ಲೋಕ ಕಂಡ ಬೆಳಕು
ಲೋಕ ಕಂಡ ಬೆಳಕು
ಜಯದೇವಿ ಗಾಯಕವಾಡ ಅವರು ಕನ್ನಡ ನಾಡಿನ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರು. ಕಾವ್ಯ ಕ್ಷೇತ್ರದಲ್ಲಿ ಹಲವಾರು ಪ್ರಕಾರಗಳಲ್ಲಿ ಕೃಷಿ ಮಾಡಿದವರು. ತಾಂಕಾ, ರುಬಾಯಿ ಬರೆದ ಮೊದಲ ಲೇಖಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಲ್ಯಾಣ ಕರ್ನಾಟಕದ ಹಲವು ಪ್ರಥಮಗಳಿಗೆ ಇಟ್ಟ ಹೆಜ್ಜೆ ದಾರಿದೀಪವಾಗಿವೆ. ಪ್ರಸ್ತುತ ಚಿಟಗುಪ್ಪಾದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಪ್ರಾಧ್ಯಾಪರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
"ಲೋಕ ಕಂಡ ಬೆಳಕು" ಎಂಬ ಪುಸ್ತಕದಲ್ಲಿ ಇಪ್ಪತ್ತೊಂದು ಜನ ಶ್ರೇಷ್ಠ ಸಾಧಕರ ಕುರಿತು ಲೇಖನಗಳಿವೆ. ಅಧ್ಯಯನ ಪೂರ್ಣ ಹಾಗೂ ಅಷ್ಟೇ ಸರಳವಾಗಿ ತಿಳಿಯುವ ಅನೇಕ ಅಂಶಗಳು ಇಲ್ಲಿವೆ. ಆಯಾ ಸಾಧನೆಯ ಸಾಧಕರ ಕ್ಷೇತ್ರ ಅದರಲ್ಲೂ ದಲಿತ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ ಡಾ. ಬಿ.ಆರ್. ಅಂಬೇಡ್ಕರ್, ಶ್ರೀಮತಿ ರಮಾಬಾಯಿ ಅವರ ಎರಡು ಲೇಖನಗಳು ಗಮನ ಸೆಳೆಯುತ್ತವೆ. ಡಾ. ಸಿದ್ದಲಿಂಗಯ್ಯ, ಶ್ರೀ ಮುನಿ ವೆಂಕಟಪ್ಪ, ಡಾ. ಚೆನ್ನಣ್ಣ ವಾಲಿಕಾರರಂತಹ ಹಿರಿಯ ಹಾಗೂ ಶ್ರೀ ಶಿವರಾಮ ಮೋಘಾ, ಡಿ.ಜಿ. ಸಾಗರ ಅವರ ಹೋರಾಟದ ಕಥನ ಹೇಳುತ್ತವೆ. ವೈವಿಧ್ಯಮಯವಾದ ಬರಹಗಳು ಈ ಗ್ರಂಥದಲ್ಲಿ ಕಾಣಬಹುದಾಗಿದೆ.
ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2023ರಲ್ಲಿ ಪ್ರಕಟಗೊಂಡ ಈ ಕೃತಿಯಲ್ಲಿ 120 ಪುಟಗಳಿದ್ದು 120 ಬೆಲೆ ನಿಗದಿಪಡಿಸಲಾಗಿದೆ.
ಡಾ. ಶರಣಬಸಪ್ಪ ವಡ್ಡನಕೇರಿ