ನಾಲವಾರ ರೈಲ್ವೆ ನಿಲ್ದಾಣದ ಸಲಹಾ ಸಮಿತಿಗೆ ಪಾಟೀಲ, ಯಾರಿ,ಬೇಗ್ ನೇಮಕ

ನಾಲವಾರ ರೈಲ್ವೆ ನಿಲ್ದಾಣದ ಸಲಹಾ ಸಮಿತಿಗೆ ಪಾಟೀಲ, ಯಾರಿ,ಬೇಗ್ ನೇಮಕ
ನಾಲವಾರ: ದಕ್ಷಿಣ ಮಧ್ಯ ರೈಲ್ವೆಯ ಗುಂತಕಲ ವಿಭಾಗದ ನಾಲವಾರ ರೈಲ್ವೆ ನಿಲ್ದಾಣದ ಸಲಹಾ ಸಮಿತಿಯ ಸದಸ್ಯರನ್ನಾಗಿ ರಾಮರಡ್ಡಿ ಪಾಟೀಲ ಕೊಳ್ಳಿ, ವೀರಣ್ಣ ಯಾರಿ ಹಾಗೂ ಸರ್ವರ್ ಬೇಗ್ ಅವರನ್ನು ದಕ್ಷಿಣ ಮಧ್ಯ ರೈಲ್ವೆ ಗುಂತಕಲ್ ವಿಭಾಗದ ವ್ಯವಸ್ಥಾಪಕ ಧನಂಜಯ ಕುಮಾರ ಸಿಂಗ ನೇಮಕಮಾಡಿ ಅಧಿಸೂಚನೆ ಹೊರಡಿಸಿದ್ದಾರೆ. ಈ ಪತ್ರವನ್ನು ಬಿಜೆಪಿ ಹಿರಿಯ ಮುಖಂಡರು ಹಾಗೂ ರಾಜ್ಯ ತೊಗರಿ ಮಂಡಳಿ ಮಾಜಿ ಅಧ್ಯಕ್ಷರಾದ ಲಿಂಗಾರೆಡ್ಡಿ ಬಾಸರೆಡ್ಡಿ ಅವರು ನೂತನ ಸದಸ್ಯರುಗಳಿಗೆ ನೀಡಿದರು.
ಈ ಸಲಹಾ ಸಮಿತಿಯ ಸದಸ್ಯರುಗಳು ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ಪೂರಕವಾಗಿ ಕೈಜೋಡಿಸಿ ಪ್ರಯಾಣಿಕರ ಅನುಕೂಲಕರ ನಿಲ್ದಾಣಕ್ಕೆ ಸಲಹೆಗಳನ್ನು ನೀಡುವುದಾಗಿದೆ.
ಈ ಸಲಹಾ ಸಮಿತಿಯು ಜನವರಿ 1, 2025 ರಿಂದ ಡಿಸೆಂಬರ್ 31, 2026 ರವರೆಗೆ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಲಿದೆ. ಸಮಿತಿಯ ಸ್ವರೂಪವು ಸಮಾಲೋಚನಾತ್ಮಕವಾಗಿರುತ್ತದೆ ಮತ್ತು ಈ ಸದಸ್ಯರು ರೈಲ್ವೆಯೊಂದಿಗೆ ಯಾವುದೇ ಲಾಭದಾಯಕ ಒಪ್ಪಂದಗಳನ್ನು ಹೊಂದಿರಬಾರದು. ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹುದ್ದೆಯಲ್ಲಿ ಇರಬಾರದು ಎಂದು ನಿಮಯಗಳಿವೆ ಎಂದು ತಮ್ಮಗುಂತಕಲ ವಿಭಾಗದ ಸಿಂಗ ಆದೇಶ ಪತ್ರದಲ್ಲಿ ವಿವರಿಸಿದ್ದಾರೆ. ಅದರಂತೆ ನೀವು ಕಾರ್ಯಪ್ರವೃತ್ತರಾಗಿ ನಿಮ್ಮ ಸಲಹೆ ಸೂಚನೆಗಳನ್ನು ನೀಡಿ ಪ್ರಯಾಣಿಕರಿಗೆ ಅನುಕೂಲ ಮಾಡಿ ಎಂದು ಲಿಂಗಾರೆಡ್ಡಿ ಬಾಸರೆಡ್ಡಿ ಗೌಡರು ಸದಸ್ಯರು ಗಳಿಗೆ ಹೇಳಿದರು.
ಈ ಸಂದರ್ಭದಲ್ಲಿ ನಾಗರಾಜ ಗೌಡ ಗೌಡಪ್ಪನೂರ,ಸತೀಶ ಸಾವಳಗಿ,ಭೀಮರಾಯ ಸಬೇದಾರ,ಅಯ್ಯಣ್ಣ ದಂಡೋತಿ,ಇಮ್ತೀಯಾಜ್ ಬೇಗ್,ಮಹಮ್ಮದ್ ಗೌಸ್ ಸೇರಿದಂತೆ ಇತರರು ಇದ್ದರು.