ಚರಂತೇಶ್ವರ ಶ್ರೀಗಳ ಪಟ್ಟಾಧಿಕಾರ, 18ನೇ ಜಾತ್ರೆ ನಿಮಿತ್ತ ಪುರಾಣ ಇಂದಿನಿಂದ :..

ಚರಂತೇಶ್ವರ ಶ್ರೀಗಳ ಪಟ್ಟಾಧಿಕಾರ,
18ನೇ ಜಾತ್ರೆ ನಿಮಿತ್ತ ಪುರಾಣ ಇಂದಿನಿಂದ :..
ಶಹಾಬಾದ : - ತಾಲೂಕಿನ ಸುಕ್ಷೇತ್ರ ತೊನಸನಳ್ಳಿ(ಎಸ್)ನ ಶ್ರೀಮದ್ ರಂಭಾಪುರ ಶಾಖಾ ಮಠವಾದ ಶ್ರೀಗುರು ಸಂಗಮೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರ ಪಟ್ಟಾಧಿಕಾರ ವರ್ಧಿಂತಿ ಮಹೋತ್ಸವ ಹಾಗೂ 18ನೇ ಜಾತ್ರಾ ಮಹೋತ್ಸವ ನಿಮಿತ್ತ ಬುಧವಾರ ಸಂಜೆಯಿಂದ ಪುರಾಣ ಪ್ರವಚನ ನಡೆಯಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಪೀಠಾಧಿಪತಿ ರೇವಣಿಸಿದ್ದ ಚರಂತೇಶ್ವರ ಶ್ರೀಗಳ ದಿವ್ಯ ದಿಗ್ದರ್ಶನದಲ್ಲಿ ಎಪ್ರಿಲ್ 16 ರಿಂದ 3೦ ವರೆಗೆ ಶ್ರೀ ವರದಾನಿ ಗುಡ್ಡಾಪುರದ ದಾನಮ್ಮ ದೇವಿ ಮಹಾ ಪುರಾಣ ನಡೆಯಲಿದ್ದು, ಪುರಾಣ ಉದ್ಘಾಟನೆಯ ಸಮ್ಮುಖವನ್ನು ಪೇಠಶಿರೂರನ ಸಿದ್ದಲಿಂಗ ಮಹಾಸ್ವಾಮಿಗಳು, ಯರಗೋಳ ಸಂಗಮೇಶ ದೇವರು, ತೊನಸನಳ್ಳಿಯ ಕೊಟ್ಟುರೇಶ್ವರ ಶರಣರು ವಹಿಸುವರು.
ಉದ್ಯಮಿ ಅನೀಲಕುಮಾರ ಮರಗೋಳ ಉದ್ಘಾಟನೆ ನೇರವೇರಿಸಲಿದ್ದಾರೆ. ಅತಿಥಿಗಳಾಗಿ ನಿಂಗಣ್ಣಗೌಡ ಮಾಲಿ ಪಾಟೀಲ, ಮಲ್ಲಿಕಾರ್ಜುನ ಗೊಳೇದ, ಸಂಗಣ್ಣಗೌಡ ರಾಮಶಟ್ಟಿ, ಅಯ್ಯಣ್ಣ ಬಂದಳ್ಳಿ, ಶಿವಲಿಂಗಪ್ಪ ಗೊಳೇದ, ಬಸವರಾಜ ಬಮಶಟ್ಟಿ, ಶರಣಬಸಪ್ಪ ಕುಂಬಾರ, ಮಲ್ಲಿಕಾರ್ಜುನ ಇಂಗಿನ ಉಪಸ್ಥಿತರಿರುವರು.
ತೋಟಯ್ಯ ಶಾಸ್ತ್ರಿಗಳು ಪುರಾಣ ಪ್ರವಚನ ನೀಡಲಿದ್ದು, ಕಲ್ಲಯ್ಯ ಶಾಸ್ತ್ರಿಗಳು ಪಡದಾಳ ಸಂಗೀತ ಸೇವೆ ಸಲ್ಲಿಸಲಿದ್ದಾರೆ, ಮಹಾಂತೇಶ ಸುತಾರ ತಬಲಾ ಸಾಥ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.