ಅನಾವೃಷ್ಟಿಯಿಂದ ಹಾಳಾಗಿ ಹೋದ ಹತ್ತಿಬೆಳೆ ಕೂಡಲೇ ಜಿಲ್ಲಾಡಳಿತದ ವತಿಯಿಂದ ಪರಿಹಾರ ಧನ ವಿತರಿಸುವಂತೆ ಬಾಪು ಗೌಡ ಕೊಡಮನಹಳ್ಳಿ ಆಗ್ರಹ
ಅನಾವೃಷ್ಟಿಯಿಂದ ಹಾಳಾಗಿ ಹೋದ ಹತ್ತಿಬೆಳೆ ಕೂಡಲೇ ಜಿಲ್ಲಾಡಳಿತದ ವತಿಯಿಂದ ಪರಿಹಾರ ಧನ ವಿತರಿಸುವಂತೆ ಬಾಪು ಗೌಡ ಕೊಡಮನಹಳ್ಳಿ ಆಗ್ರಹ
ಯಡ್ರಾಮಿ ಸುದ್ದಿ
ಯಡ್ರಾಮಿ ತಾಲೂಕಿನ ವ್ಯಾಪ್ತಿಯಲ್ಲಿ ರೈತರು ಬೆಳೆದ ಬೆಳೆ ಕೈಗೆ ಬರದೇ ಹತ್ತಿ ಬೆಳೆಗೆ ಬೆಂಕಿ ರೋಗ ಮತ್ತು ತಾಮ್ರ ರೋಗ ಬಂದು ಬೆಳೆಗಳು ನಾಶವಾಗಿ ಹೋಗಿವೆ ಕೂಡಲೇ ಇದಕ್ಕೆ ಸಂಬಂಧಪಟ್ಟಂತಹ ತಾಲೂಕ ದಂಡಾಧಿಕಾರಿಗಳು ಹಾಗು ಕಂದಾಯ ಇಲಾಖೆಯ ಲೆಕ್ಕಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸಿ. ಬೆಳೆ ನಷ್ಟವಾದ ರೈತರಿಗೆ ಪರಿಹಾರ ಧನ ವಿತರಿಸುವಂತೆ ಸರಕಾರಕ್ಕೆ ವರದಿಯನ್ನು ಸಲ್ಲಿಸಬೇಕೆಂದು ಸಮಾಜ ಸೇವಕರಾದ ಬಾಪು ಗೌಡ ಎಂ ಕೊಡಮನಹಳ್ಳಿ ಬಿಳವಾರ ಅವರು ಈ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಹಾಗೂ ಸರ್ಕಾರಕ್ಕೆ ಆಗ್ರಹಿಸಿದ್ದಾರೆ ಹಲವಾರು ವರ್ಷಗಳಿಂದ ರಾಜ್ಯದಲ್ಲಿ ಅತಿವೃಷ್ಟಿಯಿಂದ ಹಾಗೂ ಅನಾವೃಷ್ಟಿಯಿಂದ ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೆ ಸಾಲದ ಸುಳಿಯಲ್ಲಿ ಸಿಲುಕಿ ರಾಜ್ಯದಂತಹ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅದೇ ರೀತಿಯಾಗಿ ಬಿಳವಾರ ಗ್ರಾಮದಲ್ಲಿಯೂ ಸಹಿತ ರೈತ ಮಲ್ಲಪ್ಪ ಕಂಬಳಿ ಅವರು ಸಾಲಬಾದೆಯಿಂದ ಕ್ರಿಮಿನಾಶಿಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗಾಗಲೇ ಸಾಲ ಸೋಲ ಮಾಡಿ ರೈತರು ಬೆಳೆದ ಬೆಳೆಯು ಕೈಗೆ ಬರದೆ ತಲೆಯ ಮೇಲೆ ಕೈ ಹೊತ್ತು ಕುಂತಿದ್ದಾರೆ.ಅತೀ ಶೀಘ್ರದಲ್ಲಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ಜಿಲ್ಲಾಡಳಿತ ಹಾಗೂ ನಮ್ಮನ್ನು ಆಳುವ ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸಬೇಕಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಬೆಳೆ ಪರಿಶೀಲನೆ ಮಾಡಿ ಸರಕಾರಕ್ಕೆ ವರದಿಯನ್ನು ಸಲ್ಲಿಸಿ ನಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಬೇಕು. ಹಾಗೂ ರಾಜ್ಯದ ರೈತರ ಹಿತ ದೃಷ್ಟಿಯಿಂದ ರೈತರ ಸಂಪೂರ್ಣ ಸಾಲವನ್ನು ಮನ್ನ ಮಾಡಬೇಕೆಂದು ಬಾಪು ಗೌಡ ಎಂ ಕೊಡಮನಹಳ್ಳಿಯವರು ಪತ್ರಿಕಾ ಪ್ರಕಟಣೆಯ ಮೂಲಕ ಜಿಲ್ಲಾಡಳಿತಕ್ಕೆ ಹಾಗೂ ಸರ್ಕಾರಕ್ಕೆ ಆಗ್ರಹಿಸಿದ್ದಾರೆ
ವರದಿ ಜೆಟ್ಟಪ್ಪ ಎಸ್ ಪೂಜಾರಿ