ಸಮಾನತೆಯ ಹರಿಕಾರ ಬಾಬಾ ಸಾಹೇಬರು - ಡಿ.ಪಿ.ಸಜ್ಜನ.

ಸಮಾನತೆಯ ಹರಿಕಾರ ಬಾಬಾ ಸಾಹೇಬರು - ಡಿ.ಪಿ.ಸಜ್ಜನ.
ಶಹಾಪುರ : ನಗರದ ಗೋಕುಲ ಪದವಿ ಮಹಾವಿದ್ಯಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ 134 ನೇ ಜಯಂತೋತ್ಸವ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಡಾ.ಬಿ.ಆರ್. ಅಂಬೇಡ್ಕರ್ ಅವರು
ಭಾರತ ದೇಶದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಬಡವರ, ದೀನದಲಿತರ, ಶೋಷಿತರ ಹಾಗೂ ಮಹಿಳೆಯರ ಧ್ವನಿಯಾದ, ಅಸ್ಪೃಶ್ಯತೆ ಹಾಗೂ ತಾರತಮ್ಯಗಳನ್ನು ಹೋಗಲಾಡಿಸಲು ಬಹಳಷ್ಟು ಶ್ರಮಿಸಿದರು, ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದಂದು ಅವರನ್ನು ಸ್ಮರಿಸೋಣ.ಮತ್ತು ಅವರ ಆದರ್ಶ ಗುಣಗಳನ್ನು ನಮ್ಮೇಲ್ಲರ ಜೀವನದಲ್ಲಿ ಅಳವಡಿಸಿಕೋಳ್ಳೊಣ ಎಂದು ಉಪನ್ಯಾಸಕರಾದ ಡಿ.ಪಿ.ಸಜ್ಜನ ಹೇಳಿದರು,
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಭುಗೌಡ,ಎನ್.ಎಸ್.ಎಸ್. ಅಧಿಕಾರಿ ಎಂ.ಡಿ.ಇಮ್ರಾನ್, ಉಪನ್ಯಾಸಕರಾದ ಧನರಾಜ ದೊಡ್ಮನಿ,ಶರಣಬಸಪ್ಪ, ಹಣಮಂತ,ಕಾರ್ತಿಕ,ಪರಶುರಾಮ, ಶಶಿರಾಜ , ಜ್ಯೋತಿ ಮತ್ತು ಸಿಬ್ಬಂದಿ ಅಡಿವೆಪ್ಪ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ ಡಾ. ಅವಿನಾಶ S ದೇವನೂರ