದರು. 

ಈ ಸಂಧರ್ಭದಲ್ಲಿ ಶಾಲೆಯ ಕಾರ್ಯದರ್ಶಿ ಸುನಿಲ ಭಗತ, ಸುನಿಲ ಫಂಡ್, ಪ್ರಕಾಶ ಜಾಧವ, ವಿಶ್ವನಾಥ, ತಾರಾಬಾಯಿ ಹಾಗೂ ಶಾಲಾ ಸಿಬ್ಬಂದಿ ಶ್ರೀಮತಿ ಪ್ರೀತಾ, ಮೀನಾಕ್ಷಿ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.