ಟೆಂಗಳಿಯಲ್ಲಿ ಧಾರ್ಮಿಕ ಸೇವಾಕರ್ತರಿಗೆ “ಭೀಮೇಶ್ವರ ಸೇವಾಶ್ರೀ” ಪ್ರಶಸ್ತಿ ಪ್ರಧಾನ

ಟೆಂಗಳಿಯಲ್ಲಿ ಧಾರ್ಮಿಕ ಸೇವಾಕರ್ತರಿಗೆ “ಭೀಮೇಶ್ವರ ಸೇವಾಶ್ರೀ” ಪ್ರಶಸ್ತಿ ಪ್ರಧಾನ
ಕಾಳಗಿ:, ಏಪ್ರಿಲ್ ೨೬: ಟೆಂಗಳಿ ಗ್ರಾಮದ ಭೀಮೇಶ್ವರ ದೇವಸ್ಥಾನದಲ್ಲಿ ಇಂದು ರಾತ್ರಿ ೮.೩೦ಕ್ಕೆ ಅಂಡಗಿ ಮನೆತನದ ಕಾರ್ತಿಕೋತ್ಸವದ ಅಂಗವಾಗಿ “ಭೀಮೇಶ್ವರ ಸೇವಾಶ್ರೀ” ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.
ಇತ್ತೀಚೆಗಷ್ಟೇ ನಡೆದ ಭೀಮೇಶ್ವರ ಜಾತ್ರೆಯ ಸಂದರ್ಭದಲ್ಲಿ ಅನೇಕ ವರ್ಷಗಳಿಂದ ಅಗ್ನಿ, ಪಲ್ಲಕ್ಕಿ ಅಲಂಕಾರ, ರಥ ಅಲಂಕಾರ, ಭಜನೆ, ವಾದ್ಯ, ಡಿವಿಟಗಿ, ಕುಂಭ, ನಂದಿಕೋಲ, ಮಿಣಿ, ಕಳಸ ಸೇವೆಗಳನ್ನು ಸಲ್ಲಿಸುತ್ತಿರುವ ಧಾರ್ಮಿಕ ಸೇವಾಕರ್ತರಿಗೆ ಅಂಡಗಿ ಪ್ರತಿಷ್ಠಾನ ವತಿಯಿಂದ ಈ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.
ಕಾರ್ಯಕ್ರಮವನ್ನು ಟೆಂಗಳಿ ಮತ್ತು ಮಂಗಲಗಿ ಶ್ರೀಗಳಾದ ಡಾ. ಶಾಂತ ಸೋಮನಾಥ ಶಿವಾಚಾರ್ಯರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ರಾಮಪ್ಪ ಅಂಡಗಿ ವಹಿಸಲಿದ್ದು, ವಿರೇಂದ್ರ ವಾಲಿ ಮತ್ತು ವೀರಭದ್ರಯ್ಯ ಸಾಲಿಮಠ ಅವರು ಗೌರವ ಉಪಸ್ಥಿತರಾಗಲಿದ್ದಾರೆ. ದೇವಸ್ಥಾನದ ಟ್ರಸ್ಟ್ ಸಮಿತಿ ಪದಾಧಿಕಾರಿಗಳು ಹಾಗೂ ಭಜನಾ ಕಲಾವಿದರು ಕೂಡ ಭಾಗವಹಿಸಲಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಶಿವರಾಜ ಅಂಡಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.