ಸಗರ ಪ.ಪಂ.ಹೋರಾಟಕ್ಕೆ ವೇದಿಕೆ ಸಜ್ಜು.

ಸಗರ ಪ.ಪಂ.ಹೋರಾಟಕ್ಕೆ ವೇದಿಕೆ ಸಜ್ಜು.

ಸಗರ ಪ.ಪಂ.ಹೋರಾಟಕ್ಕೆ ವೇದಿಕೆ ಸಜ್ಜು.

ಶಹಾಪುರ : ತಾಲೂಕಿನ ಸಗರ ಪಟ್ಟಣ ಪಂಚಾಯಿತಿಗಾಗಿ ಸಂಬಂಧಪಟ್ಟ ಅಧಿಕಾರಿಗಳಿಗೂ ಹಾಗೂ ರಾಜ್ಯ ಸರ್ಕಾರಕ್ಕೂ ಪತ್ರ ಬರೆದರು,ನಮಗೆ ಸೂಕ್ತ ನ್ಯಾಯ ದೊರಕಿಲ್ಲ, ಆದ್ದರಿಂದ ಸಗರ ಪ.ಪಂ.ಹೋರಾಟದ ವೇದಿಕೆ ಸಜ್ಜಾಗಿದೆ ಎಂದು ಯುವ ಮುಖಂಡ ಶ್ರೀಕಾಂತಗೌಡ ಸುಬೇದಾರ ಹೇಳಿದರು.

ಕಾನೂನಾತ್ಮಕವಾಗಿ ಪಟ್ಟಣ ಪಂಚಾಯಿತಿಗಾಗಿ ಬೇಕಾಗಿರುವ ಎಲ್ಲಾ ಮೂಲ ಸೌಲಭ್ಯಗಳು ಹೊಂದಿದ್ದರೂ ಕೂಡ,ವಿನಾಕಾರಣ ಉದ್ದೇಶ ಪೂರಕವಾಗಿ ಮೇಲ್ದರ್ಜೆಗೇರಿಸುವಲ್ಲಿ ಕೈ ಬಿಡಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿ ತಮ್ಮ ಆಕ್ರೋಶ ಹೊರ ಹಾಕಿದರು.

ಮುಂದೆ ಡಿಸೆಂಬರ್ ನಲ್ಲಿ ನಡೆಯುವ,ಚಳಿಗಾಲ ಅಧಿವೇಶನದಲ್ಲಿ,ಸಗರ ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೇರಿಸುವಂತೆ,ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಧ್ವನಿ ಎತ್ತಿ ಒತ್ತಾಯಿಸಬೇಕು ಎಂದು ವಿನಂತಿಸಿಕೊಂಡರು.

ಇಲ್ಲದಿದ್ದರೆ,ಮುಂಬರುವ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ಸಮಿತಿ ರಚಿಸಿ,ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ಈ ಮೂಲಕ ಎಚ್ಚರಿಕೆ ನೀಡಿದ್ದಾರೆ, ಅಲ್ಲದೆ ಮುಂಬರುವ ದಿನಗಳಲ್ಲಿ ಇದಕ್ಕೆ ಸಗರ ಗ್ರಾಮದ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ನುಡಿದರು