ವಿಶೇಷ ಚೇತನ ಮಕ್ಕಳಿಗೆ ಅನುಕಂಪ ಬೇಡ -ಅವಕಾಶ ಕೊಡಿ- ಶರಣಗೌಡ ಪಾಟೀಲ್ ಪಾಳಾ.

" ವಿಶೇಷ ಚೇತನ ಮಕ್ಕಳಿಗೆ ಅನುಕಂಪ ಬೇಡ -ಅವಕಾಶ ಕೊಡಿ- ಶರಣಗೌಡ ಪಾಟೀಲ್ ಪಾಳಾ.
ಕಲಬುರಗಿ : ಮಾ.6-ಸಾಮಾನ್ಯ ಮಕ್ಕಳಂತೆ ವಿಶೇಷ ಚೇತನ ಮಕ್ಕಳು ಕೂಡ ಶಿಕ್ಷಣ ಪಡೆಯುವ ಹಕ್ಕಿದೆ. ಸಮಾಜದಲ್ಲಿ ಅವರಿಗೂ ಕೂಡ ಸಮಾನ ಅವಕಾಶ ಪ್ರೇರಣೆ ಮತ್ತು ಬೆಂಬಲ ಅಗತ್ಯವಿದೆ. ವಿಕಲ ಚೇತನ ಮಕ್ಕಳಲ್ಲಿ ವಿಶೇಷ ಪ್ರತಿಭೆ, ಛಲವಿದ್ದು ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಶರಣಗೌಡ ಪಾಟೀಲ ಪಾಳಾ ಹೇಳಿದರು.
ನಗರದ ರಾಮಚಂದ್ರ ರಾಘೋಜಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ, ಸಮಗ್ರ ಶಿಕ್ಷಣ ಕರ್ನಾಟಕದ ಸಮನ್ವಯ ಶಿಕ್ಷಣ ಚಟುವಟಿಕೆಗಳ ಯೋಜನೆ ಅಡಿಯಲ್ಲಿ ವಿಶೇಷ ಚೇತನರ ಮಕ್ಕಳಿಗಾಗಿ ಕ್ರೀಡೆ ಮತ್ತು ಅರಿಯು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ದಿ. ಪಂಡಿತ ಪುಟ್ಟರಾಜ ಗವಾಯಿಗಳವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾತನಾಡುತ್ತಿದ್ದರು. ಮುಂದುವರೆದು ಶಾಲಾ ಶಿಕ್ಷಣ ಇಲಾಖೆಯಿಂದ ಹಾಗೂ ವಿವಿಧ ಇಲಾಖೆಗಳಿಂದ ವಿಕಲಚೇತನ ಮಕ್ಕಳಿಗಾಗಿ ಹಲವು ಯೋಜನೆಗಳಿದ್ದು ಪರಿಣಾಮಕಾರಿಯಾಗಿ ಮಕ್ಕಳಿಗೆ ತಲುಪ ಬೇಕಾಗಿರುವುದು ಅವಶ್ಯವಾಗಿದೆ ಈ ದಿಶೆಯಲ್ಲಿ ಪಾಲಕರ ಸಹಕಾರ ಅವಶ್ಯವಾಗಿದೆ. ಹಾಗೂ ವಿವಿಧ ಇಲಾಖೆಗಳು ಸಮನ್ವಯ ಸಾಧಿಸಿ, ಮಕ್ಕಳ ಅಭಿವೃದ್ಧಿ ಪೂರಕ ಕೆಲಸವಾಗಬೇಕಾಗಿದೆ. ವಿಕಲಚೇತನರು ಕ್ರೀಡಾ ಕ್ಷೇತ್ರ ಹಾಗೂ ಸಾಂಸ್ಕೃತಿಕ ಕ್ಷೇತ್ರ, ಇತರೆ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಸಾಧಿಸಿದ್ದನ್ನು ಕಾಣಬಹುದಾಗಿದೆ ಆದರೆ ಬೆಂಬಲ, ಅವಕಾಶ ಅವಶ್ಯವಾಗಿ ನೀಡಬೇಕಾಗಿದೆ. ಎಂದು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿಜಯಕುಮಾರ ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತನಾಡುತ್ತಾ ವಿಕಲಚೇತನ ಮಕ್ಕಳಿಗೆ ಬೆಂಬಲವಾಗಿ ಪೋಷಣೆ, ಸಾರಿಗೆ, ಹೆಣ್ಣುಮಕ್ಕಳ ಬತ್ತೆ, ಫಿಜಿಯೋಥೆರಪಿ, ವೈದ್ಯಕೀಯ ಮೌಲ್ಯಾಂಕನ, ಶಿಷ್ಯವೇತನ, ಕ್ರೀಡೆ ಮತ್ತು ಅರಿವು, ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಮಕ್ಕಳು ಮತ್ತು ಪಾಲಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು. ಅಲ್ಲದೇ ಅತಿಥಿಗಳಾಗಿ ಭಾಗವಹಿಸಿದ ಡಾ!! ಪ್ರಕಾಶ್ ರಾಠೋಡ್ ಕ್ಷೇತ್ರ ಸಮನ್ವಯಾಧಿಕಾರಿಗಳು ಮಾತನಾಡುತ್ತ ಬಿಐಆರ್‌ಟಿಗಳು ವಿವಿಧ ಇಲಾಖೆಗಳ ಸಮನ್ವಯ ಸಾಧಿಸಿ ಉತ್ತಮ ಕರ್ತವ್ಯ ನಿರ್ವಹಿಸುತ್ತಿದ್ದು, ಪಾಲಕರು ನಿರಂತರ ಸಂಪರ್ಕದೊಂದಿಗೆ ಮಕ್ಕಳಿಗೆ ಸಿಗುವ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು. ವೇದಿಕೆ ಮೇಲೆ ಪತ್ರಕರ್ತರಾದ ಕಿರಣ್ ಪಾಟೀಲ್ ರವರು ಅತಿಥಿಗಳಾಗಿ ಭಾಗವಹಿಸಿ ಶ್ರುಶ್ರಾವ್ಯವಾಗಿ ಹಾಡುಗಳನ್ನು ಹಾಡಿದರು ಹಾಗೂ ಶರಣು ಸಾಳೆರ ಇಸಿಓ, ವೀರೇಶ್ ಸಿಆರಪಿ ದೇಶಪಾಂಡೆ ಮುಗು, ಅಪ್ಪಾಸಾಬ ಪಾಟೀಲ ಬಿ ಐ ಇ ಆರ ಟಿ, ವಿಕಲಚೇತನ ಮಕ್ಕಳು ಹಾಗೂ ಪಾಲಕರು, ಪೋಷಕರು ಭಾಗವಹಿಸಿದ್ದರು. ಪ್ರತಿಭಾವಂತ ವಿಕಲಚೇತನ ಮಕ್ಕಳಾದ ಅನಿರುದ್ಧ ಕಲಗೌಡ ಹಾಗೂ ಮಹಾಲಕ್ಷ್ಮಿ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳು, ನಿಬಂಧ, ರಸಪ್ರಶ್ನೆ,ಚಿತ್ರಕಲೆ, ಕರಕುಶಲ ಕಲೆ ಮತ್ತು ಸಮನ್ವಯ ಶಿಕ್ಷಣ ಉಪನ್ಯಾಸ, ಸಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಸ್ತಾವಿಕವಾಗಿ ಸಿದ್ರಾಮ ರಾಜಮಾನೆ ಬಿಐಆರ್‌ಟಿ ಮಾತನಾಡಿದರು, ಕಾರ್ಯಕ್ರಮ ನಿರೂಪಣೆಯನ್ನು ಶಿವಾನಂದ ಜಾನೆ ನಿರ್ವಹಿಸಿದರು. ಮಂಜುಳಾದೇವಿ ಪಾಟೀಲ್ ಕಾರ್ಯಕ್ರಮದ ವಂದನಾರ್ಪಣೆಯನ್ನು ಮಾಡಿದರು.