ಪುಸ್ತಕಗಳ ರಕ್ಷಣೆ ಗಾಗಿ ಭವ್ಯವಾದ ಮನೆಯನ್ನೆ ಕಟ್ಟಿಸಿದ್ದು ಡಾ. ಅಂಬೇಡ್ಕರ :.. ಪೂಜ್ಯ ಭಂತೇಜೀ

ಪುಸ್ತಕಗಳ ರಕ್ಷಣೆ ಗಾಗಿ ಭವ್ಯವಾದ ಮನೆಯನ್ನೆ ಕಟ್ಟಿಸಿದ್ದು ಡಾ. ಅಂಬೇಡ್ಕರ :.. ಪೂಜ್ಯ ಭಂತೇಜೀ

|ಡಾ.ಅಂಬೇಡ್ಕರ ರವರ 134ನೇ ಜಯಂತ್ಯೋತ್ಸವ ಕಾರ್ಯಕ್ರಮ|

ಪುಸ್ತಕಗಳ ರಕ್ಷಣೆ ಗಾಗಿ ಭವ್ಯವಾದ ಮನೆಯನ್ನೆ ಕಟ್ಟಿಸಿದ್ದು ಡಾ. ಅಂಬೇಡ್ಕರ :.. ಪೂಜ್ಯ ಭಂತೇಜೀ. 

ಶಹಾಬಾದ : -ದೇಶದ ಮಹಿಳೆಯರನ್ನ ಸಮ ಸಮಾನವಾಗಿ ಕಂಡರೆ ಮಾತ್ರ ಈ ದೇಶ ಪ್ರಬುದ್ಧ ಭಾರತ ದಡೆಗೆ ಕೊಂಡೊಯ್ಯಲು ಸಾಧ್ಯ ಎಂದು ಬೀದರ ಅಣದೂರಿನ ಬೌದ್ಧ ವಿಹಾರದ ಪೂಜ್ಯ ಬಂತೇ ವರಜ್ಯೋತಿ ಹೇಳಿದರು. 

ಅವರು ಅಪ್ಪರ ಮಡ್ಡಿಯ ಡಾ. ಅಂಬೇಡ್ಕರ ಜಯಂತ್ಯೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ಬೋಧಿಸಿದರು. 

52 ಸಾವಿರ ಪುಸ್ತಕಗಳ ರಕ್ಷಣೆ ಗಾಗಿ ಒಂದು ಭವ್ಯವಾದ ಮನೆಯನ್ನೆ ಕಟ್ಟಿಸಿದ್ದರು, ಬಾಬಾಸಾಹೇಬರು ರಚಿಸಿದ ಸಂವಿಧಾನದಲ್ಲಿ ದೇಶದ ಪ್ರತಿಯೊಬ್ಬ ನಾಗಕರಿಗೆ ಸಮಾನವಾದ ಹಕ್ಕನ್ನು ನೀಡಿದ್ದಾರೆ ಎಂದರು. 

ಉದ್ಯೋಗ ಪುರುಷ ಲಕ್ಷಣ ಎಂಬ ಮಾತನ್ನು ಧಿಕ್ಕರಿಸಿ ಮಹಿಳೆಯರಿಗೆ ಸಮಾನ ವೇತನ, ಸಮಾನ ಹಕ್ಕು ನೀಡಿದವರು ಡಾ. ಅಂಬೇಡ್ಕರ ಎಂದರು. 

ಡಾ. ಅಂಬೇಡ್ಕರ ರವರ 134ನೇ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಶಂಕರ ಅಳೋಳ್ಳಿ, ದಲಿತ ಮುಖಂಡ ಬಸವರಾಜ ಮಯೂರ ಮತ್ತು ರಾಜು ಕಾಳನೂರ ಮಾತನಾಡಿದರು. 

ಮುಖ್ಯ ಗುರುಗಳಾದ ಶಿವಲಿಂಗಪ್ಪ ಹೆಬ್ಬಾಳಕರ ರವರು ವಿಶೇಷ ಉಪನ್ಯಾಸ ನೀಡಿದರು. 

ವೇದಿಕೆ ಮೇಲೆ ಯುವ ನಾಯಕ ಶರಣು ಕಪನೂರ, ನಗರ ಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕಾಶೀನಾಥ ಜೋಗಿ, ಭಂಕೂರ ಗ್ರಾ. ಪಂ ಮಾಜಿ ಉಪಾಧ್ಯಕ್ಷ ಯಶ್ವಂತ ಚಹ್ವಾಣ, ಉಪನ್ಯಾಸಕ ಪ್ರವೀಣ ರಾಜನ, ಪತ್ರಕರ್ತ ಲೋಹಿತ ಕಟ್ಟಿ, ಬಸವರಾಜ ಕಟ್ಟಿಮನಿ, ರಮೇಶ ಕಾಂಬಳೆ, ಅಜೀಮೋದ್ದಿನ ಉಸ್ತಾದ, ಶಿವಾಜಿ ಪವಾರ, ಶಾಮ ಗೌಳಿ, ಮಲ್ಲಪ್ಪ ಪೇಠ ಶಿರೂರ ಇದ್ದರು. 

ಡಾ. ಅಂಬೇಡ್ಕರ ರವರ 134ನೇ ಜಯಂತ್ಯೋತ್ಸವ ಸಮಿತಿಯ ಗೌರವಾಧ್ಯಕ್ಷ ಸುರೇಶ ಮೆಂಗನ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಉದಯಕುಮಾರ ಬಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿವರಾಜ ಕಟ್ಟಿಮನಿ ನಿರೂಪಿಸಿದರು, ಶಿವರಾಮ ಇಂಗಿನಕಲ್ ಸ್ವಾಗತಿಸಿದರು, ಬೃಂದಾ ಕಾಳನೂರ ವಂದಿಸಿದರು. 

ಸಮಾರಂಭದಲ್ಲಿ ಸಾಬಣ್ಣ ನಾಟೀಕಾರ, ಶರಣು ನಾಟೀಕಾರ, ರಾಮು ಕಟ್ಟಿಮನಿ, ರವಿ ನಾಗನಳ್ಳಿ, ಪ್ರವೀಣ ಬಣಮೀಕರ, ರಾಜು ನಾಟೀಕಾರ, ಪರಶುರಾಮ ಚಲವಾದಿ, ಶಿವಲಿಂಗಪ್ಪ ನಾಟೀಕಾರ, ರೇವಣಸಿದ್ದ, 

ದಿಲೀಪ ಸಾಗರ, ಉದಯ ಯನಗುಂಟಿ, ರಾಹುಲ್ ಕಾಳನೂರ, ಪ್ರವೀಣ ಭಂಡಾರಿ, ರವಿ ಕಟ್ಟಿಮನಿ, ವೈಜನಾಥ, ಆನಂದ ಯನಗುಂಟಿ, ಪ್ರದೀಪ ಭಂಡಾರಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಯುವಕರು ಮತ್ತು ಮಹಿಳೆಯರು ಉಪಸ್ಥಿತರಿದ್ದರು. 

ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಲೇಖನಿ ಸಾಮಗ್ರಿ ವಿತರಣೆ :.. 

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಕು. ಸಾಕ್ಷಿ ಬಸವರಾಜ, ಕು. ಜ್ಯೋತಿ ದಶರಥ, ಕು. ಪಾರ್ವತಿ ರಾಜು, ಪ್ರಶಾಂತ ಮಲ್ಲಿಕಾರ್ಜುನ, ಮೋಹಿತ ಷಣ್ಮುಖ ರವರಿಗೆ ಅಪ್ಪರ ಮಡ್ಡಿ ಡಾ. ಅಂಬೇಡ್ಕರ ಜಯಂತ್ಯೋತ್ಸವ ಸಮಿತಿ ವತಿಯಿಂದ ಸ್ಮರಣ ಕಾಣಿಕೆ ಮತ್ತು ಪದಕ ಹಾಗೂ ಲೇಖನ ಸಾಮಗ್ರಿಗಳನ್ನು ನೀಡಿ ಗೌರವಿಸಿ, ಸನ್ಮಾನಿಸಲಾಯಿತು. 

ಮತ್ತು ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.