2ನೇ ವರ್ಷದ ಮಠ ಸ್ಥಾಪನಾ ದಿನ : ನವರಾತ್ರಿ ದೇವಿ ಪುರಾಣ

2ನೇ ವರ್ಷದ ಮಠ ಸ್ಥಾಪನಾ ದಿನ : ನವರಾತ್ರಿ ದೇವಿ ಪುರಾಣ
ಶಶಹಾಬಾದ : - ಶರಣರ ಮರಣದ ನಂತರ ಎಲ್ಲರೂ ನೆನೆಯುತ್ತಾರೆ, ಬೋಜಲಿಂಗ ಶರಣರು ಭಕ್ತರಿಗೆ ಎಲ್ಲವನ್ನು ನೀಡಿದರು,
ಇದ್ದಾಗ ಹೋಗಳುವದು ಹೋದಾಗ ತೇಗಳುವದು ಮಾನವ ಜನ್ಮದ ಪರಿಯಾಗಿದೆ ಎಂದು ಹೋನ್ನಾಳ ಸುಕ್ಷೇತ್ರದ ಪೂಜ್ಯರಾದ ಶ್ರೀ ಷಡಕ್ಷರಿ ವಾಸುದೇವ ಮಹಾರಾಜರು ಹೇಳಿದರು.
ಅವರು ನಗರದ ಭೀಮಶಪ್ಪ ನಗರದ ಶ್ರೀ ಶ್ರೀ ಷಡಕ್ಷರಿ ವಾಸುದೇವ ಮಹಾರಾಜರ ಮಠದಲ್ಲಿ ನವರಾತ್ರಿ ಅಂಗವಾಗಿ ಹಮ್ಮಿಕೊಂಡಿದ್ದ ಶ್ರೀದೇವಿ ಮಹಾತ್ಮ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದರು.
ಪುರಾಣದಲ್ಲಿರುವ ಉತ್ತಮ ಸಾರಾಂಶವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು, ವಚನ ಪಚನವಾದಾಗ ಮನುಷ್ಯನಿಗೆ ಅನುಭವವಾಗುತ್ತದೆ, ಗುರುವಿಗೆ ಶರಣಾದರೆ
ಪಲ ಮತ್ತು ಮುಕ್ತಿ ಪ್ರಾಪ್ತವಾಗುತ್ತದೆ ಎಂದು ಉಪದೇಶಿಸಿದರು.
ಜಾತಿ, ಜಾತಿ ಬಡಿದಾಡ ಬೇಡಿ ನಿಮ್ಮ ಕುಲದ ಮೇಲೆ ಎನಾದರೂ ಗೋತ್ತೇನು,
ಕಡಕೋಳ ಮಡಿವಾಳೇಶ್ವರ ದಿಕ್ಷೆ ನೀಡಲು ಹಿಂಜರಿದ ಆಗಿನ ಸಮಾಜ ನಂತರ ಕಲಕೇರಿ ಮರಳಸಿದ್ದರ ರಿಂದ ದೀಕ್ಷೆ ಪಡೆದರು ಎಂದು ವಿವರಿಸಿದರು.
ಮಲ್ಲಿಕಾರ್ಜನ ಉರಸಗುಂಡಿಗಿ ಮತ್ತು ತಾರಾಬಾಯಿ ಅವರು ದಾಸೋಹ ಸೇವೆ ನೆರವೇರಿಸಿದರು.
ದಶರಥ ದೇಸಾಯಿ, ಹೀರಾ ಮೇಸ್ತ್ರಿ, ಮಲ್ಲಿಕಾರ್ಜನ ಹಳ್ಳಿ, ಶಂಕರ ಮಾವನೂರ
ರವರು ಸಂಗೀತ ಸೇವೆ ಸಲ್ಲಿಸಿದ್ದರು.
ಪುರಾಣ ಕಾರ್ಯಕ್ರಮದಲ್ಲಿ ವಿಜಯಕುಮಾರ ದಂಡಗುಲಕರ, ಸಾಬಣ್ಣ ಜಾಪೂರ, ಲೋಹಿತ ಮಳಖೇಡ, ಮಹಾಂತೇಶ ಜಾಪೂರ, ರವಿ ಹತ್ತಿಕುಣಿ, ಹಣಮಂತ ಉಳಗಡ್ಡಿ ಇದ್ದರು.
ಶಹಾಬಾದ್ ಸುದ್ದಿ ನಾಗರಾಜ್ ದಂಡಾವತಿ