ಜಾರಿಗೊಂಡ ವಕ್ಫ್ ಬಿಲ್ ರದ್ದುಪಡಿಸುವಂತೆ ಹಾಗೂ ಬಸವನಗೌಡ ಪಾಟೀಲ ವಿರುದ್ಧ ಕಾನೂನು ಕ್ರಮಕ್ಕಾಗಿ ಚಿಂಚೋಳಿ ಮುಸ್ಲಿಂ ಒಕ್ಕೂಟ ಸಮಿತಿಗಳಿಂದ ಪ್ರತಿಭಟನೆ

ಜಾರಿಗೊಂಡ ವಕ್ಫ್ ಬಿಲ್ ರದ್ದುಪಡಿಸುವಂತೆ ಹಾಗೂ ಬಸವನಗೌಡ ಪಾಟೀಲ ವಿರುದ್ಧ ಕಾನೂನು ಕ್ರಮಕ್ಕಾಗಿ 

ಚಿಂಚೋಳಿ ಮುಸ್ಲಿಂ ಒಕ್ಕೂಟ ಸಮಿತಿಗಳಿಂದ ಪ್ರತಿಭಟನೆ 

ಚಿಂಚೋಳಿ : ಬಿಜೆಪಿ ಎನ್ಡಿಎ ಸರ್ಕಾರವು ಸಂಸತ್ತಿನಲ್ಲಿ ಅಂಗೀಕರಿಸಿದ ವಕ್ಫ್ ತಿದ್ದುಪಡಿ ಮಸೂದೆ 2025 ಪಕ್ಷಪಾತ, ಸಂವಿಧಾನಬಾಹಿರ ಮತ್ತು ಮುಸ್ಲಿಮರ ವಿರುದ್ಧ ತಾರತಮ್ಯದಿಂದ ಕೂಡಿದೆ ಹಾಗೂ ಪ್ರವಾದಿ ಹಜರತ್ ಮಹ್ಮದ್ ಮುಸ್ತಫಾ ಸಲ್ಲಲ್ಲಾಹು ಅವರ ಕುರಿತು ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ, ಮುಸ್ಲಿಂ ಸಮಿತಿ ಹಾಗೂ ಮುಸ್ಲಿಂ ಯೂತ್, ಜಮೈತುಲಾ ಉಲ್ಮಾ ಮತ್ತು ಜಮತ್ ಇಸ್ಲಾಮಿ ಸಮಿತಿ ಒಕ್ಕೂಟವತಿಯಿಂದ ಗಡಿ ಮಜೀದ್ ದಿಂದ ಬಸ್ ಡಿಪೋ ಅವರೆಗೆ ಬೃಹತ್ ಪ್ರತಿಭಟನೆ ನಡೆಸಿ, ಚಿಂಚೋಳಿ ತಹಸೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಹಾಗೂ ರಾಜ್ಯದ ಮುಖ್ಯಮಂತ್ರಿಗಳಿ ಪತ್ಯೇಕ ಮನವಿ ಪತ್ರ ಸಲ್ಲಿಸಿ, ಒತ್ತಾಯಿಸಿದರು. 

ಬಳಿಕ ಮಾತನಾಡಿದ ಪ್ರತಿಭಟನೆಕಾರರು, ಕೇಂದ್ರ ಸರಕಾರದ ವಕ್ಫ್ ಕಾನೂನು ರದ್ದುಪಡಿಸಲು ಅಂಗೀಕರಿಸಲಾದ ವಕ್ಫ್ ಮಸೂದೆಯು ಆರ್ಟಿಕಲ್ 14, 15, 25, 26 ಮತ್ತು 29 ರಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ. ಮುಸ್ಲಿಮರ ಇಚ್ಛೆ ಮತ್ತು ಇಚ್ಛೆಗೆ ವಿರುದ್ಧವಾಗಿ ವಕ್ಫ್ ಆಸ್ತಿಗಳನ್ನು ಕಸಿದುಕೊಳ್ಳುವ ದುರುದ್ದೇಶದಿಂದ ಈ ಮಸೂದೆಯನ್ನು ಅಂಗಿಕರಿಸಿ ಜಾರಿ ಮಾಡಲಾಗಿದೆ. ವಕ್ಫ್ ಆಸ್ತಿಗಳ ವಿರುದ್ಧ ಸುಳ್ಳು ಪ್ರಚಾರ ಮಾಡುವ ಮೂಲಕ ಮಸೂದೆಯನ್ನು ಅಂಗೀಕರಿಸಿ, ನ್ಯಾಯ ಮತ್ತು ಕಾನೂನಿನ ತತ್ವದ ವಿರುದ್ಧವಾಗಿದ್ದು, ಭಾರತೀಯ ಮುಸ್ಲಿಂರು ಒಪ್ಪುವುದಿಲ್ಲ. ಈ ಕೂಡಲೇ ಅಂಗೀಕರಿಸಲಾದ ವಕ್ಫ್ ಮಸೂದೆಯನ್ನು ಹಿಂಪಡೆದು ರದ್ದುಗೊಳಿಸಬೇಕೆಂದು ಮುಸ್ಲಿಂ ಸಮಿತಿಗಳ ಒಕ್ಕೂಟ ಆಗ್ರಹಿಸಿ, ಒತ್ತಾಯಿಸಿದ್ದಾರೆ.  

ಪ್ರವಾದಿ ಹಜರತ್ ಮಹ್ಮದ್ ಮುಸ್ತಫಾ ಸಲ್ಲಲ್ಲಾಹು ಅವರ ಕುರಿತು ಅವಹೇಳನಕಾರಿ ಹೇಳಿಕೆಗೆ ಖಂಡನೆ : 

ಇದೇ ಏಪ್ರೀಲ್ 7 ರಂದು ಹುಬ್ಬಳ್ಳಿಯಲ್ಲಿ ರಾಮನವಮಿಯ ಮುನ್ನಾದಿನದಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಪ್ರವಾದಿ ಮುಹಮ್ಮದ್ ಅವರಿಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದನ್ನು ಮುಸ್ಲಿಂ ಸಮುದಾಯಕ್ಕೆ ನೋವುಂಟು ಮಾಡಿದೆ. ಅವರ ಹೇಳಿಕೆಗಳಿಂದ ಕೋಮು ಸಾಮರಸ್ಯವನ್ನು ಭಂಗಗೊಳಿಸಲು ಪ್ರಯತ್ನಿಸಿದ್ದಾರೆ. ದೇಶದಲ್ಲಿ ಹಿಂದು- ಮುಸ್ಲಿಂರು ಸಾಮರಸ್ಯದಿಂದ ಬದುಕಿತ್ತಿದ್ದಾರೆ. ಯತ್ನಾಳವರ ಮಾನಹಾನಿ ಹೇಳಿಕೆಯು ಸಾಮರಸ್ಯ ಕದಡುವ ರೀತಿಯಲ್ಲಿ ನಿಂದಿಸಿರುವುದು ಸಮುದಾಯಕ್ಕೆ ನೋವುಂಟು ಮಾಡಿದೆ. ಸರಕಾರ ಯತ್ನಾಳವರ ಮೇಲೆ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. 

ಮುಸ್ಲಿಂ ಸಮುದಾಯ ಪ್ರಮುಖರಾದ ಬಡಿ ದರ್ಗಾ ಸಾಹೇಬ ಅಕ್ಬರ್ ಹುಸೇನಿ ಸಾಬ್, ಅಬ್ದುಲ್ ಬಾಷಿದ್, ಅನ್ವರ ಕತೀಬ್, ಸೈಯದ್ ಶಬೀರ್, ಮತೀನ ಸೌದಾಗರ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದರು.